ಪಿಎಸ್ಐ ನೇಮಕಾತಿ ಹಗರಣವನ್ನು ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆಗೆ ವಹಿಸಿರುವ ಕ್ರಮ ಖಂಡಿಸಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ದ್ವೇಷದ ರಾಜಕಾರಣ ಎಂದು ಕಿಡಿಕಾರಿದ್ದರು. ಬೊಮ್ಮಾಯಿ ಮಾತಿಗೆ ಕಾಂಗ್ರೆಸ್ ಟ್ವೀಟ್ ಮೂಲಕ ತಿರಿಗೇಟು ನೀಡಿದೆ.
“ಹಗರಣಗಳನ್ನು ತನಿಖೆಗೆ ವಹಿಸಿದರೆ ಬಿಜೆಪಿಗರಿಗೇಕೆ ಆಕ್ರೋಶ ಉಂಟಾಗುತ್ತದೆ? ಸತ್ಯ ಹರಿಶ್ಚಂದ್ರನ ವಂಶದವರು ಎಂದುಕೊಳ್ಳುವ ಬಿಜೆಪಿಗರಿಗೆ ನ್ಯಾಯಾಂಗ ತನಿಖೆಗೆ ವಹಿಸಿದರೆ ಆತಂಕವೇಕೆ” ಎಂದು ಪ್ರಶ್ನಿಸಿದೆ.
“ಬಸವರಾಜ ಬೊಮ್ಮಾಯಿ ಅವರೇ, ಹಗರಣವೊಂದರ ಪ್ರಾಮಾಣಿಕ ತನಿಖೆಯಾಗಬೇಕು ಎಂದು ಬಯಸುವುದು ದ್ವೇಷ ರಾಜಕಾರಣ ಆಗುವುದು ಹೇಗೆ? ತಾವೇ ಮುಖ್ಯ ಆರೋಪಿ ಎಂಬಂತೆ ಆತಂಕ ಪಡುತ್ತಿರುವುದೇಕೆ?” ಎಂದು ಕುಟುಕಿದೆ.