ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇತ್ತೀಚಿಗೆ ಹರಿಯಾಣದ ಸೋನಿಪತ್‌ನ ಮಹಿಳಾ ರೈತರು ದೆಹಲಿಯಲ್ಲಿರುವ ತಮ್ಮ ಸೋದರಿ ಪ್ರಿಯಾಂಕಾ ಗಾಂಧಿ ನಿವಾಸಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಹಿಳೆಯರೊಂದಿಗೆ ನಡೆಸಿದ ಸಂವಾದ, ಭೋಜನಕೂಟ ಒಳಗೊಂಡ ವಿಶೇಷ ವಿಡಿಯೋವೊಂದನ್ನು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿ ಹರಿಯಾಣದ ಸೋನಿಪತ್‌ಗೆ ಕೆಲವು ದಿನಗಳ ಹಿಂದೆ ಮಹಿಳೆಯರ ಹೊಲಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಾಯಿ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ರೈತ ಮಹಿಳೆಯರಿಗೆ ಭೋಜನಕೂಟ ಏರ್ಪಡಿಸುವ ಭರವಸೆ ನೀಡಿದ್ದರು. ತಾವು ಕೊಟ್ಟ ಮಾತಿನಂತೆ ರೈತ ಮಹಿಳೆಯರನ್ನು ಪುತ್ರಿ ಪ್ರಿಯಾಂಕಾ ಗಾಂಧಿ ಮನೆಗೆ ಆಹ್ವಾನಿಸಿ ಭೋಜನಕ್ಕೆ ವ್ಯವಸ್ಥೆ ಮಾಡಿದ್ದರು.
ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ, ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಮೂವರು ಮಹಿಳಾ ರೈತರೊಂದಿಗೆ ಹರಟೆಯ ಜೊತೆ ಕುಣಿದು ಕುಪ್ಪಳಿಸಿದರು.
ಮಹಿಳೆಯರೊಂದಿಗಿನ ಮಾತುಕತೆ ನಡೆಸುವಾಗ ರೈತ ಮಹಿಳೆಯೊಬ್ಬರು ಸೋನಿಯಾ ಗಾಂಧಿ ಅವರಿಗೆ “ರಾಹುಲ್ ಅವರಿಗೆ ಯಾವಾಗ ಮದುವೆ ಮಾಡುತ್ತೀರಾ?” ಎಂದು ಕೇಳಿದರು.
ಇದಕ್ಕೆ ಉತ್ತರ ನೀಡಿದ ಸೋನಿಯಾ ಗಾಂಧಿ, “ನೀವು ಹುಡುಗಿಯನ್ನು ಹುಡುಕಿ” ಎಂದು ಹಾಸ್ಯ ಚಾಟಕಿಯಲ್ಲಿ ಹೇಳಿದರು. ಆಗ ಪಕ್ಕದಲ್ಲಿದ್ದ ರಾಹುಲ್ ಗಾಂಧಿ, ‘ಅದು ಕೂಡ ಆಗುತ್ತದೆ’ ಎಂದು ಉತ್ತರಿಸಿದರು.
ಈ ಸುದ್ದಿ ಓದಿದ್ದೀರಾ? 5 ವರ್ಷಗಳಿಂದ ಹೊಸ ಐಐಟಿ-ಐಐಎಂ ನಿರ್ಮಿಸಿಲ್ಲ ಎಂದ ಕೇಂದ್ರ: ಅಮೆರಿಕದಲ್ಲಿ ಸುಳ್ಳು ಹೇಳಿದ ಪ್ರಧಾನಿ!
ಔತಣ ಕೂಟದ ವೇಳೆ ಮಹಿಳೆಯರ ಜೊತೆಗೆ ಆಹಾರ, ಮಹಿಳಾ ಸಬಲೀಕರಣ ಮತ್ತು ಜಿಎಸ್‌ಟಿ ಮುಂತಾದವುಗಳ ಬಗ್ಗೆ ಚರ್ಚೆ ನಡೆಸಿದರು. ಮಹಿಳೆಯರು ದೆಹಲಿಯಲ್ಲಿರುವ ನಿಮ್ಮ ಮನೆಯನ್ನು ನೋಡಬೇಕು ಎಂಬ ಬಯಕೆ ವ್ಯಕ್ತಪಡಿಸಿದಾಗ, ನನಗೆ ದೆಹಲಿಯಲ್ಲಿ ಮನೆಯಿಲ್ಲ, ಕಿತ್ತುಕೊಳ್ಳಲಾಗಿದೆ ಎಂದು ಹೇಳಿದರು.
