ಕಾರ್ಗಿಲ್ ವಿಜಯದ 24ನೇ ವರ್ಷದ ಸಂಭ್ರಮಾಚರಣೆಯನ್ನು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘವು ರಾಯಚೂರಿನಲ್ಲಿ ಆಚರಿಸಿದೆ. ಮಾಜಿ ಸೈನಿಕರು ಬೈಕ್ ರ‍್ಯಾಲಿ ನಡೆಸಿ, ಸಂಭ್ರಮಾಚರಣೆ ಮಾಡಿದ್ದಾರೆ.
ನಗರದ ಎಲ್‌ವಿಡಿ ಮಹಾವಿದ್ಯಾಲಯದಿಂದ ಬೈಕ್ ರ‍್ಯಾಲಿ ಆರಂಭಿಸಿದ ಮಾಜಿ ಸೈನಿಕರು, ನಗರಾದ್ಯಂತ ಸಂಚರಿಸಿ ಅಂಬೇಡ್ಕರ್ ವೃತ್ತದಲ್ಲಿ ರ‍್ಯಾಲಿಯನ್ನು ಅಂತಿಮಗೊಳಿಸಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾಧ್ಯಕ್ಷ ಚನ್ನಾರೆಡ್ಡಿ ಮಾತನಾಡಿ, ವಿಜಯೋತ್ಸವದ ಸಾಧನೆ ಮತ್ತು ಸೈನಿಕರ ಮಾಡಿದ ತ್ಯಾಗ ಬಲಿದಾನದ ಕುರಿತು ವಿವರಿಸಿದರು.