IND – ENG 2ND Test: ರವೀಂದ್ರ ಜಡೇಜ ಅರ್ಧ ಶತಕ, ಬೃಹತ್‌ ಮೊತ್ತದತ್ತ ಭಾರತ

Date:

ಭಾರತ – ಇಂಗ್ಲೆಂಡ್‌ ನಡುವೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಎರಡನೇ ದಿನವಾದ ಇಂದು ಟೀಂ ಇಂಡಿಯಾ ಬೃಹತ್‌ ಮೊತ್ತದತ್ತ ದಾಪುಗಾಲಿಡುತ್ತಿದೆ. ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರು ನಾಯಕ ಶುಭ್‌ಮನ್‌ ಗಿಲ್‌ಗೆ ಅವರೊಂದಿಗಿನ ಜೊತೆಯಾಟದಲ್ಲಿ ಅರ್ಧ ಶತಕ ಪೂರೈಸಿದರು. ಪಾನೀಯ ವಿರಾಮದ ವೇಳೆಗೆ ಟೀಂ ಇಂಡಿಯಾ 100 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 375 ರನ್‌ ಪೇರಿಸಿದೆ.

- Advertisement -

ಇಂಗ್ಲೆಂಡ್‌ ವಿರುದ್ಧ ಮೊದಲ ದಿನದ ಗೌರವಕ್ಕೆ ಪಾತ್ರವಾಗಿ 85 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 310 ರನ್‌ ಪೇರಿಸಿ ಎರಡನೇ ದಿನಾದಾಟ ಆರಂಭಿಸಿದ ನಾಯಕ ಶುಭಮನ್‌ ಗಿಲ್ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ತಮ್ಮ ಮುರಿಯದ 6ನೇ ವಿಕೆಟ್‌ ಜೊತೆಯಾಟವನ್ನು ಮುಂದುವರಿಸಿದ್ದಾರೆ. 230 ಎಸೆತಗಳಲ್ಲಿ 162 ರನ್‌ ಕಲೆ ಹಾಕಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

113 ಚೆಂಡುಗಳಲ್ಲಿ ರವೀಂದ್ರ ಜಡೇಜಾ 9 ಬೌಂಡರಿ ನೆರವಿನಿಂದ ಅಜೇಯ 68 ರನ್‌ ಬಾರಿಸಿದ್ದಾರೆ. ನಾಯಕ ಶುಭಮನ್‌ ಗಿಲ್‌ ಜವಾಬ್ದಾರಿಯನ್ನು ಅರಿತು ಬ್ಯಾಟಿಂಗ್‌ ಮಾಡುತ್ತಿದ್ದು, 263 ಚೆಂಡುಗಳಲ್ಲಿ 17 ಬೌಂಡರಿ ನೆರವಿನಿಂದ ಅಜೇಯ 150 ರನ್‌ ಬಾರಿಸಿ ಆಡುತ್ತಿದ್ದಾರೆ.

ಇದನ್ನು ಓದಿದ್ದೀರಾ? ಮೂವರು ಸ್ಟಾರ್ ಆಟಗಾರರ ದಾಖಲೆ ಮುರಿಯುವ ಹೊಸ್ತಿಲಲ್ಲಿ ಯಶಸ್ವಿ ಜೈಸ್ವಾಲ್‌

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಸಮಯೋಚಿತ ಬ್ಯಾಟಿಂಗ್ ನಡೆಸುವಲ್ಲಿ ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ವಿಫಲರಾದರು. ಪ್ರವಾಸಿ ತಂಡ 15 ರನ್‌ ಕಲೆ ಹಾಕುವಷ್ಟರಲ್ಲಿ ಒಂದು ವಿಕೆಟ್‌ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಈ ವೇಳೆ ಎರಡನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್‌ ಹಾಗೂ ಕರುಣ್ ನಾಯರ್‌ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 90 ಎಸೆತಗಳಲ್ಲಿ 80 ರನ್‌ ಸೇರಿಸಿತು. ಇನ್ನು ಕರುಣ್‌ ನಾಯರ್‌ (31) ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು.

ಮೂರನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್‌ ಹಾಗೂ ನಾಯಕ ಶುಭಮನ್‌ ಗಿಲ್ ಜೋಡಿ ವಿಕೆಟ್‌ ಬೀಳದಂತೆ ಕಾಯ್ದುಕೊಳ್ಳುವಲ್ಲಿ ಸಫಲವಾಯಿತು. ಈ ಜೋಡಿ 131 ಎಸೆತಗಳಲ್ಲಿ 66 ರನ್‌ ಸೇರಿಸಿತು. ಈ ವೇಳೆ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದ ಯಶಸ್ವಿ ಜೈಸ್ವಾಲ್‌ ಕಳಪೆ ಹೊಡೆತಕ್ಕೆ ಮುಂದಾಗಿ ಔಟ್ ಆದರು. ಇವರು 107 ಎಸೆತಗಳಲ್ಲಿ 13 ಬೌಂಡರಿ ನೆರವಿನಿಂದ 87 ರನ್‌ ಬಾರಿಸಿ ಅಬ್ಬರಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತಕ್ಕೆ ಚಿನ್ನ ತಂದ ಮಹಿಳೆಯರು: ಏಷ್ಯನ್‌ ಗೇಮ್ಸ್‌ನಲ್ಲಿ ಮಹಿಳಾ ಕ್ರಿಕೆಟ್‌ ಕಲಿಗಳ ಸಾಧನೆ

ಜಪಾನ್‌ನ ಐಚಿ–ನಾಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ...

ಏಷ್ಯನ್ ಗೇಮ್ಸ್: ಸ್ಕೀಟ್ ಶೂಟಿಂಗ್, ಸಾಫ್ಟ್ ಟೆನಿಸ್‌ನಲ್ಲಿ ಭಾರತಕ್ಕೆ ಕಂಚು; ಪದಕದತ್ತ ಮೀರಾಬಾಯಿ ದಾಪುಗಾಲು

ಜಪಾನ್‌ನ ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ ನಾಲ್ಕನೇ ದಿನವಾದ ಬುಧವಾರ...

ಏಷ್ಯನ್ ಗೇಮ್ಸ್: ಶ್ರೀಲಂಕಾ ಮಣಿಸಿ ಸತತ ಎರಡನೇ ಬಾರಿಗೆ ಚಿನ್ನ ಗೆದ್ದ ಭಾರತದ ವನಿತೆಯರು

ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರಿಕೆಟ್...

ಸೋತರೂ ಎಲ್ಲರ ಹೃದಯ ಗೆದ್ದ ಸುಚಿಕಾ: 700 ಗ್ರಾಂ ಹಿನ್ನಡೆಯಿಂದ ತಪ್ಪಿದ ಚಿನ್ನ

ಮಹಿಳೆಯರ ಸಾಂಪ್ರದಾಯಿಕ 60 ಕೆ.ಜಿ ವಿಭಾಗದ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (ಎಂಎಂಎ)...