ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ಪಡೆಯಲು ಅನೇಕ ಅವೈಜ್ಞಾನಿಕ ಮಾನದಂಡಗಳನ್ನು ಮಾಡಿದ್ದರಿಂದ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಫುಡ್ ಕಿಟ್, ಸಲಕರಣೆಗಳ ಅನವಶ್ಯಕ ಯೋಜನೆಗಳನ್ನು ಕೈಬಿಟ್ಟು ಸೆಸ್ ಹಣ ಸರಿಯಾಗಿ ಉಪಯೋಗಿಸಿ ಕಾರ್ಮಿಕರ ಕಲ್ಯಾಣಕ್ಕೆ ಖರ್ಚು ಮಾಡಬೇಕು ಎಂದು ಕಟ್ಟಡ ಕಾರ್ಮಿಕರ ಸಂಘಗಳ ಜಿಲ್ಲಾ ಸಮನ್ವಯತೆ ಸಮಿತಿಯ ಅಧ್ಯಕ್ಷ ವೀರನಗೌಡ ಒತ್ತಾಯಿಸಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಟ್ಟಡ ಕಾರ್ಮಿಕರು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾರ್ಮಿಕ ಸಚಿವರು ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸೌಲಭ್ಯಗಳನ್ನು ಪಡೆಯಲು ಅನೇಕ ಅವೈಜ್ಞಾನಿಕ ಮಾನದಂಡಗಳನ್ನು ಜಾರಿ ಮಾಡಲಾಗಿದೆ. ಸರ್ಕಾರದಿಂದ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯಗಳಿದ್ದರೂ ಸರಿಯಾಗಿ ತಲುಪುತ್ತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ನಿರ್ಲಕ್ಷ್ಯ ಮುಂದುವರೆಸಿದ್ದಾರೆ ಎಂದು ದೂರಿದರು.
ಆರ್.ಪಿ.ಎಲ್.ಟ್ರೈನಿಂಗ್ ವಿತ್ ಕಿಟ್ , ಟೂಲ್ಸ್ ಕಿಟ್ , ನ್ಯೂಟ್ರೆಷನ್ ಕಿಟ್ ಹ್ಯೂಮಿನಿಟಿ ಕಿಟ್ ಸೇರಿದಂತೆ ಹಲವಾರು ನಿರುಪಯುಕ್ತ ಕಿಟ್ ನೀಡುತ್ತಿದ್ದು. ಇದರಿಂದ ಮಂಡಳಿಯಿಂದ ನೀಡುತ್ತಿರುವ ಕಾರ್ಮಿಕರ ಬೆವರಿನ ಹನಿಯಿಂದ ಸಂಗ್ರಹವಾಗಿರುವ ಸೆಸ್ ಹಣ ದುರುಪಯೋಗವಾಗುತ್ತಿದೆ ಎಂದು ದೂರಿದರು.
ಕಾರ್ಮಿಕರಿಗೆ ಅವಶ್ಯವಿರುವ ಮೂಲ ಯೋಜನೆಗಳಾದ ಶೈಕ್ಷಣಿಕ ಸಹಾಯಧನ, ಮದುವೆ ಮತ್ತು ಮರಣ ಸಹಾಯಧನ, ಪಿಂಚಣಿ ಸವಲತ್ತುಗಳು ಸಹಾಯಧನವನ್ನು ಒಂದು ವರ್ಷದಿಂದ ನೀಡುತ್ತಿಲ್ಲ ಎಂದು ಆಪಾದಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಚಿಕಿತ್ಸೆಗೆ ದಾಖಲಾಗಿದ್ದ ಬಾಲಕ ಜಿಲ್ಲಾಸ್ಪತ್ರೆಯಿಂದ ನಾಪತ್ತೆ; ದೂರು ದಾಖಲು
ಪತ್ರಿಕಾಗೋಷ್ಠಿಯಲ್ಲಿ ಆನಂದಪ್ಪ, ವೀರಣ್ಣ ಹೊಸೂರು, ರಂಗಪ್ಪ ಅಸ್ಕಿಹಾಳ, ತಿಮ್ಮಪ್ಪ ಸ್ವಾಮಿ, ಭೀಮಣ್ಣ, ನಾಗರಾಜ, ವೀರೇಶ ಜಾಲಗರ ಉಪಸ್ಥಿತರಿದ್ದರು.
