ನೀವು ಇತರೆ ಭಾರತೀಯರಂತೆ ಕಾಣಲ್ಲ: ಕೆನಡಾದಲ್ಲಾದ ವರ್ಣಭೇದ ಅನುಭವ ಹಂಚಿಕೊಂಡ ಮಹಿಳೆ

Date:

ಕೆನಡಾದ ಟೊರೊಂಟೊದಲ್ಲಿ ವಾಸವಿರುವ ಭಾರತೀಯ ಮಹಿಳೆಯೊಬ್ಬರು ತಮಗಾದ ವರ್ಣಭೇದ ಅನುಭವವನ್ನು ಹಂಚಿಕೊಂಡಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಮಗಾದ ಈ ಅನುಭವವನ್ನು ಎನ್‌ಆರ್‌ಐ ಮಹಿಳೆಯೊಬ್ಬರು ವಿವರಿಸಿದ್ದಾರೆ.

- Advertisement -

ಈ ಬಗ್ಗೆ ರೆಡ್ಡೀಟ್‌ನಲ್ಲಿ ಮಹಿಳೆ ಪೋಸ್ಟ್ ಮಾಡಿದ್ದು, “ಇತ್ತೀಚೆಗೆ ಆದ ಘಟನೆಯೊಂದು ನಾನು ಈ ಪೋಸ್ಟ್ ಮಾಡುವಂತಹ ಸಂದರ್ಭವನ್ನು ಸೃಷ್ಟಿಸಿದೆ. ನಾನು ಸ್ಪಾನಲ್ಲಿದ್ದೆ. ಬಿಳಿ ವರ್ಣೀಯ ಮಹಿಳೆಯೊಬ್ಬರು ನೀವು ಎಲ್ಲಿಯವರು ಎಂದು ನನ್ನನ್ನು ಪ್ರಶ್ನಿಸಿದರು. ನಾನು ಭಾರತದವಳು ಎಂದು ಹೇಳಿದೆ. ಅದಾದ ಬಳಿಕ ‘ನೀವು ಇಲ್ಲಿಗೆ ಬಂದ ಬಳಿಕ ಇಂಗ್ಲೀಷ್ ಕಲಿತಿದ್ದೀರಾ? ನಿಮ್ಮ ಇಂಗ್ಲೀಷ್‌ ನನ್ನಂತೆಯೇ ಇದೆ ಎಂದೆಲ್ಲ ಹೇಳಿದರು. ನಾನು ಜೀವನದುದ್ದಕ್ಕೂ ಇಂಗ್ಲೀಷ್‌ನಲ್ಲಿ ಮಾತನಾಡಿರುವುದಾಗಿ ಹೇಳಿದೆ” ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಇದನ್ನು ಓದಿದ್ದೀರಾ? ವರ್ಣಭೇದ | ಕಪ್ಪು ಮುಖದ ಚಿತ್ರ ಹಂಚಿಕೊಂಡಿದ್ದ ಕ್ರಿಕೆಟ್ ಟೀಂ-ಇಂಗ್ಲೆಂಡ್ ನಾಯಕಿಗೆ ₹11 ಲಕ್ಷ ದಂಡ

ಹಾಗೆಯೇ, “ನಾನು ಪೆಡಿಕ್ಯೂರ್ ಮುಗಿಸಿ ಅಲ್ಲಿಂದ ಹೊರ ಬರುವವರೆಗೂ ಆ ಮಹಿಳೆ ನನ್ನನ್ನು ದಿಟ್ಟಿಸಿ ನೋಡುತ್ತಲೇ ಇದ್ದರು. ನಾನು ಅದಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದು ನನಗೆ ತಿಳಿಯಲಿಲ್ಲ. ಈ ಘಟನೆಯು ನಾನು ದಿಢೀರ್ ಕೋಪಗೊಳ್ಳುವಂತೆ ಇರದಿದ್ದರೂ ನಾನು ಗಮನಿಸಿಯೂ ಸುಮನ್ನೆ ಇರುವಂತಹ ಘಟನೆ ಇದಲ್ಲ. ಇಂತಹ ಘಟನೆಗಳು ಆಗಾಗೇ ನಡೆಯುತ್ತದೆ” ಎಂದು ಮಹಿಳೆ ಪೋಸ್ಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

