ತುಮಕೂರಿನ ಬನಶಂಕರಿ ಇಸ್ಮಾಯಿಲ್ ನಗರದ ಹಂದಿಜೋಗಿ ಕುಟುಂಬಗಳಿಗೆ ನಿವೇಶನ ನೀಡಲು ಸರ್ಕಾರ ಬದ್ದವಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ತುಮೂರಿನ ಬಡ್ಡಿಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಸಮಾರಂಭಕ್ಕೆ ಜಿ ಪರಮೇಶ್ವರ್ ಆಗಮಿಸಿದ್ದರು. ಈ ವೇಳೆ, ಅವರನ್ನು ಭೇಟಿ ಮಾಡಿದ ತುಮಕೂರು ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಹಾಗೂ ಇಸ್ಮಾಯಿಲ್ ನಗರ ನಾಗರೀಕರ ಹಿತರಕ್ಷಣಾ ಸಮಿತಿಯ ಕಾರ್ಯಕರ್ತರು ಹಂದಿಜೋಗಿ ಕುಟುಂಬಗಳಿಗೆ ಪುನರ್ ವಸತಿ ಮತ್ತು ಮೂಲಭೂತ ಸೌಕರ್ಯ ನೀಡಬೆಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪರಮೇಶ್ವರ್, “ತುರ್ತು ಕ್ರಮವಹಿಸಿ 60 ಹಂದಿ ಜೋಗಿ ಕುಟುಂಬಗಳಿಗೆ ನಗರದ 4 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ಹುಡುಕಿ ಪುನರ್ ವಸತಿ ನೀಡಲು ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಶ್ರೀನಿವಾಸ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಅಶ್ವಿಜ ಬಿ.ವಿ ಅವರಿಗೆ ಸೂನೆ ನೀಡಿದೆ.
ಪುನರ್‌ವಸತಿ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶ್ರೀನಿವಾಸ್, “ಹೊನ್ನೇನಹಳ್ಳಿಯಲ್ಲಿ ನಿರ್ಮಾಣಕ್ಕೆ ಸಿದ್ದವಾಗಿರುವ ಪಿಎಂಎವೈ ಯೋಜನೆಯ 192 ಜಿ+ ಬಹುಮಹಡಿ ವಸತಿ ಸಮುಚ್ಚಯಗಳಲ್ಲಿ ಈ 60 ಕುಟುಂಬಗಳಿಗೆ ಪುನರ್ ವಸತಿಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ ಈ ಸಮುದಾಯದವರು ಜೀವನಾದರಿತ ಕಸುಬುಗಳಿಗೆ ತೊಂದರೆ ಉಂಟಾಗುತ್ತದೆ ಎಂಬ ಕಾರಣದಿಂದ ಆ ತೀರ್ಮಾನವನ್ನು ಕೈಬಿಡಲಾಯಿತು” ಎಂದರು.