ಹಾಸನ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳು ಕೇಂದ್ರ ಸ್ಥಾನದಲ್ಲಿಯೇ ಇದ್ದು ಯಾವುದೇ ದೂರುಗಳು ಬರದಂತೆ ನಿಗಾವಹಿಸಿ ಕರ್ತವ್ಯ ನಿರ್ವಹಿಸಲು ಜಿಲ್ಲಾಧಿಕಾರಿ ಲತಾ ಕುಮಾರಿ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸಭೆ ನಡೆಸಿ ಮಾತನಾಡಿದ ಅವರು, “ಕೆಲವು ಕಡೆ ಗಮನಿಸಿದಾಗ ವೃದ್ದಾಪ್ಯ ಮತ್ತು ವಿಧವಾ ಪಿಂಚಣಿ ಬರುವುದು ನಿಂತಿದೆ ಎಂದು ಕೇಳಿಬಂದಿದೆ. ಇದರ ಬಗ್ಗೆ ಹೆಚ್ಚಿನ ಗಮನಹರಿಸಿ ಪರಿಶೀಲನೆ ಮಾಡಿ ಸರಿಪಡಿಸಲು ಕ್ರಮ ವಹಿಸಿ” ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪೌತಿ ಆಂದೋಲನ ನಡೆಸುವುದರ ಜೊತೆಗೆ ದರಖಾಸ್ತು ಪೋಡಿಗೆ ಒತ್ತು ನೀಡಿ ಎಂದರಲ್ಲದೆ, ಆರ್.ಟಿ.ಸಿ. ತಿದ್ದುಪಡಿ, ಇ-ಸ್ವತ್ತು ಬಾಕಿ ಇರುವುದನ್ನು ಪೂರ್ಣಗೊಳಿಸಲು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿಗೆ ಸ್ಥಳಾವಕಾಶ ಕಲ್ಪಿಸುವುದರ ಜೊತೆಗೆ ಇ-ಆಫಿಸ್ ನಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಕಾರ್ಯನಿರ್ವಹಿಸಲು ಕ್ರಮ ವಹಿಸುವಂತೆ ತಿಳಿಸಿದರು.
ಇದನ್ನೂ ಓದಿ: ಹಾಸನ | ಜು.4ರಂದು ಭಾರೀ ಮಳೆ ಸಾಧ್ಯತೆ; IMD ಎಚ್ಚರಿಕೆ