“ಕೆಲವು ವಿಶೇಷ ಅತಿಥಿಗಳ ಭೇಟಿಯೊಂದಿಗೆ ನನಗೆ, ಅಮ್ಮನಿಗೆ ಮತ್ತು ಪ್ರಿಯಾಂಕಾಗೆ ನೆನಪಿಡುವ ಮಹತ್ವದ ದಿನ. ಸೋನಿಪತ್‌ನ ರೈತ ಸಹೋದರಿಯರ ದೆಹಲಿ ದರ್ಶನ ಮಾಡಿದರು. ಮನೆಯಲ್ಲಿ ಅವರೊಂದಿಗೆ ಭೋಜನ, ಸಾಕಷ್ಟು ಮೋಜಿನ ಚಟುವಟಿಕೆಗಳು. ದೇಸಿ ತುಪ್ಪ, ಸಿಹಿ ಲಸ್ಸಿ, ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಮತ್ತು ಬಹಳಷ್ಟು ಪ್ರೀತಿಯೊಂದಿಗೆ ಬೆಲೆ ಕಟ್ಟಲಾಗದ ಉಡುಗೊರೆಗಳು ಒಟ್ಟಿಗೆ ಸಿಕ್ಕಿವೆ ” ಎಂದು ರಾಹುಲ್ ಗಾಂಧಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತಿಳಿಸಿದ್ದಾರೆ.
“ಮಹಿಳೆಯರು ಯಾರಿಗಿಂತ ಕಡಿಮೆಯಿಲ್ಲ. ಸಮಾಜವು ಮಹಿಳೆಯರನ್ನು ನಿಗ್ರಹಿಸುತ್ತದೆ. ಮಹಿಳೆ ತನ್ನನ್ನು ತಾನು ಅಂಜಿಕೆಯಿಲ್ಲದೆ ಮುಕ್ತವಾಗಿ ವ್ಯಕ್ತಪಡಿಸಿಕೊಳ್ಳಬೇಕು” ಎಂದಿದ್ದಾರೆ.
ರಾಹುಲ್ ಗಾಂಧಿಯ ಬಾಲ್ಯತನದ ತುಂಟತನಗಳ ಬಗ್ಗೆ ಪ್ರಿಯಾಂಕಾ ಗಾಂಧಿ ಮಾತನಾಡಿರುವ ದೃಶ್ಯಗಳು, ಮಹಿಳೆಯರಿಗೆ ಮಧ್ಯಾಹ್ನದ ಊಟವನ್ನು ನೀಡುವ ಸಂದರ್ಭದಲ್ಲಿ ನಿಮಗೆ ಊಟ ಇಷ್ಟವಾಯಿತೇ, ಎಲ್ಲರಿಗೂ ಸಿಹಿತಿಂಡಿಗಳಿವೆಯೇ ಎಂದು ವಿಚಾರಿಸುತ್ತಿರುವುದು. ಜೊತೆಗೆ ಮಕ್ಕಳು ಮತ್ತು ಯುವತಿಯರಿಗೆ ಚಾಕೊಲೇಟ್‌ಗಳನ್ನು ವಿತರಿಸುವುದನ್ನು ಸಹ ವಿಡಿಯೋದಲ್ಲಿ ಕಾಣಬಹುದು.
ಜುಲೈ 8 ರಂದು ಸೋನಿಪತ್‌ನ ಮದೀನಾ ಗ್ರಾಮದಲ್ಲಿ ರಾಹುಲ್ ಗಾಂಧಿ ತಮ್ಮ ವಾಹನ ನಿಲುಗಡೆ ಮಾಡಿ ಕೃಷಿ ಭೂಮಿಯಲ್ಲಿ ಕೆಲಸ ಮಾಡುವ ಮಹಿಳಾ ರೈತರೊಂದಿಗೆ ಸಂವಾದ ನಡೆಸಿದ್ದರು.
ಸಿಂಪ್ಲಿ ಪ್ರಧಾನ ಮಂತ್ರಿ ಅವಶ್ಯಕತೆ ತುಂಬಾ ಇದೆ.