ಕಲಬುರಗಿ | ಮೆಟ್ರೋ ನಿಲ್ದಾಣಗಳಲ್ಲಿ ನಂದಿನಿ ಉತ್ಪನ್ನಗಳ ಮಳಿಗೆ ತೆರೆಯಲು ಆದ್ಯತೆ ನೀಡಿ: ಕೆ.ನೀಲಾ

Date:

Advertisements

ಕರ್ನಾಟಕದ ನಂದಿನಿ ಹಾಲು ಎಲ್ಲ ರೀತಿಯಲ್ಲಿಯೂ ಉತ್ತಮ ಗುಣಮಟ್ಟದ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸಿ ಮಾರುತ್ತ ಜನಮನ್ನಣೆ‌ ಗಳಿಸಿದ್ದು, ಬೆಂಗಳೂರು ಮೆಟ್ರೋ ರೈಲು ನಿಲ್ದಾಣಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ತೆರೆಯಲು ಆದ್ಯತೆ ನೀಡಬೇಕೆಂದು ಸಿಪಿಎಂ ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಅಭಿಪ್ರಾಯ ವ್ಯಕ್ತಪಡಿಸಿದರು.

ʼಬಹುತೇಕ ಸಣ್ಣ ಮತ್ತು ಅತಿ ಸಣ್ಣ ಹೈನುಗಾರರಿಂದ ಪ್ರತಿದಿನ ಸುಮಾರು 1 ಕೋಟಿ ಲೀಟರ್ ಗಿಂತ ಹೆಚ್ಚು ಹಾಲು ಸಂಗ್ರಹಣೆ ಮಾಡುತ್ತಿರುವ ಕೆಎಂಎಫ್ ಬಹುತೇಕ ಮಾರುಕಟ್ಟೆಗೆ ಬೆಂಗಳೂರು ಮಹಾನಗರವನ್ನೇ ಆಶ್ರಯಿಸಿದೆ. ರೈತರ ಸಹಕಾರಿಯಾಗಿರುವ ನಂದಿನಿಯನ್ನು ಬೆಳೆಸುವುದು ಹಾಗೂ ಉಳಿಸುವುದು ಸರ್ಕಾರದ ಆದ್ಯತೆಯಾಗಬೇಕು. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಲ್ಲಿ ಒಂದಾದ ಶಾಲಾ ಮಕ್ಕಳಿಗೆ ಹಾಲು ವಿತರಣೆಗೆ ಸರಬರಾಜು ಆಗುತ್ತಿರುವುದು ನಂದಿನಿ ಹಾಲು ಆಗಿದೆ. ಸಂಗ್ರಹವಾಗುವ ಎಲ್ಲ ಹಾಲು ಮಾರಾಟವಾಗುವುದಿಲ್ಲ. ಹಲವು ಉಪ‌ ಉತ್ಪನ್ನಗಳನ್ನು ತಯಾರಿಸಿದ ಮೇಲೂ ಹಾಲು ಹೆಚ್ಚುವರಿಯಾಗಿ ಉಳಿಯುತ್ತದೆʼ ಎಂದು ಹೇಳಿದರು.

