ಹಿಮಾಚಲ ಪ್ರದೇಶ | ಮಳೆಯ ಅಬ್ಬರ; ಭೂಕುಸಿತಕ್ಕೆ 350 ಮಂದಿ ಬಲಿ

Date:

ಹಿಮಾಚಲ ಪ್ರದೇಶದಲ್ಲಿ ಮುಂಗಾರು ಮಳೆ ಅಬ್ಬರಿಸುತ್ತಿದೆ. ಗುಡ್ಡಗಾಡು ರಾಜ್ಯದಲ್ಲಿ ಮಳೆ ಸೃಷ್ಟಿಸಿರುವ ಅವಾಂತರದಿಂದ ಗುಡ್ಡಗಳು ಕುಸಿದಿವೆ. ಇದೂವರೆಗೂ 346 ಮಂದಿ ಸಾವನ್ನಪ್ಪಿದ್ದಾರೆ. 2,200 ಮನೆಗಳು ಸಂಪೂರ್ಣ ನಾಶವಾಗಿವೆ. ಮಾತ್ರದಲ್ಲದೆ, ಸುಮಾರು 10,000ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹಲವಾರು ಜನರನ್ನು ರಕ್ಷಣಾ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿನ ಜನರ ಬದುಕು ಜರ್ಜರಿತವಾಗಿದೆ.

ಹಿಮಾಚಲ ಪ್ರದೇಶದ ಶಿಮ್ಲಾ ನಗರವು ಆಗಸ್ಟ್‌ 2ನೇ ವಾರದಲ್ಲಿ ಭಾರೀ ಮಳೆ ಕಂಡಿದೆ. ಮೂರು ಭೀಕರ ಭೂಕುಸಿತವಾಗಿವೆ. ಅಪಾರ ಜೀವ-ಆಸ್ತಿ ನಷ್ಟವಾಗಿದೆ. ಆಗಸ್ಟ್‌ 14ರಂದು ಆರಂಭವಾದ ಶ್ರಾವಣ ಮಾಸ ಹಿನ್ನೆಲೆ ಹೆಚ್ಚಿನ ಭಕ್ತರು ಇಲ್ಲಿನ ದೇವಾಲಯಗಳಿಗೆ ಭೇಟಿ ನೀಡಿದ್ದರು. ಇದರಿಂದಾಗಿ, ಮತ್ತಷ್ಟು ಹೆಚ್ಚಿನ ಹಾನಿಯಾಗಿದೆ. ಆಗಸ್ಟ್‌ನಲ್ಲಿ ಹಿಮಾಚಲದ ಕಾಂಗ್ರಾದಲ್ಲಿ ಸುಮಾರು 273 ಮಿ.ಮೀ ಮಳೆ ದಾಖಲಾಗಿದೆ. ಸುಜನ್‌ಪುರದಲ್ಲಿ 254 ಮಿಮೀ, ಧರ್ಮಶಾಲಾದಲ್ಲಿ 250 ಮಿಮೀ, ಜೋಗಿಂದರ್‌ನಗರದಲ್ಲಿ 175 ಮಿಮೀ, ಸುಂದರನಗರದಲ್ಲಿ 168 ಮಿಮೀ ಮತ್ತು ಶಿಮ್ಲಾದಲ್ಲಿ 126 ಮಿಮೀ ಮಳೆಯಾಗಿದೆ.

ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಸೇನೆ ಮತ್ತು ಆಡಳಿತವು ಸಂತ್ರಸ್ತರನ್ನು ರಕ್ಷಿಸಲು ಕೆಲಸ ಮಾಡುತ್ತಿವೆ. ಮಣ್ಣು, ಕುಸಿದು ಬಿದ್ದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಪ್ರಾಣ ಕಳೆದುಕೊಂಡಿದ್ದವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕೆಲಸದಲ್ಲಿ ಅಲ್ಲಿನ ಸರ್ಕಾರ ನಿರತವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಶಿಮ್ಲಾ ನಗರವು ತನ್ನ ಸಾಮರ್ಥ್ಯಕ್ಕಿಂತ ಹೆಚ್ಚು ಬೆಳೆಯುತ್ತಿರುವುದೇ ಅಪಾರ ಹಾನಿಗೆ ಕಾರಣವೆಂದು ತಜ್ಞರು ಹೇಳುತ್ತಿದ್ದಾರೆ. ಶಿಮ್ಲಾದ ಅಪಾಯ ಮತ್ತು ದುರ್ಬಲತೆಯ ಮೌಲ್ಯಮಾಪನ ಮಾಡಬೇಕು ಮತ್ತು ಹಸಿರು ಪ್ರದೇಶ ಹೆಚ್ಚಿಸಲು ನಗರ ವಿಪತ್ತು ನಿರ್ವಹಣಾ ಯೋಜನೆಯನ್ನು ರೂಪಿಸಬೇಕು ಎಂದು ಅವರು ಸೂಚಿಸಿದ್ದಾರೆ.

