ತೀರ್ಥಹಳ್ಳಿ, ತಾಲ್ಲೂಕಿನ ಮೇಲಿನಕುರುವಳ್ಳಿ ಗ್ರಾಮದಲ್ಲಿ ಶುಕ್ರವಾರ ದಿನ ಸಂಜೆ ಆಟೋ ರಿಕ್ಷಾ ಮತ್ತು ಮಾರುತಿ ಸುಜುಕಿ ಕ್ಯಾರಿ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಎರಡು ವಾನಗಳು ಜಖಂಗೊಂಡು ರಸ್ತೆ ಬದಿಗೆ ಹೋಗಿ ಬಿದ್ದಿವೆ.
ಮೇಲಿನಕುರುವಳ್ಳಿಯ ರೇಷ್ಮೆ ಫಾರಂ ರಸ್ತೆಯ ಎದುರು ಭಾಗದಲ್ಲಿ ಈ ಘಟನೆ ನಡೆದಿದೆ ಕಟ್ಟೆಹಕ್ಲು ಭಾಗದಿಂದ ವೇಗವಾಗಿ ಬರುತ್ತಿದ್ದ ಶಾಮಿಯಾನ ಸಾಗಿಸುವ ವಾಹನವು ರಸ್ತೆ ಬದಿಯಲ್ಲಿ ನಿಂತಿದ್ದ ಆಟೋವೊಂದನ್ನು ಹಿಂದಿಕ್ಕುವ ಪ್ರಯತ್ನದಲ್ಲಿ ನಿಯಂತ್ರಣ ಕಳೆದುಕೊಂಡಿದೆ.
ನಿಯಂತ್ರಣ ತಪ್ಪಿದ ವಾಹನ ನೇರವಾಗಿ ಆಟೋಗೆ ಡಿಕ್ಕಿ ಹೊಡೆದು ನಂತರ ಸಮೀಪದ ಚರಂಡಿಗೆ ಇಳಿದಿದೆ. ಅಪಘಾತದ ತೀವ್ರತೆಗೆ ಆಟೋದ ಮುಂಭಾಗವು ಸಂಪೂರ್ಣವಾಗಿ ಜಖಂಗೊಂಡಿದೆ.
ಅದೃಷ್ಟವಶಾತ್, ಅಪಘಾತ ಸಂಭವಿಸಿದ ಸಮಯದಲ್ಲಿ ಆಟೋದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ.ಇದರಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಶಾಮಿಯಾನದ ವಾಹನದ ಮುಂಭಾಗವೂ ಸಹ ಹಾನಿಗೊಂಡಿದ್ದರೂ, ಚಾಲಕನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ.
