2,283 ಕೋಟಿ ರೂಪಾಯಿಗಳ ಹೂಡಿಕೆ ಹಗರಣ ಬಯಲು: ದೆಹಲಿಯಲ್ಲಿ ಇಬ್ಬರ ಬಂಧನ

Date:

ಮಧ್ಯಪ್ರದೇಶ ವಿಶೇಷ ಕಾರ್ಯಪಡೆ(STF) ಸುಮಾರು 2,283 ಕೋಟಿ ರೂಪಾಯಿಗಳ ಪ್ಯಾನ್-ಇಂಡಿಯಾ ಹೂಡಿಕೆ ಹಗರಣವನ್ನು ಬಯಲಿಗೆಳೆದಿದೆ. ಈ ಪ್ರಕರಣದಲ್ಲಿ ಇಬ್ಬರು ಮಾಸ್ಟರ್‌ಮೈಂಡ್‌ಗಳಾದ ದೀಪಕ್ ಶರ್ಮಾ ಮತ್ತು ಮದನ್ ಮೋಹನ್ ಕುಮಾರ್ ಎಂಬವರನ್ನು ದೆಹಲಿಯಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.

- Advertisement -

ಶೆಲ್ ಸಂಸ್ಥೆಗಳಾದ ಯಾರ್ಕರ್ ಎಫ್‌ಎಕ್ಸ್ ಮತ್ತು ಯಾರ್ಕರ್ ಕ್ಯಾಪಿಟಲ್ ಮೂಲಕ ಬೋಟ್‌ಬ್ರೋನಂತಹ ಆನ್‌ಲೈನ್ ವ್ಯಾಪಾರ ವೇದಿಕೆ ಹೆಸರಲ್ಲಿ ಏಳು ರಾಜ್ಯಗಳಲ್ಲಿ ಸಾವಿರಾರು ಹೂಡಿಕೆದಾರರನ್ನು ವಂಚಿಸಲಾಗಿದೆ. ಇಂದೋರ್ ನಿವಾಸಿ ಇಶಾನ್ ಸಲೂಜಾ ಅವರು ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಸಲೂಜಾ ಅವರಿಗೆ 20.18 ಲಕ್ಷ ರೂಪಾಯಿಗಳ ಹೂಡಿಕೆಗೆ 6-8% ಮಾಸಿಕ ಲಾಭ ನೀಡುವ ಭರವಸೆ ನೀಡಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

‘ಹಾಸ್ಟೆಲ್‌’ ಇಲ್ಲದ ಶಿಕ್ಷಣದ ಸ್ವರೂಪ ಹೇಗಿರಲಿದೆ?

ಸಾಮಾನ್ಯವಾಗಿ ʼಶಿಕ್ಷಣʼ ಎಂದರೆ ʼತರಗತಿ, ಪಠ್ಯಪುಸ್ತಕ ಮತ್ತು ಪರೀಕ್ಷೆಗಳʼ ಸುತ್ತ ಹೆಣೆದುಕೊಂಡಿರುವ ಕಲ್ಪನೆ. ಆದರೆ ಒಬ್ಬ ವಿದ್ಯಾರ್ಥಿ ದಿನದ ಬಹುಪಾಲು ಕಳೆಯುವ ಜಾಗ ʼಹಾಸ್ಟೆಲ್‌ʼ. ಹೆಚ್ಚಾಗಿ ಚರ್ಚೆಗೆ ಬಾರದ ಈ ʼಹಾಸ್ಟೆಲ್‌ʼ ಎಂಬ...

ಬರದ ಬೇಗೆಯಲ್ಲಿ ರಾಜ್ಯ ಬೆಂದರೂ ಅನುದಾನಕ್ಕ ದನಿ ಎತ್ತದ...

