ಮೈಸೂರು ಜಿಲ್ಲೆ, ಹೆಗ್ಗಡದೇವನಕೊಟೆ ತಾಲ್ಲೂಕಿನ ಬಿದರಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯ ಭೂಮಿಯ ಆರ್ ಟಿ ಸಿ ಬದಲಾಯಿಸಿ ಅಡವಿಟ್ಟು ನೂರಾರು ಕೋಟಿ ರೂಪಾಯಿ ಸಾಲ ಪಡೆದಿದ್ದ ಪ್ರಕರಣದಲ್ಲಿ ನ್ಯಾಯಾಲಯ ಸುಭಾಷ್ ಪವರ್ ಮ್ಯಾನೇಜ್ಮೆಂಟ್ ಹಾಗೂ ಸಂಬಂಧಪಟ್ಟವರಿಗೆ ಸಮನ್ಸ್ ಜಾರಿ ಮಾಡಿದೆ.
ಕಬಿನಿ ಜಲಾಶಯಕ್ಕೆ ಸೇರಿದ ಭೂಮಿಯನ್ನು ಸುಭಾಷ್ ಪವರ್ ಮ್ಯಾನೇಜ್ಮೆಂಟ್ ಹೆಸರಿಗೆ ಆರ್ ಟಿ ಸಿ ಬದಲಾಯಿಸಿ ನೂರಾರು ಕೋಟಿ ಸಾಲ ಪಡೆದು ವಂಚಿಸಲಾಗಿತ್ತು. ಈ ವಿಚಾರವಾಗಿ ಮಾಧ್ಯಮಗಳು ವಿಸ್ತ್ರತವಾಗಿ ವರದಿ ಮಾಡಿದ್ದವು. ನ್ಯಾಯಾಲಯವು
ಇದೇ ಜೂನ್ 28 ರಂದು ಕೋರ್ಟ್ ಗೆ ಹಾಜರಾಗುವಂತೆ ಸಂಬಂಧಪಟ್ಟವರಿಗೆ ಸಮನ್ಸ್ ಜಾರಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕೈಗೊಳ್ಳದ ಯೋಜನೆಗೆ ಹಣ ಪಾವತಿ; ಪಿಡಿಓ ಸೇರಿ ಹಲವರಿಗೆ ನೋಟಿಸ್ ಜಾರಿ
ವಕೀಲ ಬಾಲಚಂದ್ರ ಎಂಬುವರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು. ಪ್ರತಿನಿಧಿತ್ವ ರೆಪ್ರೆಸೆಂಟಿವ್ ಕ್ಯಾರೆಕ್ಟರ್ ಸೂಟ್ ಅಡಿ ಓಎಸ್ 74/2025 ದಾಖಲಾಗಿತ್ತು. ನ್ಯಾಯಾಲಯವು ಚೀಫ್ ಸೆಕ್ರೆಟರಿ, ಕರ್ನಾಟಕ ಸ್ಟೇಟ್ ಚೀಫ್ ಸೆಕ್ರೆಟರಿ, ಕಾವೇರಿ ನೀರಾವರಿ ನಿಗಮದ ಸೂಪರಿಂಡೆಂಟ್ ಇಂಜಿನಿಯರ್, ಚೀಫ್ ಇಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನಿಯರ್, ಕಬಿನಿ ಎಇಇ ಚಂದ್ರಶೇಖರ್, ಸುಭಾಷ್ ಪವರ್ ಕಂಪನಿ ಮ್ಯಾನೇಜಿಂಗ್ ಡೈರೆಕ್ಟರ್ ಸೆಂದಿಲ್, ಸೀನಿಯರ್ ಮ್ಯಾನೇಜರ್, ತಹಶೀಲ್ದಾರ್ ಮೋಹನ ಕುಮಾರಿ ಅವರಿಗೆ ಸಮನ್ಸ್ ಜಾರಿ ಮಾಡಿದೆ.