ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ, ನಾವ್ಯಾರು ಸರ್ಕಾರ ಕೆಡವುವ ಅಗತ್ಯವಿಲ್ಲ: ಜಿ ಟಿ ದೇವೇಗೌಡ

Date:

Advertisements
  • ‘ಕಾಂಗ್ರೆಸ್‌ನಲ್ಲಿ ಮೂಲ-ವಲಸಿಗರ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ’
  • ‘ಚುನಾವಣೆಯಲ್ಲಿ ಜೆಡಿಎಸ್‌ ಸೋತಿರಬಹುದು ಸತ್ತಿಲ್ಲ, ಸಾಯುವುದೂ ಇಲ್ಲ’

ಜೆಡಿಎಸ್‌ ಮುಳುಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಸರ್ಕಾರ ಸುಭದ್ರವಾಗಿಲ್ಲ ಎಂಬುದನ್ನು ಪಕ್ಷದಲ್ಲಿಯೇ ಸ್ಫೋಟಗೊಂಡಿರುವ ಅಸಮಾಧಾನವೇ ಹೇಳುತ್ತಿದೆ. ನಾವ್ಯಾರು ಸರ್ಕಾರವನ್ನು ಕೆಡವುವ ಅಗತ್ಯವಿಲ್ಲ ಎಂದು ಶಾಸಕ ಜಿ ಟಿ ದೇವೇಗೌಡ ಟೀಕಿಸಿದರು.

ಜೆಡಿಎಸ್‌ ರಾಜ್ಯ ಕಚೇರಿ ಜೆ ಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಗೆದ್ದಲು ಹುತ್ತ ಕಟ್ಟಿ ವಾಸ ಮಾಡುತ್ತಿರುತ್ತದೆ. ಬಳಿಕ ಅಲ್ಲಿಗೆ ಹಾವು ಬಂದು ಸೇರಿಕೊಂಡು ಹುತ್ತವನ್ನು ತನ್ನದಾಗಿಸಿಕೊಳ್ಳುತ್ತದೆ. ಹೀಗೆ ಕಾಂಗ್ರೆಸ್‌ನಲ್ಲಿಯೂ ಅಸಮಾಧಾನ ಸ್ಪೋಟಗೊಂಡಿದೆ. ‘ನನಗೆ ಸಿಎಂ ಮಾಡಲೂ ಗೊತ್ತು, ಇಳಿಸಲು ಗೊತ್ತ ಎಂದು ಬಿ ಕೆ ಹರಿಪ್ರಸಾದ್‌ ಹೇಳಿದ್ದಾರೆ. ಹೀಗೆ ಹೇಳಿದ್ದು, ಮೂಲ ಕಾಂಗ್ರೆಸ್‌ನ ಒಬ್ಬ ಹಿಂದುಳಿದ ಸಮುದಾಯದ ನಾಯಕ” ಎಂದು ತಿಳಿಸಿದರು.

“ಕರ್ನಾಟಕವೇ ಭಾರತ ದೇಶ ಅಲ್ಲ. ಐದು ವರ್ಷ ಗೆದ್ದವರು ಮತ್ತೆ ಐದು ವರ್ಷ ಅವರ ಸರ್ಕಾರ ಬರಲೇ ಇಲ್ಲ. ಕಾಂಗ್ರೆಸ್‌ಗೆ ರಾಜ್ಯದಲ್ಲಿ ಭದ್ರ ಕೋಟೆ ಇಲ್ಲ ಎಂಬುದಕ್ಕೆ ಇದು ಉದಾಹರಣೆ. 300 ಲೋಕಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ತಳಹದಿಯೇ ಸಿಕ್ಕಿಲ್ಲ. ಕರ್ನಾಟಕ ಒಂದೇ ಭಾರತ ದೇಶ ಅಲ್ಲ, ನೀವು ಅಧಿಕಾರದಲ್ಲಿ ಇರುವುದು ಕೇವಲ ನಾಲ್ಕು ರಾಜ್ಯಗಳಲ್ಲಿ ಅಷ್ಟೇ. ಅದರಲ್ಲಿಯೂ ಎರಡು ರಾಜ್ಯಗಳಲ್ಲಿ ಹೊಂದಾಣಿಕೆಯಲ್ಲಿ ಇದ್ದೀರಿ” ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

Advertisements

“ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್‌ ಪಕ್ಷ ಕಟ್ಟಿ ಅಧಿಕಾರಕ್ಕೆ ತರುವುದಷ್ಟೇ ನಮ್ಮ ಗುರಿ. ಅದೇ ನಮ್ಮ ಹೋರಾಟ. ನಾವು ಒಟ್ಟಾಗಿ ಒಗ್ಗಟ್ಟಿನಿಂದ ಇದ್ದೇವೆ. ರಾಜ್ಯದಲ್ಲಿ ಜೆಡಿಎಸ್‌ ಗೆ ಸೋಲು ಆಗಿರಬಹುದು. ಅದೇನು ದೊಡ್ಡದಲ್ಲ. ರೈತ ಪರವಾದ ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ಈಗಲೂ ಮಹತ್ವ ಇದೆ. ಮಹಿಳೆಯರು, ಯುವಕರು, ರೈತರ ಬೆಂಬಲ ಇದ್ದೇ ಇದೆ. ಕುಮಾರಸ್ವಾಮಿ ನಾಯಕತ್ವದಲ್ಲಿಯೇ ಪಕ್ಷವನ್ನು ಮತ್ತೆ ಕಟ್ಟುತ್ತೇವೆ. ಜೆಡಿಎಸ್‌ ಸೋತಿರಬಹುದು ಸತ್ತಿಲ್ಲ, ಸಾಯುವುದೂ ಇಲ್ಲ” ಎಂದು ವಿಶ್ವಾಸವ್ಯಕ್ತಪಡಿಸಿದರು.

