ವಂಚನೆ ಮಾಡಿ ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ವಜ್ರದ ವ್ಯಾಪಾರಿ ನೀರವ್ ಮೋದಿ ಸಹೋದರ ನೇಹಾಲ್ ಮೋದಿಯನ್ನು ಶನಿವಾರ ಅಮೆರಿಕದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಸಿಬಿಐ ಮತ್ತು ಇಡಿ ಗಡಿಪಾರ ಕೋರಿಕೆಯ ಮೇರೆಗೆ ಬಂಧನ ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಮೋದಿ ಉಪನಾಮ ವಿವಾದ | ಮೊಹಮದ್ ನಲಪಾಡ್ ವಿರುದ್ಧ ಪ್ರಕರಣ
ನೀರವ್ ಮೋದಿ ಕಿರಿಯ ಸಹೋದರ ನೇಹಾಲ್ ಮೇಲೆ 2020ರ ಡಿಸೆಂಬರ್ ತಿಂಗಳಲ್ಲಿ ನ್ಯೂಯಾರ್ಕ್ನ ಮ್ಯಾನ್ಹ್ಯಾಟನ್ನಲ್ಲಿರುವ ವಿಶ್ವದ ಅತಿದೊಡ್ಡ ವಜ್ರ ಕಂಪನಿಗಳಲ್ಲಿ ಒಂದಾದ ಎಲ್ ಎಲ್ ಡಿ ಡೈಮಂಡ್ಸ್ಗೆ ವಂಚನೆ ಮಾಡಿದ ಆರೋಪವಿದೆ.
ನೆಹಾಲ್ ಮೋದಿ $2.6 ಮಿಲಿಯನ್ ವಂಚನೆ ಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ನೆಹಾಲ್ ಮೋದಿ ವಿರುದ್ಧ ನ್ಯೂಯಾರ್ಕ್ನ ಸುಪ್ರೀಂ ಕೋರ್ಟ್ ದೋಷಾರೋಪ ಮಾಡಿದೆ.
