ಬಿಹಾರ | 40 ಅಡಿ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಮಗುವಿನ ರಕ್ಷಣೆ

Date:

ಬಿಹಾರದ ನಳಂದ ಜಿಲ್ಲೆಯ ಕುಲ್ ಗ್ರಾಮದಲ್ಲಿ 40 ಅಡಿ ಕೊಳವೆ ಬಾವಿಗೆ ಬಿದ್ದಿದ್ದ ಮಗುವನ್ನು ಭಾನುವಾರ (ಜುಲೈ 23) ಸಂಜೆ ರಕ್ಷಿಸಲಾಗಿದೆ.

ಸ್ಥಳೀಯ ಪೊಲೀಸರೊಂದಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ನೇತೃತ್ವದಲ್ಲಿ ಐದು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಮಗುವನ್ನು ರಕ್ಷಿಸಲಾಗಿದೆ.

ಕೊಳವೆ ಬಾವಿಗೆ ಬಿದ್ದ ಮಗುವನ್ನು ಶಿವಂ ಕುಮಾರ್‌ ಎಂದು ಗುರುತಿಸಲಾಗಿದೆ. ರೈತರೊಬ್ಬರಿಗೆ ಸೇರಿದ ಕೊಳವೆ ಬಾವಿ ಇದಾಗಿದ್ದು, ಇದನ್ನು ಮುಚ್ಚಿರಲಿಲ್ಲ. ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಈ ಮಗು ಇಂದು ಮಧ್ಯಾಹ್ನ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಜಮೀನಿನ ಮಾಲೀಕ ಕೆಲವು ವರ್ಷಗಳ ಹಿಂದೆ ಕೊಳವೆ ಬಾವಿ ಕೊರೆಸಿದ್ದು, ನೀರು ಸಿಗದೆ ವಿಫಲವಾಗಿತ್ತು. ಆದರೆ ಇದನ್ನು ಮುಚ್ಚಿರಲಿಲ್ಲ. ಈ ಕಾರಣದಿಂದ ಮಗು ಕೊಳವೆ ಬಾವಿಗೆ ಬಿದ್ದಿದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ನಳಂದದ ನಗರ ಪಂಚಾಯತ್ ಉಪಾಧ್ಯಕ್ಷ ನಳಿನ್ ಮೌರ್ಯ ತಿಳಿಸಿದ್ದಾರೆ.

ಮಗು ಬಿದ್ದ ನಂತರ ಕೊಳವೆ ಬಾವಿಗೆ ಆಮ್ಲಜನಕ ತಲುಪಿಸಲಾಗಿತ್ತು ಹಾಗೂ ಜೆಸಿಬಿ ಯಂತ್ರಗಳನ್ನು ಬಳಸಲಾಗಿತ್ತು. ಐದು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಮಗುವನ್ನು ರಕ್ಷಿಸಲಾಗಿದ್ದು,ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎನ್‌ಡಿಆರ್‌ಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರಿಯಾಣ ಐಎನ್‌ಎಲ್‌ಡಿ ಅಧ್ಯಕ್ಷನ ಗುಂಡಿಕ್ಕಿ ಕೊಲೆ

ಅಪರಿಚಿತ ದುಷ್ಕರ್ಮಿಗಳು ಭಾರತ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ಹರಿಯಾಣ ಘಟಕದ ಅಧ್ಯಕ್ಷ...

ರಷ್ಯಾ | ಉಕ್ರೇನ್ ಸೇನೆ ದಾಳಿಯಿಂದ ಭಾರತೀಯ ಸಾವು; ದುರಂತ ಪ್ರತ್ಯಕ್ಷ ಕಂಡ ಕರ್ನಾಟಕದ ನಿವಾಸಿ

ರಷ್ಯಾ – ಉಕ್ರೇನ್ ಗಡಿಯಲ್ಲಿನ ದೊನೆಸ್ಟಕ್‌ನಲ್ಲಿ ಉಕ್ರೇನ್ ಕೈಗೊಂಡ ಡ್ರೋನ್ ದಾಳಿಯಲ್ಲಿ...

ನ್ಯಾಯ ಯಾತ್ರೆ | ಸೀಟು ಹಂಚಿಕೆಯಾದ ಬೆನ್ನಲ್ಲೇ ರಾಹುಲ್ ಜೊತೆ ಹೆಜ್ಜೆ ಹಾಕಿದ ಅಖಿಲೇಶ್

ಉತ್ತರ ಪ್ರದೇಶದ ಆಗ್ರಾ ಮೂಲಕ ಸಾಗುತ್ತಿರುವ ರಾಹುಲ್ ಗಾಂಧಿ ನೇತೃತ್ವದ ಭಾರತ್...

ಜೆ-ಕೆಯಲ್ಲಿ ಚುನಾವಣೆಗಳನ್ನು ಸುಪ್ರೀಂ ಕೋರ್ಟ್‌ ಘೋಷಿಸಬೇಕಿರೋದು ನಾಚಿಕೆಗೇಡಿನ ಸಂಗತಿ: ಒಮರ್ ಅಬ್ದುಲ್ಲಾ

ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಕುರಿತು ಚುನಾವಣಾ ಆಯೋಗಕ್ಕಿಂತ ಹೆಚ್ಚಾಗಿ ಸುಪ್ರೀಂ...