ವರಿಷ್ಠರ ತೀರ್ಮಾನಕ್ಕೆ ಹೆದರಿದ ವಿರೋಧಿಗಳಿಂದ ಸಾಮೂಹಿಕ ನಾಯಕತ್ವದ ಜಪ!!!
ರಾಜ್ಯ ಬಿಜೆಪಿಯಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷದ ಆಂತರಿಕ ರಾಜಕಾರಣದ ಗುಟ್ಟುಗಳನ್ನು ಮತ್ತಷ್ಟು ಬಹಿರಂಗಪಡಿಸುತ್ತಿವೆ. ಸದ್ಯ ಸಾಮೂಹಿಕ ನಾಯಕತ್ವದ ಜಪ ಹೌದು ಎಂದರೂ, ನಿಜಕ್ಕೂ ಯಾರ ಕೈಗೆ ನಾಯಕತ್ವ ನೀಡಿದರೆ ಉತ್ತಮ ಎಂಬ ಪ್ರಶ್ನೆಗೆ ಹೈಕಮಾಂಡ್ ನಾಯಕರಲ್ಲಿ ಸ್ಪಷ್ಟ ಉತ್ತರವಿಲ್ಲ. ಕೇಂದ್ರ ಹಾಗೂ ರಾಜ್ಯದ ನಾಯಕರ ಒಳ ಜಗಳಗಳು ಹೆಚ್ಚಾದ ಕಾರಣ, ತಾತ್ಕಾಲಿಕ ಶಮನಕ್ಕಾಗಿ ಮತ್ತೆ ಯಡಿಯೂರಪ್ಪನವರನ್ನೇ ಆಶ್ರಯಿಸಿರುವಂತಿದೆ. ಇದಕ್ಕೆ ಸಾಕ್ಷಿಯಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿ ಯಡಿಯೂರಪ್ಪನವರನ್ನು ಭೇಟಿಯಾಗಿರುವುದು. ಈ ಭೇಟಿಯ ಹಿಂದೆ ಕೇವಲ ಶಿಷ್ಟಾಚಾರದ ನೆಪವಿರಲಿಲ್ಲ, ಅದರ ಹಿಂದೆ ಪಕ್ಷದಲ್ಲಿ ನಡೆಯುತ್ತಿರುವ ಹಲವು ಭಿನ್ನ ಚಟುವಟಿಕೆಗಳು ಕಾರಣವಾಗಿದ್ದವು. ಈ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ.