“ನಮ್ಮ ಇಲಾಖೆಯ ಕೆಲಸವನ್ನು ಹೊರತುಪಡಿಸಿ ಬೇರೆ ಇಲಾಖೆಯ ಕೆಲಸ ಮಾಡಬಾರದೆಂದು ಆದೇಶವಿದೆ. ನಮಗೆ ಅಂಗನವಾಡಿ ಕೆಲಸ ಹೆಚ್ಚೆ ಇದೆ. ಪೋಷಣೆ, ಎಫ್.ಆರ್.ಎಸ್, ಪಿ.ಎಂ.ಎ.ವಿ.ವಾಯ್, ಭಾಗ್ಯಲಕ್ಷ್ಮಿ , ಮಾತೃಪೂರ್ಣ ಯೋಜನೆ ಇಷ್ಟೆಲ್ಲಾ ಕೆಲಸಗಳನ್ನು ಮಾಡುತ್ತಿದ್ದೇವೆ. ಹೆಚ್ಚುವರಿಯಾಗಿ ಅಂಗನವಾಡಿ ನೌಕರರಿಗೆ ಬಿ.ಎಲ್.ಓ. ಕೆಲಸವನ್ನು ನೀಡಬಾರದು” ಎಂದು ಸಿಐಟಿಯು ಮುಖಂಡ ಮಹೇಶ ಹಿರೇಮಠ ಒತ್ತಾಯಿಸಿದರು.
“ಗದಗ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಸಮಿತಿ ವತಿಯಿಂದ ಮತಗಟ್ಟೆ ಮಟ್ಟದ (ಬಿ.ಎಲ್.ಓ) ಚುನಾವಣಾ ಭಾಗದ ಕೆಲಸ ನೀಡದಂತೆ ಜಿಲ್ಲಾ ಪಂಚಾಯತ ಸಿಇಒ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಈ ಎಲ್ಲ ಕೆಲಸದ ಮಧ್ಯೆ ಅಂಗನವಾಡಿ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ೧೦.೦೦ ರಿಂದ ೧.೩೦ ರವರೆಗೆ ಕೆಲಸವಿದೆ. ಇಷ್ಟೆಲ್ಲಾ ಕೆಲಸವಿದ್ದರೂ ಬಿ.ಎಲ್.ಓ. ಕೆಲಸ ಮಾಡಲು ಹೋದರೆ ನಮ್ಮ ಅಂಗನವಾಡಿ ಮಕ್ಕಳ ಶಾಲಾ ಪೂರ್ವ ಶಿಕ್ಷಣ ಕುಂಠಿತಗೊಳ್ಳುತ್ತದೆ. ಆದ ಕಾರಣ ನಮ್ಮ ಇಲಾಖೆಯ ಕೆಲಸ ಹೊರತುಪಡಿಸಿ ಬೇರೆ ಕೆಲಸಗಳನ್ನು ಮಾಡಲು ಆಗುವುದಿಲ್ಲ” ಎಂದು ವಿನಂತಿಸಿಕೊಂಡರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಪುಸ್ತಕಗಳು ನಮ್ಮ ವ್ಯಕ್ತಿತ್ವ ನಿರ್ಮಾಣದ ಶಿಲ್ಪಿಗಳು: ಡಾ.ವಿಜಯಮಹಾಂತೇಶ ದಾನಮ್ಮನವರ
ಈ ಸಂದರ್ಭದಲ್ಲಿ ಮಾರುತಿ ಚಿಟಗಿ, ಪೀರು ರಾಠೋಡ, ಅಧ್ಯಕ್ಷರಾದ ಸಾವಿತ್ರಿ ಸಬ್ನಿಸ್, ಶಾರದಾ ರೋಣದ, ಗಂಗಮ್ಮ ದೇವರಡ್ಡಿ, ಸುಶೀಲಾ ಚಲವಾದಿ, ಗಿರಿಜಾ ಮಾಚಕ್ಕನವರ, ಕವಿತಾ ಬಡಿಗೇರ, ನೀಲಮ್ಮ ಹಿರೇಮಠ, ಅನ್ನಪೂರ್ಣ ಸಾಲಿಮಠ, ಶಾರದಾ ಹಳೇಮನಿ, ಮಂಗಲಾ ಪಟ್ಟಣಶೆಟ್ಟಿ, ಕಮಲಾಕ್ಷಿ ಬೀಳಗಿ, ಗಂಗಮ್ಮ ಮಾದರ, ಜ್ಯೋತಿ, ಶರಣಮ್ಮ ವಾಲಿ ಉಪಸ್ಥಿತರಿದ್ದರು.