ʼಮಂಡ್ಯದ ಗಾಂಧಿʼ ಕೃಷ್ಣರ ನೆನಪು; ಸಾಧಕರಿಗೆ ‘ಕೃಷ್ಣ ಪುರಸ್ಕಾರ’

Date:

Advertisements

ಮಂಡ್ಯದ ಗಾಂಧಿ, ಮಾಜಿ ಸ್ಪೀಕರ್ ಕೆ ಆರ್ ಪೇಟೆ ಕೃಷ್ಣ ಅವರ ಹುಟ್ಟುಹಬ್ಬದ ಪ್ರಯುಕ್ತ ಸಾಧಕರಿಗೆ ʼಕೃಷ್ಣ ಪುರಸ್ಕಾರʼ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕೃಷ್ಣ ಪ್ರತಿಷ್ಠಾನದ ವತಿಯಿಂದ ಕೆ ಆರ್ ಪೇಟೆ ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ನಡೆಸಿದ ಈ ಕಾರ್ಯಕ್ರಮದಲ್ಲಿ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷ ಜವರಾಯಿಗೌಡ ಮಾತನಾಡಿ, “ಕೃಷ್ಣ ಅವರಂತಹ ಸರಳ, ಸಜ್ಜನಿಕೆ ಹಾಗೂ ಪ್ರಾಮಾಣಿಕ ರಾಜಕಾರಣಿಯನ್ನು ಇಂದಿನ ದಿನಮಾನಗಳಲ್ಲಿ ನೋಡಲು ಸಾದ್ಯವಿಲ್ಲ. ಅವರಂತಹ ಸಜ್ಜನ ವ್ಯಕ್ತಿತ್ವದ ರಾಜಕಾರಣಿಯ ಜನ್ಮ ದಿನದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತರು ಹಾಗೂ ಮುಂದಿನ ಪೀಳಿಗೆಯ ಕಣ್ಣುಗಳಾಗಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ಟ್ರಸ್ಟ್‌ನ ಪರವಾಗಿ ಮೊದಲಿನಿಂದಲೂ ಆರ್ಥಿಕ ಸಹಕಾರ ನೀಡುವ ಮೂಲಕ ಸಹಕಾರ ನೀಡುತ್ತಿದ್ದು, ನಿಮ್ಮೆಲ್ಲರಿಗೂ ಕೃತಜ್ಞತಾ ಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ” ಎಂದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕ, ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರು ಆದ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ, ಕೆ ಆರ್ ಪೇಟೆ ಕೃಷ್ಣ ಅವರ ಜನ್ಮ ದಿನಾಚರಣೆಯನ್ನು ಸದಭಿರುಚಿಯಿಂದ ಆಚರಣೆ ಮಾಡುತ್ತಿರುವುದು ಸ್ವಾಗತಾರ್ಹ. ಕೃಷ್ಣ ಅವರು ಬುದ್ಧ, ಬಸವಣ್ಣ, ಲೋಹಿಯಾ, ಅಂಬೇಡ್ಕರ್ ಅವರನ್ನು ಓದಿಕೊಂಡು ಅವರ ಮೌಲ್ಯಯುತ ಜೀವನವನ್ನು ರೂಢಿಸಿಕೊಂಡಿರುವವರು. ಇದಲ್ಲದೆ ಅಂಬೇಡ್ಕರ್ ಅವರ ಪ್ರತಿರೂಪವಾಗಿರುವ ಬಸವಲಿಂಗಪ್ಪ ಅವರ ಜೊತೆ ಜೊತೆಗೆ ಇದ್ದವರು. ಜಾತ್ಯತೀತ ಮನೋಭಾವದ ವ್ಯಕ್ತಿತ್ವ ಹೊಂದಿದ್ದವರು. ಗಾಂಧಿ ಅವರ ವೈಜಾರಿಕತೆಯನ್ನು ಕೃಷ್ಣ ಮೈಗೂಡಿಸಿಕೊಂಡು ಸರಳತೆಯ ಸಾಕಾರ ಮೂರ್ತಿಯಾಗಿ, ಸಮಾಜವಾದಿ ಹಿನ್ನಲೆಯಿಂದ ಮಂಡ್ಯದ ಗಾಂಧಿ ಎಂದೇ ಖ್ಯಾತಿ ಪಡೆದಿದ್ದಾರೆ. ಇನ್ನು ಕೃಷ್ಣ ಅವರ ಸಮಕಾಲೀನರು ಆಗಿರುವ ಬಿ. ಆರ್ ಪಾಟೀಲ್ ಕೂಡ ಸರಳ ಹಾಗೂ ಸಜ್ಜನಿಕೆ ರಾಜಕಾರಣಿ. ಅಧಿಕಾರದಲ್ಲಿ ಇದ್ದರೂ ಇಲ್ಲದೆ ಇದ್ದರೂ ಸತ್ಯ ಹೇಳುವ ದೈರ್ಯ ಮಾಡಿದ್ದಾರೆ” ಎಂದು ಹೇಳಿದರು.

