ಬುರ್ಖಾ ಯಾಕೆ ಧರಿಸಿಲ್ಲವೆಂದು ಗದರಿ, ಮುಸ್ಲಿಂ ವಿದ್ಯಾರ್ಥಿಯನಿಯನ್ನು ಬಸ್‌ನಿಂದ ಕೆಳಗೆ ಎಳೆದಿದ್ದ ಸಾರಿಗೆ ಬಸ್ ಚಾಲಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಎಸ್. ಫುಲೇಕರ್ ಅಮಾನತು ಆದೇಶ ಹೊರಡಿಸಿದ್ದಾರೆ.
ಕಮಲಾಪುರ ಬಸ್ ನಿಲ್ದಾಣದಲ್ಲಿ ಹಿಜಾಬ್ ಧರಿಸಿದ್ದ ಮುಸ್ಲಿಂ ವಿದ್ಯಾರ್ಥಿನಿ ತನ್ನೂರಿಗೆ ಮರಳಲು ಬಸ್ ಹತ್ತುತ್ತಿದ್ದರು. ಈ ವೇಳೆ, ಆಕೆಯನ್ನು ತಡೆದ ಚಾಲಕ ಮಹಿಬೂಬ್ ಪಾಟೀಲ್, ‘ಬುರ್ಖಾ ಯಾಕೆ ಹಾಕಿಕೊಂಡಿಲ್ಲ’ ಎಂದು ಗದರಿ, ಬಸ್‌ನಿಂದ ಹೊರಗೆ ಇಳಿಸಿದ್ದರು.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದು, ಚಾಲಕ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಬಸವ ಕಲ್ಯಾಣ ಬಸ್ ಡಿಪೋದಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಬೂಬ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ, ಆದೇಶ ಹೊರಡಿಸಲಾಗಿದೆ.