ಶಿವಮೊಗ್ಗ ನಾಮಫಲಕಗಳ ತೆರವು ರಿಪ್ಪನ್ ಪೇಟೆಯ ಪಟ್ಟಣದ ಸಾಗರ ರಸ್ತೆಯ ಗ್ರಾಮ-ಓನ್ ಕೇಂದ್ರದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ತಹಶೀಲ್ದಾರ್ ರಶ್ಮಿ ಹಾಲೇಶ್ ವರದಿಯನ್ನಾಧರಿಸಿ ಗ್ರಾಮ-ಓನ್ ಕೇಂದ್ರದ ಲೈಸೆನ್ಸ್(ಐಡಿ)ನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ.
ಸಮಾಜದ ದುರ್ಬಲ ವರ್ಗದವರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಗ್ರಾಮ ಒನ್ ಕೇಂದ್ರಗಳು ಕೆಲವೆಡೆ ಭ್ರಷ್ಟಾಚಾರದ ಕೂಪಗಳಾಗಿ ಮಾರ್ಪಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಇಂತಹ ಆಘಾತಕಾರಿ ಘಟನೆಯೊಂದು ರಿಪ್ಪನ್ ಪೇಟೆ ಪಟ್ಟಣದ ಸಾಗರ ರಸ್ತೆಯ ಗ್ರಾಮ ಒನ್ ಕೇಂದ್ರದಲ್ಲಿ ಬೆಳಕಿಗೆ ಬಂದಿತ್ತು ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ರಫ಼ಿ ರಿಪ್ಪನ್ ಪೇಟೆ ಸ್ಥಳಕ್ಕೆ ತೆರಳಿ ಗ್ರಾಮ ಒನ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ನಂತರ ಸ್ಥಳಕ್ಕೆ ದೌಡಯಿಸಿದ ಉಪ ತಹಶೀಲ್ದಾರ್ ರವರಿಗೆ ಭ್ರಷ್ಟಾಚಾರದ ಕೂಪವಾಗಿರುವ ಈ ಗ್ರಾಮ ಒನ್ ಐಡಿಯನ್ನು ರದ್ದುಗೊಳಿಸುವಂತೆ ಮನವಿ ಸಲ್ಲಿಸಿದ್ದರು.
ಈ ಮನವಿಯನ್ನಾಧರಿಸಿ ಉಪ ತಹಶೀಲ್ದಾರ್ ಸ್ಥಳ ಮಹಜರು ನಡೆಸಿ ಆರೋಪದಲ್ಲಿ ಸತ್ಯಾಂಶವಿರುವ ಬಗ್ಗೆ ತಹಶೀಲ್ದಾರ್ ರಶ್ಮಿ ಹೆಚ್ ರವರಿಗೆ ವರದಿ ಸಲ್ಲಿಸಿದ್ದರು.
ಈ ಬಗ್ಗೆ ಮಾದ್ಯಮದವರೊಂದಿಗೆ ಮಾತನಾಡಿದ ತಹಶೀಲ್ದಾರ್ ರಶ್ಮಿ ಹಾಲೇಶ್ ರಿಪ್ಪನ್ ಪೇಟೆ ಪಟ್ಟಣದ ಸಾಗರ ರಸ್ತೆಯ ಗ್ರಾಮ-ಓನ್ ಕೇಂದ್ರದಲ್ಲಿ ಸಕಾಲ ಸೇವೆಗಳಿಗೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಕಂದಾಯ ಇಲಾಖೆಯ ವರದಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಕೇಂದ್ರದ ಐಡಿ ರದ್ದುಗೊಳಿಸುವಂತೆ ವರದಿ ಸಲ್ಲಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಇಂದು ಐಡಿ ರದ್ದಾಗಿದ್ದು ನಮ್ಮ ಸಿಬ್ಬಂದಿಗಳು ಸದರಿ ಕೇಂದ್ರದಲ್ಲಿದ್ದ ನಾಮಫಲಕಗಳನ್ನು ತೆರವುಗೊಳಿಸಿದ್ದಾರೆ ಎಂದರು.
ಹೊಸನಗರ ತಾಲೂಕಿನ ಯಾವುದೇ ಗ್ರಾಮ-ಓನ್ ಕೇಂದ್ರದಲ್ಲಿ ಹೆಚ್ಚುವರಿ ಹಣ ಕೇಳಿದರೇ ಹಾಗೂ ಸಕಾಲ ಸೇವೆಗೆ 21 ದಿನಗಳಾಗುತ್ತದೆ ಅದನ್ನು ಬೇಗ ಮಾಡಿಕೊಡಿತ್ತೇವೆ ಎಂದು ಹೆಚ್ಚಿಗೆ ಹಣ ಕೇಳಿದರೆ ನಮ್ಮ ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಅಥವಾ ನನಗೆ ನೇರ ಕರೆ ಮಾಡಿ ತಿಳಿಸಿ ಎಂದು ಹೇಳಿ ನಮ್ಮ ತಾಲೂಕಿನಲ್ಲಿ ನಮ್ಮ ಸಿಬ್ಬಂದಿಗಳು ಉತ್ತಮ ಸೇವೆ ನೀಡುವ ಮೂಲಕ ಸಕಾಲ ಸೇವೆಗಳು 2 ರಿಂದ 3 ದಿನಗಳಲ್ಲಿ ದೊರಕುತಿದ್ದು ಇದ್ದನೇ ಬಂಡವಾಳ ಮಾಡಿಕೊಂಡಿರುವ ಕೆಲವು ಮದ್ಯವರ್ತಿಗಳು ಹಾಗೂ ಗ್ರಾಮ-ಓನ್ ಸಿಬ್ಬಂದಿಗಳು ಹೆಚ್ಚುವರಿ ಹಣ ಕೇಳುತ್ತಿರುವ ಬಗ್ಗೆ ದೂರು ಬಂದಿದೆ ಎಂದರು.