ನಗರದ ಶೇ.33 ರಷ್ಟು ಭಾಗವು ಭೂಕುಸಿತದ ಅಪಾಯವನ್ನು ಎದುರಿಸುತ್ತಿದೆ. ಅದರಲ್ಲಿ 50% ಪ್ರದೇಶವು ಭಾರೀ ಅಪಾಯವನ್ನು ಮತ್ತು ಶೇ.16ರಷ್ಟು ಪ್ರದೇಶವು ಕಡಿಮೆ ಅಪಾಯಕ್ಕೆ ಈಡಾಗಲಿದೆ ಎಂಬುದು ಕಂಡುಬಂದಿದೆ. ಜೊತೆಗೆ, ನಗರದಲ್ಲಿ 37 ಕಟ್ಟಡಗಳು ಅಸುರಕ್ಷಿತವಾಗಿವೆ ಎಂದು ಅಲ್ಲಿನ ನಗರಾಭಿವೃದ್ಧಿ ನಿರ್ದೇಶನಾಲಯ ಘೋಷಿಸಿದೆ. ಇದೆಲ್ಲವೂ, ಅಪಾಯದ ಆತಂಕವನ್ನು ಹೆಚ್ಚಿಸಿದೆ.

ಸಮ್ಮರ್‌ಹಿಲ್, ಬಲುಗಂಜ್ ಮತ್ತು ತುಟಿಕಂಡಿ ಪ್ರದೇಶಗಳು ಭೂಕುಸಿತದ ಅಪಾಯಕಾರಿ ಸೂಕ್ಷ್ಮ ಪ್ರದೇಶವಾಗಿವೆ. ಈ ಮೂರು ಪ್ರದೇಶಗಳಲ್ಲಿ ಆಗಸ್ಟ್‌ 14ರಂದು ಭಾರೀ ಭೂಕುಸಿತವಾಗಿದ್ದು, ಹೆಚ್ಚು ಹಾನಿಯಾಗಿದೆ. ಇಲ್ಲಿ ಮತ್ತೆ ಭೂಕುಸಿತವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ಜನಸಂದಣಿ ಮತ್ತು ಟ್ರಾಫಿಕ್ ಜಾಮ್‌ನಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿವೆ. ಇದರಿಂದಾಗಿ, ನಗರದಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವುದೂ ಸವಾಲಾಗಿದೆ. ಅನಧಿಕೃತ ಕಟ್ಟಡ ನಿರ್ಮಾಣವು ದೊಡ್ಡ ಪ್ರಮಾಣದ ಹಾನಿಗೆ ಕಾರಣವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಶಿಮ್ಲಾ ನಗರದಲ್ಲಿ 10,000ಕ್ಕೂ ಹೆಚ್ಚು ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಈ ಕಟ್ಟಡಗಳ ನಿರ್ಮಾಣಕ್ಕೆ ಮುನ್ಸಿಪಲ್ ಕಾರ್ಪೊರೇಷನ್ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ.

ಬದಲಾಗುತ್ತಿರುವ ಭೂ ಬಳಕೆ ಮತ್ತು ಹಸಿರು ಹೊದಿಕೆಯ ಕ್ಷೀಣಿಸುತ್ತಿರುವುದರ ಪರಿಣಾಮವು ಭೂಕುಸಿತದ ರೂಪದಲ್ಲಿ ಕಂಡುಬರುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಕೇಂದ್ರೀಯ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಪ್ರೊಫೆಸರ್ ಸುನೀಲ್ ಧರ್ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿರುವ ಹಿಮಾಚಲ ಪ್ರದೇಶಕ್ಕೆ ಕರ್ನಾಟಕದಿಂದ ನೆರವಿನ ಹಸ್ತ

ಪ್ರಾಕೃತಿಕ ವಿಕೋಪಗಳಿಂದಾಗಿ ಜೀವಹಾನಿಯ ಜೊತೆಗೆ ಶಿಮ್ಲಾ ಪ್ರತಿವರ್ಷ ಕೋಟ್ಯಂತರ ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಿದೆ. ಕಳೆದ ಏಳು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ 2015ರಲ್ಲಿ 3.25 ಕೋಟಿ, 2016ರಲ್ಲಿ 4.16 ಕೋಟಿ, 2017ರಲ್ಲಿ 11.2 ಕೋಟಿ, 2019ರಲ್ಲಿ 7.48 ಕೋಟಿ, 2020ರಲ್ಲಿ 3.38 ಕೋಟಿ, 2021ರಲ್ಲಿ 13.8 ಕೋಟಿ ಮತ್ತು 2022 ರಲ್ಲಿ 5.27 ಕೋಟಿ ರೂ. ನಷ್ಟ ಅನುಭವಿಸಿದೆ.

