ಕರ್ನಾಟಕ ರಾಜ್ಯರಸ್ತೆ ಸಾರಿಗೆ ನಿಗಮ ಮಂಗಳೂರು ವಿಭಾಗದ, ಮಂಗಳೂರು- 2ನೇ ಘಟಕದಿಂದ ನೂತನವಾಗಿ ಮಂಗಳೂರು ಕಾಸರಗೋಡು ಮಾರ್ಗದಲ್ಲಿ ಹೊಸದಾಗಿ ರಾಜಹಂಸ ಸೂಪರ್ ಫಾಸ್ಟ್ ಸಾರಿಗೆಗಳನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಪ್ರಾರಂಭಿಸಲಾಗಿದೆ.
ತೊಕ್ಕೊಟ್ಟು, ಬೀರಿ, ತಲಪಾಡಿ, ಮಂಜೇಶ್ವರ, ಹೊಸಂಗಡಿ, ಉಪ್ಪಳ, ಕೈಕಂಬ, ನಯಾಬಜಾರ್, ಬಂದ್ಯೋಡು, ಕುಂಬ್ಳೆಗಳಲ್ಲಿ ನಿಲುಗಡೆ ಇದ್ದು, ಒಟ್ಟು ಪ್ರಯಾಣ ದರ ರೂ 100 ಇರುತ್ತದೆ.
ಇದನ್ನೂ ಓದಿ: ಮಂಗಳೂರಿನ ಪಿಜಿಯಲ್ಲಿ ಕೇರಳ ಮೂಲದ ವಿದ್ಯಾರ್ಥಿ ಆತ್ಮಹತ್ಯೆ
ಪ್ರಯಾಣಿಕರು ನೂತನ ಸಾರಿಗೆ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಕೆ.ಎಸ್.ಆರ್.ಟಿ.ಸಿ ಮಂಗಳೂರು ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.