ವಾಟ್ಸಾಪ್ ಬಳಕೆದಾರರಿಗೆ ಬಾಂಬೆ ಹೈಕೋರ್ಟ್ ಮಹತ್ವದ ಸಂದೇಶವನ್ನು ನೀಡಿದೆ. ಸಾಮಾಜಿಕ ಮಾಧ್ಯಮದ ವೇದಿಕೆಯಲ್ಲಿ ಸಂವಹನ ಮಾಡುವಾಗ ಜವಾಬ್ದಾರಿಯುತವಾಗಿ ವರ್ತಿಸುವಂತೆ ನ್ಯಾಯಾಲಯದ ನಾಗ್ಪುರ ಪೀಠ ವಾಟ್ಸಾಪ್ ಬಳಕೆದಾರರಿಗೆ ಸಲಹೆ ನೀಡಿದೆ.
ಧಾರ್ಮಿಕ ಗುಂಪಿನ ವಿರುದ್ಧ ದ್ವೇಷವನ್ನು ಹರಡಿದ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಈ ಹೇಳಿಕೆ ನೀಡಿದೆ. ಅಲ್ಲದೇ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ಕೋರ್ಟ್ ನಿರಾಕರಿಸಿದೆ.
ಜುಲೈ 12ರಂದು ನೀಡಿದ ಆದೇಶದಲ್ಲಿ, ನ್ಯಾಯಮೂರ್ತಿಗಳಾದ ವಿನಯ್ ಜೋಶಿ ಮತ್ತು ವಾಲ್ಮೀಕಿ ಎಸ್ ಎ ಮೆನೇಜಸ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ನೀವು ಏನು ಮಾಡುತ್ತಿದ್ದೀರಿ, ಆಲೋಚಿಸುತ್ತೀರಿ ಅಥವಾ ನೀವು ನೋಡಿದ ಯಾವುದೋ ಚಿತ್ರ, ವಿಡಿಯೋ ಆಗಿರಬಹುದು. ಅದು 24 ಗಂಟೆಗಳ ನಂತರ ಕಣ್ಮರೆಯಾಗುತ್ತದೆ. ವಾಟ್ಸಾಪ್ ಸ್ಟೇಟಸ್ ವ್ಯಕ್ತಿಯ ಸಂಪರ್ಕದಲ್ಲಿರುವವರಿಗೆ ಏನನ್ನಾದರೂ ತಿಳಿಸುವ ಉದ್ದೇಶವಾಗಿದೆ. ಇದು ತಿಳಿದಿರುವ ವ್ಯಕ್ತಿಗಳೊಂದಿಗೆ ಸಂವಹನದ ವಿಧಾನವಲ್ಲದೆ ಬೇರೇನೂ ಅಲ್ಲ. ಇತರರೊಂದಿಗೆ ಸಂವಹನ ಮಾಡುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಪೀಠ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಚಂದ್ರಯಾನ 3 ಉಡಾವಣೆ| ಎಲ್ಲ ಮಾಜಿ ಪ್ರಧಾನಿಗಳ ದೂರದೃಷ್ಟಿಗೆ ಸಾಕ್ಷಿ: ಖರ್ಗೆ ಶ್ಲಾಘನೆ
ಧಾರ್ಮಿಕ ಭಾವನೆ ಹಾಗೂ ನಂಬಿಕೆಯನ್ನು ಉದ್ದೇಶಪೂರ್ವಕವಾಗಿ ಘಾಸಿಗೊಳಿಸಿದ ಬಗ್ಗೆ ದಾಖಲಾಗಿರುವ ಎಫ್‍ಐಆರ್ ಅನ್ನು ರದ್ದುಗೊಳಿಸುವಂತೆ 27 ವರ್ಷದ ಕಿಶೋರ್ ಲ್ಯಾಂಡ್ಕರ್ ಎಂಬ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಪೀಠವು ವಜಾಗೊಳಿಸಿದೆ.
ಕಿಶೋರ್ ಲ್ಯಾಂಡ್ಕರ್ ವಿರುದ್ಧ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾ ನ ಕಾಯಿದೆಯ ನಿಬಂಧನೆಗಳ ಉಲ್ಲಂಘನೆಯ ಆರೋಪದ ಪ್ರಕರಣಕ್ಕಾಗಿ ಪೀಠವು ವಿಚಾರಣೆ ನಡೆಸಿತು.
ಮಾರ್ಚ್ 2023 ರಲ್ಲಿ ಧಾರ್ಮಿಕ ಭಾವನೆ ಕೆರಳಿಸುವ ವಿಚಾರವನ್ನು ಆರೋಪಿ ಸ್ಟೇಟಸ್‍ಗೆ ಹಾಕಿದ್ದು, ಈ ಬಗ್ಗೆ ಇಂಟರ್‌ನೆಟ್ ಹುಡುಕುವಂತೆ ಸೂಚಿಸಿದ್ದಾನೆ. ಇದನ್ನು ಹುಡುಕಾಟ ಮಾಡಿದವರ ಧಾರ್ಮಿಕ ಭಾವನೆ ಕೆರಳಿಸುವ ಆಕ್ಷೇಪಾರ್ಹ ವಿಷಯಗಳ ಫಲಿತಾಂಶಗಳು ತೋರಿಸಲಾಗುತ್ತದೆ ಎಂದು ಪೀಠವು ಗಮನಿಸಿತು. ಆದರೆ ಆರೋಪಿ ತನ್ನ ಉದ್ದೇಶ ಬೇರೆಯವರಿಗೆ ನೋವು ಕೊಡುವುದಾಗಿರಲಿಲ್ಲ ಎಂದು ವಾದಿಸಿದ್ದಾನೆ.
ಈ ಸುದ್ದಿ ಓದಿದ್ದೀರಾ? ಬ್ರೇಕಿಂಗ್ ನ್ಯೂಸ್ | ಟ್ವಿಟರ್‌ಗೆ 50 ಲಕ್ಷ ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್