ಸದಾ ಕಾಲ 'ಮೋದಿ ಜಪ' ಮಾಡುತ್ತಾ, ಕೇವಲ ರಾಜಕೀಯಕ್ಕಾಗಿ ಮತ್ತು ಪಕ್ಷದ ಅಜೆಂಡಾಗಳಿಗಾಗಿ ರಾಜ್ಯಾದ್ಯಂತ ಸುತ್ತುವ ಈ ಸಂಸದರಿಗೆ, ನಾಡಿನ ಜನತೆ ಬರಗಾಲದ ತೀವ್ರ ಸಂಕಷ್ಟದಲ್ಲಿ ಬೆಂದು ಹೋಗುತ್ತಿರುವಾಗ ಅದೇ ಪ್ರಧಾನಿ ನರೇಂದ್ರ...

SIR ಅಕ್ರಮ | ಗ್ಯಾನೇಶ್‌ ಕುಮಾರ್ ‘ಅಪರಾಧಿ’ಯಾದ್ರೆ, ಮೋದಿ-ಅಮಿತ್...

ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತ್ಯಂತ ಕರಾಳ ಅಧ್ಯಾಯವೊಂದು ಈಗ ಜಗಜ್ಜಾಹೀರಾಗಿದೆ. ಪ್ರತಿಯೊಬ್ಬ ನಾಗರಿಕನ ಅತಿ ದೊಡ್ಡ ರಾಜಕೀಯ ಶಕ್ತಿಯಾಗಿರುವ 'ಮತದಾನದ ಹಕ್ಕು' ಮತ್ತು ಅದನ್ನು ಕಾಯಬೇಕಾದ ಸಾಂವಿಧಾನಿಕ ಸಂಸ್ಥೆಯನ್ನೇ ಆಡಳಿತಾರೂಢ ಮೋದಿ-ಅಮಿತ್ ಶಾ...

ಇದನ್ನು ಓದಿದ್ದೀರಾ? ‘ಭಾರತದಲ್ಲಿ ಬಹುದೊಡ್ಡ ಬದಲಾವಣೆ ನಡೆಯಲಿದೆ’; ಅದಾನಿ ಬಣ್ಣ ಬಯಲು ಮಾಡಿದ್ದ ಹಿಂಡೆನ್‌ಬರ್ಗ್‌ ಹೀಗೆ ಹೇಳಿದ್ಯಾಕೆ?

ಆರೋಪಿಗಳು ರೈನೆಟ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಮತ್ತು ಕಿಂಡೆಂಟ್ ಬಿಸಿನೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಖಾತೆಗಳಿಗೆ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸುತ್ತಿದ್ದರು. ಬಳಿಕ ಹಣವನ್ನು ಯುಸ್‌ ಡಾಲರ್‍‌ಗೆ ಪರಿವರ್ತಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಮಧ್ಯಪ್ರದೇಶ ವಿಶೇಷ ಕಾರ್ಯಪಡೆಯು 20ಕ್ಕೂ ಹೆಚ್ಚು ಅನುಮಾನಾಸ್ಪದ ಬ್ಯಾಂಕ್ ಖಾತೆಗಳಲ್ಲಿ ಸುಮಾರು 90 ಕೋಟಿ ರೂಪಾಯಿಗಳನ್ನು ಸ್ಥಗಿತಗೊಳಿಸಿದೆ.

ಕಿಂಡೆಂಟ್ ಬಿಸಿನೆಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ 2023-24ನೇ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ 1.10 ಕೋಟಿ ರೂ.ಗಳ ಬ್ಯಾಂಕ್ ಬ್ಯಾಲೆನ್ಸ್‌ ಅನ್ನು ಘೋಷಿಸಿದೆ. ಆದರೆ 2023ರ ಜನವರಿಯಿಂದ 2024ರ ಡಿಸೆಂಬರ್‌ವರೆಗೆ ಒಟ್ಟು ಸುಮಾರು 7,020 ಕೋಟಿ ರೂ.ಗಳ ವಹಿವಾಟು ನಡೆಸಿದೆ.