Advertisements
WhatsApp Image 2025 07 01 at 3.29.57 PM 1

ಟಿಎಪಿಸಿಎಂಎಸ್ ಅಧ್ಯಕ್ಷ ಬಿ ಎಲ್ ದೇವರಾಜ್ ಮಾತನಾಡಿ, “ಒಳ್ಳೆ ಆಡಳಿತ ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡಿದರೆ ಜನರು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂಬುದಕ್ಕೆ ಕೃಷ್ಣ ಅವರೇ ಉತ್ತಮ ಉದಾಹರಣೆ. ಅವರು ಎಂದು ಕೂಡ ಸಮಯ ವ್ಯರ್ಥ ಮಾಡಿದವರಲ್ಲ. ಓದುವುದು, ಚರ್ಚೆ ಮಾಡುವುದು ಜನ ಸಾಮಾನ್ಯರ ಜೊತೆ ಬೆರೆಯುವುದನ್ನು ಎಂದೂ ಮರೆತವರಲ್ಲ. ಈಗಿನ ಕಾಲದ ರಾಜಕಾರಣಿಗಳ ರೀತಿ ರಿಯಲ್ ಎಸ್ಟೇಟ್ ಕುರಿತ ಮಾತುಕತೆ, ವ್ಯಾವಹಾರಿಕವಾಗಿ ಮಾತನಾಡುವುದನ್ನು ಎಂದೂ ಕೂಡ ಅಧಿಕಾರಿಗಳ ಜೊತೆ ಮಾತನಾಡಿದವರಲ್ಲ. ಇಂದಿನ ರಾಜಕಾರಣಿಗಳು ಕೃಷ್ಣ ಅವರ ಬಗ್ಗೆ ತಿಳಿದು ಕಲಿಯಬೇಕು. ಕೃಷ್ಣ ಪುರಸ್ಕಾರಕ್ಕೆ ಭಾಜನರಾಗಿರುವ ಗಣ್ಯರು ಒಂದಲ್ಲ ಒಂದು ರೀತಿಯಲ್ಲಿ ತಮ್ಮನ್ನು ತಾವು ಸಮಾಜದ ಪರವಾಗಿ ತಮ್ಮ ಜೀವನವನ್ನೇ ಅರ್ಪಿಸಿಕೊಂಡವರು. ಅಂತವರಿಗೆ ಸನ್ಮಾನ ಮಾಡಿ ಗೌರವಿಸುತ್ತಿರುವುದು ಶ್ಲಾಘನೀಯ” ಎಂದರು.

ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಕ್ಷೇತ್ರದ ಶಾಸಕ ಬಿ ಆರ್ ಪಾಟೀಲ್ ಮಾತನಾಡಿ, “ಕೃಷ್ಣ ಅವರು ಇತ್ತೀಚಿನ ದಿನಗಳಲ್ಲಿ ರಾಜಕೀಯದಿಂದ ದೂರ ಉಳಿದ್ದಿದ್ದರೂ ರಾಜಕಾರಣದ ಬಗ್ಗೆ ಆಸಕ್ತಿ ಹೊಂದಿದ್ದರು ಎಂದರೆ ತಪ್ಪಾಗಲಾರದು. ಕೃಷ್ಣ ಅವರು ಯಾವತ್ತೂ ದುಡ್ಡಿನ ಬಗ್ಗೆ ಯೋಚನೆ ಮಾಡಿದವರೇ ಅಲ್ಲ. ಗಾಂಧಿ, ಅಂಬೇಡ್ಕರ್ ಲೋಹಿಯಾ ಅವರ ತತ್ವ ಸಿದ್ಧಾಂತಗಳು ನಮ್ಮನ್ನೆಲ್ಲ ಮುನ್ನೆಲೆಗೆ ಬರುವಂತೆ ಮಾಡಿವೆ. ಆದರೆ, ಕೆಲವು ವಿಚಾರಗಳು ನಮ್ಮನ್ನು ಕಟ್ಟಿ ಹಾಕಿರುತ್ತವೆ. ಅದನ್ನೆಲ್ಲ ಮೀರಿ ಸಮಾಜ ಮುಖಿಯಾಗಿ ಜೀವನ ನಡೆಸಿದವರು ಕೃಷ್ಣ ಅವರು, ಇಷ್ಟೇ ಅಲ್ಲದೆ ಅಧಿಕಾರ ಅಂತಸ್ತು ಎಲ್ಲಾ ಕೈಯ್ಯಲ್ಲಿದ್ದರೂ ಎಂದೂ ಅಹಂ ಪಟ್ಟವರಲ್ಲ. ಅಧಿಕಾರವನ್ನು ತಲೆಗೆ ಹಾಕಿಕೊಂಡವರಲ್ಲ. ಇತ್ತೀಚಿನ ರಾಜಕಾರಣ ನೋಡಿದರೆ ನನ್ನನ್ನು ಸೇರಿಸಿಕೊಂಡಂತೆ ಇಲ್ಲಿರುವ ಬಹುತೇಕರ ಕಾಲ ಮುಗಿದು ಹೋಗಿದೆ. ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವುದು ಹಣದ ಮೇಲಿನ ರಾಜಕಾರಣ. ನಮ್ಮಂಥವರು ಇಂತಹ ಪರಿಸ್ಥಿತಿಯಲ್ಲಿ ರಾಜಕಾರಣ ಮಾಡಲು ಸಾದ್ಯವೇ ಇಲ್ಲ. ಇವೆಲ್ಲವನ್ನೂ ಕೃಷ್ಣ ಅವರು ತಮ್ಮ ಪುಸ್ತಕದಲ್ಲಿ ಸ್ವತಃ ತಾವೇ ತಮ್ಮ ಅನುಭವದಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈಗಿನ ರಾಜಕೀಯ ಪಕ್ಷಗಳು ಸಹ ಸರಿಯಿಲ್ಲ” ಎಂದು ಹೇಳಿದರು.

WhatsApp Image 2025 07 01 at 3.29.58 PM 1

“ಕೃಷ್ಣ ಅವರ ಕಾಲದಲ್ಲಿ ಸೂಟ್ ಕೇಸ್ ರಾಜಕಾರಣ ಇರಲಿಲ್ಲ. ವಿಶೇಷ ಎಂದರೆ ಜನರೇ ನಾಯಕನನ್ನು ಆಯ್ಕೆಮಾಡಿ, ಜನರೇ ಹಣ ಕೊಟ್ಟು ಚುನಾವಣೆಯಲ್ಲಿ ಗೆಲ್ಲಿಸುವ ಕೆಲಸ ಮಾಡಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಜನಪರ ಚಳವಳಿಗಳು ಜೀವಂತವಾಗಿರಬೇಕು. ಚಳವಳಿಗಳು ಜೀವಂತವಾಗಿದ್ದರೆ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಆಗಬೇಕು ನಾವೆಲ್ಲರೂ ಚಳವಳಿಯ ಭಾಗವಾಗಿರಬೇಕು. ಕೃಷ್ಣ ಅವರ ಕನಸಿನ ರೀತಿ ಎಲ್ಲರೂ ಒಂದೇ ಎಂಬಂತೆ ಸಮ ಸಮಾಜ ನಿರ್ಮಾಣ ಮಾಡಬೇಕು. ವಿಚಾರ ವಿನಮಯ ಆಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲ ಕಾರ್ಯಪ್ರವೃತ್ತರಾಗಬೇಕು” ಎಂದರು.

