ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಶಾಂತಿ ನಿಕೇತನ ಚಾರಿಟಬಲ್ ಸೊಸೈಟಿ(ರಿ), ಭದ್ರಾವತಿ ತಾಲ್ಲೂಕಿನ ಹಳೇಜೇಡಿಕಟ್ಟೆಯ ಮದರ್ ತೆರೇಸಾ ಕಿವುಡ ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿವಿಧ ಯೋಗಾಸನಗಳನ್ನು ವಿದ್ಯಾರ್ಥಿಗಳು ಮಾಡುವ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ರೆವರೆಂಡ್ ಫಾದರ್ ರಾಬಿಟ್ ಮ್ಯಾಥರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ದೈಹಿಕ, ಆದ್ಯಾತ್ಮಿಕ ಮತ್ತು ಮಾನಸಿಕ ನೆಮ್ಮದಿಗಾಗಿ, ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡುವುದು ಅನಿವಾರ್ಯವಾಗಿದೆ.
ಪ್ರಸ್ತುತ ದಿನಮಾನದಲ್ಲಿ ಯುವಜನತೆಯಿಂದ ವೃದ್ಧಾಪ್ಯದವರೆಲ್ಲರೂ ಯೋಗದತ್ತ ಮೊರೆಹೋಗುತ್ತಿದ್ದಾರೆ. ಇತ್ತೀಚಿಗೆ ಪ್ರತಿಯೊಂದು ದೇಶಗಳಲ್ಲೂ ಕೂಡ ಯೋಗಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಯೋಗದ ಮಹತ್ವವನ್ನು ತಮ್ಮ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಕಾರ್ಯಕ್ರಮದಲ್ಲಿ ರೆವರೆಂಡ್ ಫಾದರ್ ಜೋಸೆಪ್ ರವರು ಹಾಜರಿದ್ದರು. ಶಾಲೆಯ ಎಲ್ಲಾ ಶಿಕ್ಷಕರುಗಳು ಮತ್ತು ಶಿಕ್ಷಕೇತರರ ವೃಂದದವರು, ನಿಲಯದ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಜರಿದ್ದರು.
