ಪಕ್ಕಲಡ್ಕದ ಜಮಾಅತೇ ಇಸ್ಲಾಮೀ ಹಿಂದ್ ವತಿಯಿಂದ ಈದ್ ಸೌಹಾರ್ದ ಕೂಟವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮ ಸ್ನೇಹ ಸದನದ ಮರ್ಹೂಮ್ ಇಬ್ರಾಹಿಂ ಸಈದ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಯುವ ವಾಗ್ಮಿ ಎಸ್ ಐ ಓ ಮಾಜಿ ರಾಷ್ಟ್ರಾಧ್ಯಕ್ಷ ಜನಾಬ್ ಅಶ್ಫಾಕ್ ಅಹ್ಮದ್ ಶರೀಫ್, “ಧರ್ಮಗಳ ಸದಾಶಯ ಒಳಿತು ಮತ್ತು ಶಾಂತಿ. ಆದರೆ, ಇಂದು ಹಬ್ಬ ಎಂದರೆ ಭಯದ ವಾತಾವರಣ ನಿರ್ಮಾಣವಾಗಿದೆ. ಹಿಂದಿನ ಕಾಲದಲ್ಲಿ ಒಂದು ಧರ್ಮದ ಹಬ್ಬವನ್ನು ಎಲ್ಲರೂ ಸೇರಿ ಆಚರಿಸುತ್ತಿದ್ದೆವು. ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿದ ಸುಂದರ ಭಾರತದಲ್ಲಿ ಹಬ್ಬಗಳು ಸಮಾಜದಲ್ಲಿ ಪ್ರೀತಿ ಮತ್ತು ಸ್ನೇಹ ಬಿತ್ತರಿಸುವ ಆಚರಣೆಗಳಾಗಬೇಕು. ದ್ವೇಷದ ಪ್ರದರ್ಶನಗಳಾಗಬಾರದು” ಎಂದರು.
ಕೂಟದಲ್ಲಿ ಹ್ಯೂಮನ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಅಬ್ದುಲ್ ಗಫೂರ್ ಕುಳಾಯಿ, ನೂರುಲ್ ಅಮೀನ್ ಕೆ ಪಿ, ಸಂಚಾಲಕ ಸುಲೈಮಾನ್ ಪಕ್ಕಲಡ್ಕ, ಮಹಿಳಾ ಘಟಕ ಸಂಚಾಲಕಿ ಝೀನತ್ ಪಕ್ಕಲಡ್ಕ, ಖುರೇಷಾ ನುಶ್ರತ್, ಕಾರ್ಯದರ್ಶಿ ಅಶೀರುದ್ದೀನ್ ಸಾರ್ತಬೈಲ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಇದನ್ನೂ ಓದಿ: ಮಂಗಳೂರು | ನಿರ್ಭೀತ ವರದಿಗಾರಿಕೆ ಇಲ್ಲದ ಪತ್ರಿಕೋದ್ಯಮ ಅರ್ಥಹೀನ: ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