ವಿವೇಚನೆಯಿಲ್ಲದ ಅಡ್ಡಾದಿಡ್ಡಿಯಾಗಿ ಶಿಮ್ಲಾ ನಗರದಲ್ಲಿ ನಿರ್ಮಾಣ ಕೆಲಸಗಳು ನಡೆಯುತ್ತಿವೆ. ನಗರದ ನಗರ ಯೋಜನೆ ಮತ್ತು ಶಿಮ್ಲಾದಲ್ಲಿನ ಕಟ್ಟಡ ನಿರ್ಮಾಣ ಯೋಜನೆಗಳು ಗುಡ್ಡಗಾಡು ಪ್ರದೇಶಗಳಿಗೆ ಹೊಂದಿಕೆಯಾಗುವುದಿಲ್ಲ. ಹಲವೆಡೆ 60 ಡಿಗ್ರಿ ಇಳಿಜಾರಿನಲ್ಲಿ ಐದು ಅಂತಸ್ತಿನ ಮನೆಗಳನ್ನು ನಿರ್ಮಿಸಲಾಗಿದೆ. ನಗರದಲ್ಲಿ ಚರಂಡಿ ವ್ಯವಸ್ಥೆಗೆ ಗಮನಹರಿಸಿಲ್ಲ, ಜನರು ಚರಂಡಿ ಮೇಲೆ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇದರಿಂದ ನಿರಂತರವಾಗಿ ಮನೆಗಳ ಒಳಗೆ ನೀರು ಹೋಗುತ್ತಿದ್ದು, ತೇವಾಂಶ ಹೆಚ್ಚಿ ಕಟ್ಟಡಗಳು ಕುಸಿಯುತ್ತಿವೆ” ಎಂದು ಹಿರಿಯ ಪತ್ರಕರ್ತೆ, ಪರಿಸರವಾದಿ ಅಶ್ವನಿ ಶರ್ಮಾ ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಧರ್ಮ ರಾಜಕಾರಣ ಮಾಡುವ ಬಗ್ಗೆ ಎಂದಿಗೂ ಯೋಚಿಸಿಲ್ಲ ಎಂದ ರಾಜನಾಥ್ ಸಿಂಗ್!

ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು...

ಲೋಕಸಭೆ ಚುನಾವಣೆ| ಮಣಿಪುರದಲ್ಲಿ 3 ಬಾರಿ ಸ್ಫೋಟ; ಸೇತುವೆಗೆ ಹಾನಿ

ಮಣಿಪುರದ ಕೆಲವು ತಿಂಗಳುಗಳ ಕಾಲ ಕೊಂಚ ಕಡಿಮೆಯಾಗಿದ್ದ ಹಿಂಸಾಚಾರವು ಲೋಕಸಭೆ ಚುನಾವಣೆ...

ದಾರಿತಪ್ಪಿಸುವ ಜಾಹೀರಾತು ಪ್ರಕರಣ: ಮತ್ತೆ ಪತ್ರಿಕೆಗಳಲ್ಲಿ ಕ್ಷಮೆಯಾಚನೆ ಪ್ರಕಟಿಸಿದ ರಾಮ್‌ದೇವ್

ಪತಂಜಲಿ ಆಯುರ್ವೇದ್ ಲಿಮಿಟೆಡ್ ವಿರುದ್ಧ ದಾರಿತಪ್ಪಿಸುವ ಜಾಹೀರಾತು ಪ್ರಕರಣ ದಾಖಲಾಗಿದ್ದು, ಸುಪ್ರೀಂ...

ʼಈ ದಿನʼ ಸಮೀಕ್ಷೆ | ರೈತರಿಗೆ ಮೋದಿ ಮಹಾ ಮೋಸ; ‘ಬೆಂಬಲ ಬೆಲೆ’ ಕೊಡೋರಿಗೆ ನಮ್ಮ ಬೆಂಬಲ ಎಂದ ಮತದಾರರು!

ಭಾರತವು ಜಾಗತಿಕ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದೆ. ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ...