ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಕರ್ಸೋಗ್ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟದಿಂದಾಗಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು 16 ಮಂದಿ ನಾಪತ್ತೆಯಾಗಿದ್ದಾರೆ. ಅಧಿಕಾರಿಗಳ ಪ್ರಕಾರ ಮಂಡಿ ಜಿಲ್ಲೆಯ ಕನಿಷ್ಠ ನಾಲ್ಕು ಸ್ಥಳಗಳಲ್ಲಿ ಮೇಘಸ್ಫೋಟ ಸಂಭವಿಸಿದೆ.
ಹಲವು ಮನೆಗಳು, ವಾಹನಗಳು ಮತ್ತು ಸೇತುವೆಗಳು ಕೂಡ ದಿಢೀರ್ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ದಿಢೀರ್ ಪ್ರವಾಹದಿಂದಾಗಿ 16 ಮೆಗಾವ್ಯಾಟ್ ಪಟಿಕಾರಿ ಜಲವಿದ್ಯುತ್ ಯೋಜನೆಯ ಕಾರ್ಯಕ್ಕೂ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹಿಮಾಚಲ ಪ್ರದೇಶ | ಮಳೆಯ ಅಬ್ಬರ; ಭೂಕುಸಿತಕ್ಕೆ 350 ಮಂದಿ ಬಲಿ
ಬಿಯಾಸ್ ನದಿಯಲ್ಲಿ ನೀರಿನ ಮಟ್ಟ ಅಪಾಯಕಾರಿ ಮಟ್ಟಕ್ಕೆ ಏರಿದ್ದು ಮಧ್ಯರಾತ್ರಿಯಲ್ಲಿ ಇಡೀ ಪಾಂಡೋಹ್ ಬಜಾರ್ ಅನ್ನು ಸ್ಥಳಾಂತರಿಸಬೇಕಾಯಿತು. ಮಂಡಿಯ ಪಾಂಡೋಹ್ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು ಕಿರಾತ್‌ಪುರ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಬಂಧಿಸಲಾಗಿದೆ.
Mandi looks like this today under monsoon conditions. pic.twitter.com/oUCWBBb8f1
— Go Himachal (@GoHimachal_) July 1, 2025
ಮಂಡಿ ಪಟ್ಟಣದ ಜೈಲ್ ರಸ್ತೆಯಲ್ಲಿ, ಭೂಕುಸಿತ ಉಂಟಾಗಿದ್ದು ಸುಮಾರು ಒಂದು ಡಜನ್ ವಾಹನಗಳು ಮಣ್ಣಿನಡಿ ಸಿಲುಕಿದೆ. ಸಯಾತಿ ಗ್ರಾಮದಲ್ಲಿ ಅನೇಕ ಮನೆಗಳು ಮಣ್ಣಿನಡಿ ಹೂತುಹೋಗಿವೆ. ತಡರಾತ್ರಿ ರಕ್ಷಣಾ ಕಾರ್ಯಾಚರಣೆ ನಡೆಸಿ ಮಂಡಿ ಜಿಲ್ಲೆಯ ರಘುನಾಥ್ ಕಾ ಪಧಾರ್ ಗ್ರಾಮದಲ್ಲಿ ಹಠಾತ್ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ 12 ಜನರನ್ನು ರಕ್ಷಿಸಲಾಗಿದೆ.