“ಬಿಜೆಪಿ ಜೊತೆಗೆ ಮೈತ್ರಿ ಹೋಗುವಂತಹ ವಿಚಾರ ರಾಷ್ಟ್ರೀಯ ಅಧ್ಯಕ್ಷರು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ‘ನಮ್ಮ ಗುರಿ ಒಂದೆ ನಾನು ಕಟ್ಟಿರುವ ಈ ಪಕ್ಷವನ್ನು ಸ್ವತಂತ್ರವಾಗಿ ಕಟ್ಟಬೇಕು. ಅದಕ್ಕಾಗಿ ಸೈನ್ಯ ಸಿದ್ಧ ಆಗಬೇಕು. ನನಗೆ ನಂಬಿಕೆ ಇದೆ, ರಾಜ್ಯದ ಜನ ನಮ್ಮನ್ನು ಕೈ ಬಿಡುವುದಿಲ್ಲ. ಸಮಾಜದ ಎಲ್ಲ ವರ್ಗ, ಸಮುದಾಯಗಳಿಗೂ ನಾನು ಒಳ್ಳೆಯದು ಮಾಡಿದ್ದೇನೆ. ಯಾವುದೇ ಒಂದು ಜಾತಿಗೆ ಮಾಡಿಲ್ಲ’ ಎಂದು ವರಿಷ್ಠರು ಹೇಳಿದ್ದರು. ಸರ್ವಾ ಜನಾಂಗದ ಶಾಂತಿಯ ತೋಟವನ್ನು ಮಾಡಿರುವವರು ದೇವೇಗೌಡರು ಮಾತ್ರ. ಆದರೆ, ಈಗ ಕಾಂಗ್ರೆಸ್‌ ಒಂದೊಂದೆ ಸಮುದಾಯವನ್ನು ಓಲೈಕೆ ಮಾಡುವ ಮೂಲಕ ಸಮುದಾಯಗಳು ಧಂಗೆ ಏಳುವಂತೆ ಮಾಡುತ್ತಿದೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಜೆಡಿಎಸ್‌ ಅಳಿಸಿಹಾಕಲು ಯಾರಿಂದಲೂ ಸಾಧ್ಯವಿಲ್ಲ: ಎಚ್‌ ಡಿ ದೇವೇಗೌಡ ತಿರುಗೇಟು

“ಜೆಡಿಎಸ್‌ ಪಕ್ಷದಲ್ಲಿ ದೇವೇಗೌಡರಿಗೆ ವಯಸ್ಸಾಯಿತು. ಅವರು ಇಲ್ಲದಿದ್ದರೆ ಈ ಪಕ್ಷ ಉಳಿಯುವುದಿಲ್ಲ. ಅವರಿಗೆ ಓಡಾಡಲು ಆಗುವುದಿಲ್ಲ. ಬಹಳ ಕಷ್ಟ ಇದೆ ಎಂದು ಎಲ್ಲರೂ ಭಾವಿಸಿದ್ದಾರೆ. ದೇವೇಗೌಡರು ದೆಹಲಿಯಲ್ಲಿ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಂದರ್ಭದ ಭಾಷಣದಲ್ಲಿ ‘ನಾನು ಮತ್ತೆ ಫಿನಿಕ್ಸ್‌ ರೀತಿ ಮೇಲೆ ಬರುತ್ತೇನೆ’ ಎಂದು ಮಾತಾಡಿದ ಭಾಷಣ ದಾಖಲೆಯನ್ನು ಸೇರಿದೆ. ನನ್ನ ಪಕ್ಷ ನಾನು ಬದುಕಿರುವಾಗಲೇ ಮುಳುಗಿ ಹೋಯಿತು ಎಂದು ಹೇಳುತ್ತಿದ್ದಾರಲ್ಲಾ. ಎಂದು ಯೋಚಿಸಿ ಮತ್ತೊಮ್ಮೆ ಸಿಡಿದೆದ್ದು ಬಂದು ನಮ್ಮೆಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮುಖಂಡರ ಸಭೆ ಕರೆದು ಶಾಸಕಾಂಗ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಕೇಳಿದರು. ದೇವೇಗೌಡರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧ ಎಂದು ಏಕ ಮನಸ್ಸಿನಿಂದ ಎಲ್ಲರೂ ಒಪ್ಪಿ ತೀರ್ಮಾನ ಮಾಡಿದೆವು” ಎಂದು ತಿಳಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X