ಶಿವಮೊಗ್ಗ ನಗರದಲ್ಲಿ ಎರಡು ವರ್ಷಗಳ ಹಿಂದೆ ಆರಂಭವಾಗಿರುವ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮುಜಗುರವಾದಂತಿದೆ.
ಅಗತ್ಯವೆನಿಸಿದರೆ ಸಂಘ ಪರಿವಾರದ ಮುಖಂಡರಾದ ಸಾವರ್ಕರ್, ಮೋಹನ್ ಭಾಗವತ್ ಮೊದಲಾದವರ ಹೆಸರು ಇಡಬಹುದು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಟ್ರಸ್ಟ್ ವ್ಯಂಗ್ಯ ಮಾಡಿದೆ.
ಪತ್ರಿಕಾಘೋಷ್ಠಿಯಲ್ಲಿ ಇಂದು ಗುರುವಾರ ಈ ಬಗ್ಗೆ ಮಾತನಾಡಿದ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಜನರ ಆಗ್ರಹದ ಮೇರೆಗೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಮಕ್ಕಳು ಕುವೆಂಪು ಹೆಸರು ಈ ವಿಮಾನ ನಿಲ್ದಾಣಕ್ಕೆ ಸೂಕ್ತ ಎಂದು ಈ ಹಿಂದೆ ಸೂಚಿಸಿದ್ದರು.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ವರ್ಷದ ಹಿಂದೆಯೇ ಕುವೆಂಪು ಹೆಸರಿಡಲು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದ್ದರು ಆದರೆ ಕೇಂದ್ರದ ಸಚಿವರು ಈ ಬಗ್ಗೆ ಯಾವುದೇ ಗಮನವನ್ನು ಹಿಂದಿನವರೆಗೆ ಹರಿಸಿಲ್ಲ ಎಂದರು.
ಯಡಿಯೂರಪ್ಪನವರಾಗಲಿ ಅಥವಾ ಸಂಸದ ರಾಘವೇಂದ್ರರಾಗಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಆಗಲಿ ಈ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿನಲ್ಲಿ ಹೆಸರನ್ನು ಇಡಲು ಇಲ್ಲಿಯವರೆಗೆ ಆಸಕ್ತಿ ತೋರಿಲ್ಲ. ಇವರ ನಿರ್ಲಕ್ಷ್ಯ ಅಕ್ಷಮ್ಯ ಅಪರಾಧವಾಗಿದೆ ಎಂದರು.
ಇವರಿಗೆ ಕುವೆಂಪು ಹೆಸರನ್ನು ಇಡಲು ತೊಂದರೆ ಎನಿಸಿದರೆ ಸಂಘ ಪರಿಪಾಲರ ಮುಖಂಡರ ಹೆಸರನ್ನು ಘೋಷಣೆ ಮಾಡಲಿ ಎಂದು ವ್ಯಂಗ್ಯ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜನಮೇಜಿರಾವ್, ನಾಗರತ್ನಮ್ಮ, ಶಂಕರ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು