ಮಚ್ಚಿನಿಂದ ಹೊಡೆದು ವ್ಯಕ್ತಿಯೋರ್ವನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ, ಶಿವಮೊಗ್ಗ ತಾಲೂಕಿನ ಕುಂಸಿ ಸಮೀಪದ ಚಿಕ್ಕಮರಸ ಗ್ರಾಮದಲ್ಲಿ ಜೂ. 29 ರ ರಾತ್ರಿ 9 ರಿಂದ 10 ಗಂಟೆ ಆಸುಪಾಸಿನಲ್ಲಿ ನಡೆದಿದೆ.
ಕೊಲೆ ಆದವನನ್ನ ವಾಸು ಯಾನೆ ವಸಂತ ಎಂದು ಗುರುತಿಸಲಾಗಿದ್ದು ಆತನಿಗೆ 32 ವರ್ಷ ಎಂದು ತಿಳಿದು ಬಂದಿದೆ. ವಾಸುವಿನ ಕೊಲೆಯನ್ನ ಮಲ್ಲೇಶಪ್ಪನವರ ಮಕ್ಕಳಿಂದ ಆಗಿದೆ ಎನ್ನಲಾಗಿದ್ದು ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ನಡೆದಿದೆ.
ಹರೀಶ ಮತ್ತು ಆಕಾಶ ಎಂಬ ಆರೋಪಿಗಳಿಂದ ಕೊಲೆ ನಡೆದಿದೆ ಎನ್ನಲಾಗಿದೆ. ಮಲ್ಲೇಶಪ್ಪನ ಸಾವಾಗಿ ಅನೇಕ ತಿಂಗಳುಗಳ ಕಳೆದಿದೆ.
ಮಲ್ಲೇಶಪ್ಪನ ಪತ್ನಿಯ ಜೊತೆ ವಾಸುವಿನ ಅನೈತಿಕ ಸಂಬಂಧವಿತ್ತು ಎಂಬ ಶಂಕೆ ಹಿನ್ನಲೆಯಲ್ಲಿ ಆತನ ಮಕ್ಕಳೇ ಕೊಲೆ ಮಾಡಿರುವ ಸಾಧ್ಯತೆ ಹೆಚ್ಚಾಗಿದೆ.
ಕೊಲೆ ಮಾಡಿದವರೆಲ್ಲ ವಯಸ್ಕರಾಗಿದ್ದು, ಸದ್ಯಕ್ಕೆ ಹರೀಶ ಮತ್ತು ಆಕಾಶಗಾಗಿ ತೀವ್ರ ಶೋಧಕಾರ್ಯ ನಡೆದಿದೆ.
ಕೊಲೆಯಾದ ವಾಸು ಯಾನೆ ವಸಂತ ಕೂಲಿಕೆಲಸ ಮಾಡಿಕೊಂಡು ಜೀವನಸಾಗಿಸುತ್ತಿದ್ದ. ಆತನಿಗೂ ಮದುವೆಯಾಗಿ ಮಕ್ಕಳಿದ್ದಾರೆ. ತಲೆಗೆ ಮಚ್ಚುಬೀಸಿ ಕೊಲೆ ಮಾಡಲಾಗಿದ್ದು ರಕ್ತ ಮಡುವಿನಲ್ಲಿ ವಸಂತ ಪ್ರಾಣ ಬಿಟ್ಟಿದ್ದಾನೆ. ನಿನ್ನೆ ರಾತ್ರಿಯೇ ಈ ಘಟನೆ ನಡೆದಿದೆ.