ಇದನ್ನೂ ಓದಿ: ಮಂಡ್ಯ | ಮಾದಿಗರ ಕಿವಿಗೆ ಸರ್ಕಾರ ಹೂ ಮುಡಿಸಿದೆ : ಭಾಸ್ಕರ್ ಪ್ರಸಾದ್ ಕಿಡಿ

ಈ ವೇಳೆ ಸಮಾಜದ ವಿವಿಧ ಸ್ಥರಗಳಲ್ಲಿ ಸಾಧನೆಗೈದ ಪ್ರೊ. ಕಾಳೇಗೌಡ ನಾಗವಾರ, ಹಿರಿಯ ರೈತ ಮುಖಂಡ ಎಂ ವಿ ರಾಜೇಗೌಡ, ಖ್ಯಾತ ವೈದ ಡಾ. ಕೃಷ್ಣ ಕಿಕ್ಕೇರಿ ಹಾಗೂ ಪ್ರಗತಿಪರ ರೈತ ವಿಠಲಪುರ ಸುಬ್ಬೇಗೌಡ ಅವರಿಗೆ ಪ್ರತಿಷ್ಠಾನದ ವತಿಯಿಂದ ʼಕೃಷ್ಣ ನಾಗರಿಕ ಪುರಸ್ಕಾರʼ ನೀಡಿ ಗೌರವಿಸಲಾಯಿತು.

ಈ ವೇಳೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ದೃತಿ, ಕುಮುದಾ, ಕಾವ್ಯ, ರೇವಂತ್ ಗಣೇಶ್, ಪಿಯುಸಿ ವಿದ್ಯಾರ್ಥಿಗಳಾದ ಅಭಿಷೇಕ್, ನಿಶಾ ಟಿ ಜೆ, ವೈಷ್ಣವಿ ಅವರಿಗೆ ಪುರಸ್ಕರಿಸಿ ಗೌರವಿಸಲಾಯಿತು.

WhatsApp Image 2025 07 01 at 3.29.57 PM

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಪಂಕಜ ಪ್ರಕಾಶ್, ಆರ್‌ಟಿಒ ಮಲ್ಲಿಕಾರ್ಜುನ್, ಹರೀಶ್, ರವಿ, ಕೃಷ್ಣ ಪ್ರತಿಷ್ಠಾನದ ಗೌರವಾಧ್ಯಕ್ಷೆ ಪ್ರೊ.ಇಂದಿರಮ್ಮ ಕೃಷ್ಣ, ಉಪಾಧ್ಯಕ್ಷ ಚಂದ್ರೇಗೌಡ, ಕಾರ್ಯದರ್ಶಿಗಳಾದ ವಾಸು, ಮಂಜುಳಾ, ರಮೇಶ್, ಚನ್ನಂಗೇಗೌಡ, ಅಂಬರೀಷ್, ಮಂಜುನಾಥ್, ಮೋಹನ್, ಶಿವಣ್ಣ, ಪರಮೇಶ್ ತಿಮ್ಮೇಗೌಡ, ಮಹೇಶ್, ಜಯರಾಜ್, ಸಣ್ಣಸ್ವಾಮಿ ಗೌಡ, ಹರೀಶ್, ನಾಗರಾಜ್ ಸೇರಿದಂತೆ ಕೃಷ್ಣ ಅವರ ನೂರಾರು ಅಭಿಮಾನಿಗಳು, ಸ್ನೇಹಿತರು, ಇತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X