ʼಪ್ರತಿಯೊಂದು ರಾಜ್ಯವು ತನ್ನದೇ ಆದ ಸಹಕಾರಿ ಒಕ್ಕೂಟವನ್ನು ಹೊಂದಿದ್ದು, ಕೆಲವು ರಾಜ್ಯಗಳು ಕೊರತೆಯನ್ನು ಕೆಲವು ರಾಜ್ಯಗಳು ಮಿಗತೆಯನ್ನು ಹೊಂದಿವೆ. ಇಂತಹ ಸಂದರ್ಭದಲ್ಲಿ ಪರಸ್ಪರರ ಮಾರುಕಟ್ಟೆ ಕಸಿಯುವ ಆನಾರೋಗ್ಯಕರ ಪೈಪೋಟಿ ನಿವಾರಿಸಲು ಈ ಹಿಂದೆ ಎನ್‌ಡಿಡಿಬಿ ಮೂಲಕ ಹೆಚ್ಚುವರಿ ಹಾಲು ಲಾಭ ಇರುವ ಸಹಕಾರಿ ಒಕ್ಕೂಟಗಳಿಂದ ಪಡೆದು ಕೊರತೆ ಇರುವ ರಾಜ್ಯಗಳಲ್ಲಿ ಆ ರಾಜ್ಯದ ಬ್ರಾಂಡ್ ಹೆಸರಿನಲ್ಲೇ ಮಾರಾಟ ಮಾಡಲು ಕ್ರಮ ವಹಿಸಲಾಗುತ್ತಿತ್ತು .ಆ ಮೂಲಕ ರಾಜ್ಯಗಳ ಸಹಕಾರಿ ಒಕ್ಕೂಟಗಳು ಪರಸ್ಪರ ಆನಾರೋಗ್ಯಕರ ಪೈಪೋಟಿ ಗೆ ಅವಕಾಶ ಇಲ್ಲದಂತೆ ನೋಡಿಕೊಳ್ಳಲಾಗುತ್ತಿತ್ತುʼ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisements

ʼಹಿಂದಿನ ಚುನಾವಣೆಯ ಸಂದರ್ಭದಲ್ಲಿ ಸಹಕಾರಿ ವಲಯಕ್ಕೆ ಅಮುಲ್ ಲಗ್ಗೆ ಇಡುತ್ತದೆ ಎಂಬುದು ಕೂಡಾ ಚರ್ಚೆಯ ವಿಷಯವಾಗಿತ್ತು. ಈಗ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಕೆಎಂಎಫ್‌ನ ನೂತನ ನಿರ್ದೇಶಕರಾಗಿದ್ದು, ಮುಂದೆ
ಅಧ್ಯಕ್ಷರಾಗಲು ಎಲ್ಲಾ ತಯಾರಿ ನಡೆಸಿರುವ ಸಂದರ್ಭದಲ್ಲಿ ಅಮುಲ್ ಉತ್ಪನ್ನಗಳನ್ನು ಮೆಟ್ರೋ ನಿಲ್ದಾಣಗಳು ಅಥವಾ ಇತರ ಸರಕಾರಿ ಒಡೆತನದ ಜಾಗಗಳಲ್ಲಿ ಮಾರಾಟಕ್ಕೆ ಅನುಕೂಲ ಮಾಡಿಕೊಡುವುದು ಎಷ್ಟು ಸರಿ? ಟೆಂಡರ್ ಪ್ರಕ್ರಿಯೆಯಲ್ಲಿ ಅಮುಲ್ ಮಾತ್ರ ಭಾಗವಹಿಸಿತ್ತು ಕೆಎಂಎಫ್‌ ಭಾಗವಹಿಸಿಲ್ಲ ಎಂದರೆ ಅದರ ಹೊಣೆ ಯಾರದು? ಟೆಂಡರ್ ಹಾಕದಿರಲು ಕಾರಣವೇನೆಂದು ಬಹಿರಂಗ ಪಡಿಸಬೇಕುʼ ಎಂದು ಆಗ್ರಹಿಸಿದರು.

ಇದನ್ನೂ ಓದಿ : ಕಲಬುರಗಿ | ಕರ್ತವ್ಯ ಲೋಪ ಆರೋಪ : ಪ್ರಭಾರ ಮುಖ್ಯಶಿಕ್ಷಕ ಅಮಾನತು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

ತುಮಕೂರು | ಒಳ ಮೀಸಲಾತಿ : ಅಲೆಮಾರಿಗಳಿಗೆ ನ್ಯಾಯ ಸಮ್ಮತ ಪಾಲು ನೀಡಲು ಒತ್ತಾಯ

ಒಳ ಮೀಸಲಾತಿ ಕಲ್ಪಿಸುವಲ್ಲಿ ಸೂಕ್ಷ್ಮ, ಅತಿಸೂಕ್ಷ್ಮ ಅಲೆಮಾರಿಯ 59 ಸಮುದಾಯಗಳಿಗೆ ಆಗಿರುವ...

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

Download Eedina App Android / iOS

X