ಅದೇ ರೀತಿ, ರೈನೆಟ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ 2023–24ನೇ ಹಣಕಾಸು ವರ್ಷದಲ್ಲಿ 7.80 ಕೋಟಿ ರೂ.ಗಳ ಬ್ಯಾಂಕ್ ಬ್ಯಾಲೆನ್ಸ್ ತೋರಿಸಿದೆ. ಆದರೆ ಅದೇ ಅವಧಿಯಲ್ಲಿ 15,800 ಕೋಟಿ ರೂ.ಗಳ ವಹಿವಾಟು ನಡೆಸಿದೆ. ಒಟ್ಟಾರೆಯಾಗಿ, ಎರಡೂ ಕಂಪನಿಗಳು 16 ಬ್ಯಾಂಕ್ ಖಾತೆಗಳಲ್ಲಿ ಸುಮಾರು 22,830 ಕೋಟಿ ರೂ.ಗಳನ್ನು ಪಡೆದಿವೆ. ಬಳಿಕ ಆ ಹಣವನ್ನು ಇತರೆ ಖಾತೆಗಳಿಗೆ ವರ್ಗಾಯಿಸಲಾಗಿದೆ.

ಎರಡೂ ಕಂಪನಿಗಳು ಆರ್‌ಬಿಐ ಅಥವಾ ಸೆಬಿಯಲ್ಲಿ ನೋಂದಾಯಿಸದೆ ಕಾರ್ಯನಿರ್ವಹಿಸುತ್ತಿದ್ದವು. ಹಲವು ಹಣಕಾಸು ಮತ್ತು ನಿಯಂತ್ರಕ ನಿಯಮಗಳನ್ನು ಉಲ್ಲಂಘಿಸಿವೆ. ಸದ್ಯ ಜಾರಿ ನಿರ್ದೇಶನಾಲಯ (ED) ಸಹ FEMA ಕಾಯ್ದೆಯಡಿಯಲ್ಲಿ ಪ್ರಕರಣವನ್ನು ತನಿಖೆ ನಡೆಸುತ್ತಿದೆ. ಆರೋಪಿಗಳು ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ, ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಜನರಿಗೆ ವಂಚನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗ್ಯಾನೇಶ್‌ ಕುಮಾ‌ರ್ – ಮೇಧಾ ರೂಪಂ: ತಪ್ಪು ಕಾರಣಗಳಿಗಾಗಿ ಸುದ್ದಿಯ ಸುಳಿಯಲ್ಲಿ ಐಎಎಸ್ ಅಪ್ಪ-ಮಗಳ ಜೋಡಿ

ಉನ್ನತ ಸಾಂವಿಧಾನಿಕ ಹಾಗೂ ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಿರುವ ಐಎಎಸ್ ಅಧಿಕಾರಿಗಳಾದ ಅಪ್ಪ–ಮಗಳ...

IIT ಬಾಂಬೆ ವಿದ್ಯಾರ್ಥಿ ಸಾಹಿಲ್‌ ಆತ್ಮಹತ್ಯೆ ಪ್ರಕರಣ | ಪೋಷಕರ ಬೆಂಬಲಕ್ಕೆ ನಿಂತ ರಾಹುಲ್‌ ಗಾಂಧಿ

IIT ಬಾಂಬೆ ವಿದ್ಯಾರ್ಥಿ ಸಾಹಿಲ್‌ ವಕೋಡೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌...

EC ಒಳಜಗಳ | ಗ್ಯಾನೇಶ್‌ ಕುಮಾರ್‌ ಎಡವಟ್ಟುಗಳಿಗೆ ಆಕ್ಷೇಪಗಳ ಸರಮಾಲೆ

SIR ವಿಚಾರದಲ್ಲಿ ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯ ಬಹಿರಂಗಗೊಂಡ ಬೆನ್ನಲ್ಲೇ, ಮುಖ್ಯ ಚುನಾವಣಾ...