ವಿಧಾನಸಭೆ ಉಪಚುನಾವಣೆ | ನಿಲಂಬೂರ್‌ ಯುಡಿಎಫ್ ತೆಕ್ಕೆಗೆ, ಗುಜರಾತ್‌ನ ವಿಸಾವದರ್‌ನಲ್ಲಿ ಎಎಪಿಗೆ ಗೆಲುವು

Date:

Advertisements

ದೇಶದ ಐದು ವಿಧಾನಸಭೆ ಕ್ಷೇತ್ರಗಳಾದ ಲುಧಿಯಾನ ಪಶ್ಚಿಮ (ಪಂಜಾಬ್), ನೀಲಂಬೂರ್ (ಕೇರಳ), ಕಾಳಿಗಂಜ್ (ಪಶ್ಚಿಮ ಬಂಗಾಳ), ಮತ್ತು ವಿಸಾವದರ್‌ ಮತ್ತು ಕಾಡಿ(ಗುಜರಾತ್)ಗಳಲ್ಲಿ ನಡೆದ ವಿಧಾನಸಭೆ ಉಪಚುನಾವಣೆಗಳ ಮತ ಎಣಿಕೆ ಮುಗಿದಿದೆ. ಬಿಜೆಪಿ, ಕಾಂಗ್ರೆಸ್, ಎಎಪಿ ಸೇರಿದಂತೆ ಪ್ರಮುಖ ಪಕ್ಷಗಳು ಪರಸ್ಪರ ತೀವ್ರ ಪೈಪೋಟಿ ನೀಡಿ ಗೆಲುವು ಬಾಚಿಕೊಂಡಿದೆ.

ನೀಲಂಬೂರ್‌ ಎಲ್‌ಡಿಎಫ್‌ ತೆಕ್ಕೆಯಿಂದ ಯುಡಿಎಫ್‌ ತೆಕ್ಕೆಗೆ ಜಾರಿದೆ. ಪಂಜಾಬ್‌ನ ಲುಧಿಯಾನ ಮತ್ತು ಗುಜರಾತ್‌ನ ವಿಸಾವದರ್‌ ಎಎಪಿ ಪಾಲಾಗಿದೆ. ಗುಜರಾತ್‌ನಲ್ಲಿ ಒಂದು ಸ್ಥಾನ ಮಾತ್ರ ಬಿಜೆಪಿ ಉಳಿಸಿಕೊಂಡರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಗೆಲುವು ಪಡೆದಿದೆ.

ಇದನ್ನು ಓದಿದ್ದೀರಾ? ವಿಧಾನ ಪರಿಷತ್ | ಜೂನ್‌ 30ರಂದು ಉಪಚುನಾವಣೆ; ಅಂದೇ ಫಲಿತಾಂಶ

Advertisements

ನಿಲಂಬೂರ್ ಉಪಚುನಾವಣೆ ಫಲಿತಾಂಶ

ನಿಲಂಬೂರ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್ಯದನ್ ಶೌಕತ್ ಗೆಲುವು ಕಂಡಿದ್ದು ಸಿಪಿಐ(ಎಂ)ನ ಎಂ ಸ್ವರಾಜ್ ಅವರನ್ನು 11,077 ಮತಗಳಿಂದ ಸೋಲಿಸಿದ್ದಾರೆ. ಈ ವರ್ಷದ ಜನವರಿವರೆಗೆ ನಿಲಂಬೂರ್ ಶಾಸಕರಾಗಿದ್ದ ಸ್ವತಂತ್ರ ಅಭ್ಯರ್ಥಿ ಪಿವಿ ಅನ್ವರ್ 19,946 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಅನ್ವರ್ ಅವರು ಸಿಪಿಐಎಂಗೆ ರಾಜೀನಾಮೆ ನೀಡಿದ ಬಳಿಕ ಈ ಶಾಸಕ ಸ್ಥಾನ ತೆರವಾಗಿತ್ತು. ಜೂನ್ 19 ರಂದು ಉಪಚುನಾವಣೆ ನಡೆದಿದ್ದು, ಶೇಕಡ 73.26ರಷ್ಟು ಮತದಾನವಾಗಿತ್ತು.