racism

“ನಾನು ದೇಹದ ಬಣ್ಣ ಕೊಂಚ ಬಿಳಿಯಿದೆ. ಆದ್ದರಿಂದಾಗಿ ನನ್ನನ್ನು ನೋಡಿ ನೀವು ಇತರೆ ಭಾರತೀಯರಂತೆ ಕಾಣುವುದಿಲ್ಲ ಎಂದು ಹೇಳುತ್ತಾರೆ. ಅದು ನಾನು ಮೆಚ್ಚುಗೆ ಎಂದು ಹೇಗೆ ಪರಿಗಣಿಸಲಾಗುತ್ತದೆ? ನೀವು ಇಂತಹ ಸಂದರ್ಭ ಬಂದಾಗ ಏನು ಮಾಡುತ್ತೀರಿ? ಬಿಟ್ಟುಬಿಡುತ್ತೀರಾ ಅಥವಾ ಮಾತನಾಡುತ್ತೀರಾ? ಈ ಸಂದರ್ಭವನ್ನು ಹೇಗೆ ನಿಭಾಯಿಸುತ್ತೀರಿ” ಎಂದು ಮಹಿಳೆ ನೆಟ್ಟಿಗರನ್ನು ಪ್ರಶ್ನಿಸಿದ್ದಾರೆ.

ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ನೆಟ್ಟಿಗರು ಇದು ಸಾಮಾನ್ಯ ಎಂದರೆ ಇನ್ನು ಕೆಲವು ನೆಟ್ಟಿಗರು ಇದು ವರ್ಣಭೇದ ಎಂದು ಹೇಳಿದ್ದಾರೆ. ಇನ್ನು ಕೆಲವರು “ಇಂತಹ ಸಂದರ್ಭವನ್ನು ತೀರ ವೈಯಕ್ತಿಕವಾಗಿ ತೆಗೆದುಕೊಳ್ಳದೆ ಸಭ್ಯವಾಗಿ ಪ್ರತಿಕ್ರಿಯಿಸಿ” ಎಂದು ಸಲಹೆ ನೀಡಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ಸಾಫ್ಟ್‌ವೇರ್ ದೋಷ: ಹೈಕೋರ್ಟ್ ಮೆಟ್ಟಿಲೇರಿದ ಗೋವಾದ ನಾಗರಿಕನ ಹೋರಾಟ

ಉತ್ತರ ಗೋವಾದ ಸಾಂತಾಕ್ರೂಜ್ ಕ್ಷೇತ್ರದ ನಿವಾಸಿ, 41 ವರ್ಷದ ಪರೇಶ್ ಸಾಲ್ಗಾಂವ್ಕರ್...

ತಿರುಪತಿ ಬಳಿ ಭೀಕರ ಬಾಯ್ಲರ್ ಸ್ಫೋಟ: ಐವರು ಕಾರ್ಮಿಕರ ಸಾವು, 10 ಮಂದಿಗೆ ಗಂಭೀರ ಗಾಯ

ಟಿಐಎಲ್ ಹೆಲ್ತ್‌‌ಕೇರ್ ಫಾರ್ಮಾಸ್ಯುಟಿಕಲ್ಸ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು ಕನಿಷ್ಠ ಐವರು ಕಾರ್ಮಿಕರು...

‘ದಿಮಾಗಿ ನಕ್ಸಲ್’ ಟೀಕೆಗಳಿಗೆ ಬಗ್ಗದಿರಿ, ಹೋರಾಟ ಮುಂದುವರಿಸಿ: ಪರಿಸರವಾದಿಗಳಿಗೆ ನಿವೃತ್ತ ಸುಪ್ರೀಂ ನ್ಯಾಯಮೂರ್ತಿ ಓಕಾ ಕರೆ

ಪರಿಸರ ರಕ್ಷಣೆ ಮತ್ತು ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವ ಹೋರಾಟಗಾರರನ್ನು ‘ದಿಮಾಗಿ...

ಮುಂಬೈ ಪ್ರತಿಭಟನೆ: ಸಿಜೆಪಿ ಆಯೋಜಕರು, 500ಕ್ಕೂ ಹೆಚ್ಚು ಜನರ ವಿರುದ್ಧ ಎಫ್‌ಐಆರ್ ದಾಖಲು

ಮುಂಬೈನ ಪ್ರಸಿದ್ಧ ಶಿವಾಜಿ ಪಾರ್ಕ್‌ನಲ್ಲಿ ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ ಆರೋಪದ ಮೇಲೆ...