ಹಿಂದುತ್ವಕ್ಕೂ ಹಿಂದು ಧರ್ಮಕ್ಕೂ ಸಂಬಂಧವೇ ಇಲ್ಲ: ಸಿಪಿಐಎಂ ರಾಜ್ಯ ಕಾರ್ಯದರ್ಶಿ ಪ್ರಕಾಶ್

Date:

Advertisements

ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಯಾವುದೇ ಸಂಬಂಧ ಇಲ್ಲ. ಹಿಂದುತ್ವವು ಸಂಘಪರಿವಾರದ ಸುಳ್ಳು, ಹಿಂಸೆಗಳನ್ನು ಒಳಗೊಂಡ ರಾಜಕೀಯ ಅಜೆಂಡಾ ಮಾತ್ರ. ತನ್ನ ರಾಜಕೀಯ ಉದ್ದೇಶವನ್ನು ಸಾಧಿಸಲು ಅದು ಮುಸ್ಲಿಮರನ್ನು ಗುರಿಯಾಗಿಸುತ್ತಿದೆ. ಆ ಮೂಲಕ ಹಿಂದೂಗಳಲ್ಲಿ ಭಯ ಮೂಡಿಸಿ ತನ್ನ ಹಿಂದುತ್ವದ ಜಾಲದೊಳಗಡೆ ಕೆಡವುವ ಕೆಲಸ ಮಾಡುತ್ತಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ ಕೆ.ಪ್ರಕಾಶ್ ಆರೋಪಿಸಿದರು.

ಅವರು ಸೋಮವಾರ ಮಂಗಳೂರಿನ ಕ್ಲಾಕ್‌ ಟವರ್‌ ಬಳಿ ನಡೆದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿ, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಮತೀಯ ದ್ವೇಷದ ಕೊಲೆ, ಪ್ರತಿಕೊಲೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಮೂರು ದಶಕದ ಅವಧಿಯಲ್ಲಿ ನಡೆದಿರುವ ಕೋಮುವಾದಿ ಕೊಲೆಗಳನ್ನು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒಳಪಡಿಸಲು ಒತ್ತಾಯಿಸಿದರು. ಜಿಲ್ಲೆಯಲ್ಲಿ ಮತೀಯ ದ್ವೇಷದ ಸರಣಿ ಕೊಲೆಗಳು ನಡೆಯಲು ಪೊಲೀಸ್ ಅಧಿಕಾರಿಗಳ ಬೇಜವಾಬ್ದಾರಿತನ, ಕೋಮುವಾದಿ ಶಕ್ತಿಗಳ ಜತೆಗಿನ ಒಡನಾಟವೇ ನೇರ ಕಾರಣ. ಸಿಪಿಐಎಂ ಪಕ್ಷದ ಎಚ್ಚರಿಕೆಯನ್ನು ಜಿಲ್ಲೆಯ ಕಾಂಗ್ರೆಸ್ ನಾಯಕತ್ವ ಅಂದು ನಿರ್ಲಕ್ಷಿಸಿತು. ಪೊಲೀಸ್ ಕಮಿಷನರ್ ಅಗ್ರವಾಲ್ ರನ್ನು ಆರೋಪಗಳ ಹೊರತಾಗಿ ರಕ್ಷಿಸಿತು. ಅದರ ಪರಿಣಾಮ ಅಮಾಯಕರು ಕೊಲೆಗೀಡಾಗುವಂತಾಯ್ತು. ಈಗಲಾದರು ಕಾಂಗ್ರೆಸ್ ನಾಯಕತ್ವ ಎಚ್ಚೆತ್ತುಕೊಳ್ಳಲಿ, ನೂತನ ಪೊಲೀಸ್ ಅಧಿಕಾರಿಗಳು ಹಾಗೂ ಕೋಮುವಾದಿ ವಿರೋಧಿ ಪಡೆಗೆ ಬಲತುಂಬುವ ಕೆಲಸ ಮಾಡಲಿ” ಎಂದು ಹೇಳಿದರು.

ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, “ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೋಮು ದ್ವೇಷದ ಕೊಲೆ, ಪ್ರತಿಕೊಲೆಗಳು ಕನಿಷ್ಠ ಹತ್ತು ನಡೆದಿವೆ. ಬಹುತೇಕ ಪ್ರಕರಣಗಳ ಆರೋಪಿಗಳು ವರ್ಷದ ಒಳಗಡೆ ಜಾಮೀನು ಪಡೆದು ರಾಜೋರೋಷವಾಗಿ ತಿರುಗಾಡುತ್ತಿದ್ದಾರೆ. ಕಳೆದ ಮೂರು ದಶಕದ ಅವಧಿಯಲ್ಲಿ ಇಂತಹ ಕನಿಷ್ಟ ಮೂವತ್ತಕ್ಕೂ ಹೆಚ್ಚು ಕೊಲೆಗಳು ಇಲ್ಲಿ ನಡೆದಿವೆ. ಇವರಿಗೆ ರಾಜಕೀಯ ಆಶ್ರಯ ನೀಡುವವರು ಯಾರು ? ಈ ಕೊಲೆಗಳ ಹಿಂದಿನ ಪಿತೂರಿ ದಾರರು ಯಾರು, ರಾಜಕೀಯ ಫಲಾನುಭವಿಗಳು ಯಾರು? ಎಂಬುದು ಬಯಲಾಗಬೇಕಿದೆ. ಇದರ ಸತ್ಯಗಳು ಜನತೆಯ ಅರಿವಿಗೆ ಬರಬೇಕಾಗಿದೆ” ಎಂದು ಆಗ್ರಹಿಸಿದರು.

Advertisements

ಇದನ್ನೂ ಓದಿ: ಮಂಗಳೂರು | ಅಶ್ರಫ್ ಗುಂಪು ಹತ್ಯೆ; ಪಿಸ್ತೂಲ್ ರವಿ ಹಲ್ಲೆ ನಡೆಸಿರುವುದಕ್ಕೆ ಸಾಕ್ಷ್ಯಾಧಾರ‌ ಸಿಕ್ಕಿಲ್ಲ: ಪೊಲೀಸ್ ಕಮಿಷನರ್

ಪ್ರತಿಭಟನೆಯಲ್ಲಿ ಕೆ.ಯಾದವ ಶೆಟ್ಟಿ, ದೇವಿ ಮಂಡ್ಯ, ಸುನಿಲ್ ಕುಮಾರ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ಸುಕುಮಾರ್ ತೊಕ್ಕೋಟು, ಬಿ ಎಂ ಭಟ್, ಸದಾಶಿವ ದಾಸ್, ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಪ್ರಮೀಳಾ ಶಕ್ತಿನಗರ, ರಮಣಿ ಮೂಡಬಿದ್ರೆ, ಸಂತೋಷ್ ಬಜಾಲ್, ಬಿ ಕೆ ಇಮ್ತಿಯಾಜ್, ವಸಂತಿ ಕುಪ್ಪೆಪದವು, ಮನೋಜ್ ವಾಮಂಜೂರು, ರಫೀಕ್ ಹರೇಕಳ ಮುಂತಾದವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X