ಲುಧಿಯಾನ ಪಶ್ಚಿಮ ವಿಧಾನಸಭಾ ಉಪಚುನಾವಣೆ

ಪಂಜಾಬ್‌ನ ಲುಧಿಯಾನ ಪಶ್ಚಿಮ ವಿಧಾನಸಭಾ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಂಜೀವ್ ಅರೋರಾ 10,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಕಾಂಗ್ರೆಸ್‌ನ ಭರತ್ ಭೂಷಣ್ ಅಂಶು 24,542 ಮತಗಳನ್ನು ಪಡೆದಿದ್ದರೆ, ಅರೋರಾ 35,179 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಜೀವನ್ ಗುಪ್ತಾ 20,323 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಶಿರೋಮಣಿ ಅಕಾಲಿ ದಳದ ವಕೀಲ ಪೌರ್ಪ್ಕರ್ ಸಿಂಗ್ ಕೇವಲ 8,203 ಮತಗಳನ್ನು ಪಡೆದಿದ್ದಾರೆ.

ಗುಜರಾತ್‌ನ ಕಾಡಿ, ವಿಸಾವದರ್

ಗುಜರಾತ್‌ನ ಕಾಡಿ ಮತ್ತು ವಿಸಾವದರ್ ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಕಾಡಿಯಲ್ಲಿ, ಬಿಜೆಪಿಯ ರಾಜೇಂದ್ರ ಚಾವ್ಡಾ ಅವರು ಕಾಂಗ್ರೆಸ್‌ನ ರಮೇಶ್ ಚಾವ್ಡಾ ಮತ್ತು ಎಎಪಿಯ ಜಗದೀಶ್ ಚಾವ್ಡಾ ಅವರನ್ನು ಸೋಲಿಸಿದ್ದಾರೆ. ಬಿಜೆಪಿ ಶಾಸಕ ಕರ್ಸನ್‌ಭಾಯ್ ಸೋಲಂಕಿ ಅವರ ಮರಣದ ನಂತರ ಈ ಸ್ಥಾನ ತೆರವಾಗಿತ್ತು.

ವಿಸಾವದರ್‌ನಲ್ಲಿ, ಎಎಪಿಯ ಗೋಪಾಲ್ ಇಟಾಲಿಯಾ 75,942 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ಕಿರಿತ್ ಪಟೇಲ್ ಮತ್ತು ಕಾಂಗ್ರೆಸ್‌ನ ನಿತಿನ್ ರಣಪರಿಯಾ ಅವರನ್ನು ಇಟಾಲಿಯಾ ಸೋಲಿಸಿದ್ದಾರೆ. ಜೂನ್ 19ರಂದು ಚುನಾವಣೆ ನಡೆದಿದ್ದು, ವಿಸಾವದರ್‌ನಲ್ಲಿ ಶೇಕಡ 56.89, ಕಾಡಿಯಲ್ಲಿ ಶೇಕಡ 57.90ರಷ್ಟು ಮತದಾನವಾಗಿದೆ.

ಕಾಲಿಗಂಜ್‌ನಲ್ಲಿ ಯಾರಿಗೆ ಗೆಲುವು?

ತೃಣಮೂಲ ಕಾಂಗ್ರೆಸ್‌ನ ಅಲಿಫಾ ಅಹ್ಮದ್ ಅವರು ಪಶ್ಚಿಮ ಬಂಗಾಳದ ಕಾಲಿಗಂಜ್‌ನಲ್ಲಿ ಗೆದ್ದಿದೆ. 23ನೇ ಸುತ್ತಿನಲ್ಲಿ 50,000ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಬಿಜೆಪಿಯ ಆಶಿಶ್ ಘೋಷ್ ವಿರುದ್ಧ ಅಲಿಫಾ ಸ್ಪರ್ಧಿಸಿದ್ದರು. ಜೂನ್ 19ರಂದು ನಡೆದ ಉಪಚುನಾವಣೆಯಲ್ಲಿ ಶೇ. 69.85 ರಷ್ಟು ಮತದಾನವಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಟಿಎಂಸಿ ಶಾಸಕ ನಾಸಿರುದ್ದೀನ್ ಅಹಮದ್ ಅವರು ನಿಧನರಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿದೆ. ನಾಸಿರುದ್ದೀನ್ ಅಹಮದ್ ಅವರ ಪುತ್ರಿ ಅಲಿಫಾ ಅಹಮದ್ ಅವರನ್ನು ಕಣಕ್ಕಿಳಿಸಿದ ಟಿಎಂಸಿ ಕಾಲಿಗಂಜ್‌ ಕ್ಷೇತ್ರವನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಂಡಿದೆ. ಬಿಜೆಪಿ ಆಶಿಸ್ ಘೋಷ್ ಅವರನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಕಬಿಲ್ ಉದ್ದೀನ್ ಶೇಖ್ ಸಿಪಿಐ (ಎಂ) ಬೆಂಬಲದೊಂದಿಗೆ ಸ್ಪರ್ಧಿಸಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X