ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುಮಾರು 24 ಕ್ಕೂ ಹೆಚ್ಚು ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಮುಖಂಡರ ಸಮ್ಮುಖದಲ್ಲಿ ನಡೆದ ಕರ್ನಾಟಕ ರಾಜ್ಯ ಅಹಿಂದಾ ಒಕ್ಕೂಟದ ಪ್ರಥಮ ಸಾಮಾನ್ಯ ಸಭೆಯಲ್ಲಿ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಮಾತನಾಡಿ ‘ ಶೋಷಿತರ ನೋವುಗಳಿಗೆ ಸ್ಪಂದಿಸುವುದೇ ನಮ್ಮ ಗುರಿ ‘ ಎಂದರು.
ಶೋಷಿತ ವರ್ಗದ ಜನರ ನೋವುಗಳಿಗೆ ತಕ್ಷಣ ಸ್ಪಂದಿಸಿ ಅವರಿಗೆ, ಸೂಕ್ತ ಸಹಾಯ ಮಾಡುವುದು ನಮ್ಮ ಸಂಘಟನೆಯ ಪ್ರಥಮ ಆದ್ಯತೆಯಾಗಿದೆ. ನಮ್ಮ ಸಂಘಟನೆ ಯಾರ ಪರವೂ ಇಲ್ಲ ಅಥವಾ ಯಾರ ವಿರುದ್ಧವೂ ಅಲ್ಲ. ನಮ್ಮದು ಸರ್ಕಾರದಲ್ಲಿ ನೋಂದಣಿ ಆಗಿರುವ ಮೈಸೂರು ಭಾಗದ ಮೊದಲ ಅಹಿಂದಾ ಸಂಘಟನೆ ಆಗಿದೆ. ಅಹಿಂದಾ ಸಮುದಾಯವನ್ನು ಸಂಘಟಿಸುವುದು ಮತ್ತು ನೊಂದವರ ಪರವಾಗಿ ಒಗ್ಗೂಡಿ ಕೆಲಸ ಮಾಡುವುದು ನಮ್ಮ ಸಂಘಟನೆಯ ಉದ್ಧೇಶವಾಗಿದೆ.
ಈ ಸಂಘಟನೆ ಕಟ್ಟಲು ನಾವು ಸುಮಾರು 6 ತಿಂಗಳಿನಿಂದ ಶ್ರಮ ಹಾಕಿದ್ದೇವೆ. ತುಳಿತಕ್ಕೆ ಒಳಗಾದ, ಅಧಿಕಾರದಿಂದ ವಂಚಿತರಾದ ಎಲ್ಲಾ ಸಮುದಾಯಕ್ಕೂ ನಾವು ಸಮಿತಿಯಲ್ಲಿ ಆದ್ಯತೆ ನೀಡಿದ್ದೇವೆ. ನಮ್ಮ ಸಮುದಾಯಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ದೊರಕಿಸಿಕೊಳ್ಳುವುದು, ನಮ್ಮ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಟ್ಟು ಅವರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸದೃಢರನ್ನಾಗಿಸುವುದು. ಅಗತ್ಯವಾದ ಮಾರ್ಗದರ್ಶನ, ಸಲಹೆ, ಸಹಕಾರ ನೀಡುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ?ಕೊಡಗು | ಅತ್ತೂರು ಕೊಲ್ಲಿ ಹಾಡಿಗೆ ಶಾಸಕ ಎ. ಎಸ್. ಪೊನ್ನಣ್ಣ ಭೇಟಿ; ಸರ್ಕಾರದೊಂದಿಗೆ ಚರ್ಚಿಸುವ ಭರವಸೆ
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ಯ ನಾರಾಯಣ, ರಾಜ್ಯ ಖಜಾಂಚಿ ಬಿ. ಜಿ. ಕೇಶವ, ಗೌರವಾಧ್ಯಕ್ಷ ಎನ್. ಆರ್. ನಾಗೇಶ್, ಉಪಾಧ್ಯಕ್ಷ ಎಸ್. ನಾಗರಾಜು, ಸಂಘಟನೆ ಕಾಯಾಧ್ಯಕ್ಷ ಎನ್. ಸಿ. ಉಮೇಶ್, ನಾಗರಾಜು, ಕಾನೂನು ಸಲಹೆಗಾರ ರವಿಚಂದ್ರ, ಉಪಾಧ್ಯಕ್ಷ ರಾಜೇಶ್, ಹೆಚ್. ಜಿ. ರೇವಣ್ಣ, ಗೌರವ ಸಲಹೆಗಾರರಾದ ಎಸ್. ಶಂಕರ್, ಸಿ. ಟಿ. ಆಚಾರ್ಯ, ಉಪಾಧ್ಯಕ್ಷರಾದ ಸಿದ್ದಪ್ಪಾಜಿ, ವಿ. ಪಿ. ಸುಶೀಲ, ಡಿ. ಎನ್. ಬಾಬು, ಡಾ. ಪಿ. ಶಾಂತರಾಜೇ ಅರಸ್, ಸಹ ಕಾರ್ಯದರ್ಶಿಗಳಾದ ಆರ್. ಕೆ. ರವಿ, ಕಾಂತರಾಜು, ಸಂಘಟನಾ ಕಾರ್ಯದರ್ಶಿ ಜೆ. ಕೃಷ್ಣ, ರವಿ ಕುಮಾರ್, ಮಾಧ್ಯಮ ವಕ್ತಾರ ಎಸ್. ಮಂಜುನಾಥ್, ಗೌರವ ಸಲಹೆಗಾರ ಎಂ. ವಿ. ಶ್ರೀನಿವಾಸ ಮಿತ್ರ, ಸಂಘಟನಾ ಕಾರ್ಯದರ್ಶಿ ಶ್ರೀಧರ ಸಿ, ಸಾಮಾಜಿಕ ಜಾಲತಾಣ ಉಸ್ತುವಾರಿ ಸಂತೋಷ್ ಬಿ, ಮಹೇಶ್ ಸಿ. ಎಸ್, ಸಂಚಾಲಕರಾದ ಸುಂದರ್ ಡಿಸೋಝಾ, ಆರ್. ಆರ್. ಪ್ರಕಾಶ್, ಸಂತೋಷ್ ಕಿರಾಳು, ಲಕ್ಷ್ಮಿ, ಜಯಲಕ್ಷ್ಮಿ, ರಾಜಶೇಖರ್, ನಂಜುಡ ಸ್ವಾಮಿ, ಕೃಷ್ಣ, ಶ್ರೀಧರ, ಭಾಗ್ಯಮ್ಮ, ಮಂಜುನಾಥ್, ನವೀನ್ ಕುಮಾರ್, ಶ್ರೀರಾಮ, ಸತೀಶ್, ಸಂಘಟನಾ ಅಧ್ಯಕ್ಷ ರವಿಕುಮಾರ್ ಮೊದಲಾದವರು ಇದ್ದರು.