ಮರುಹುಟ್ಟು ಪಡೆಯುತ್ತಿರುವುದರಿಂದ ‘ರಾಮಾಯಣ’ ಜೀವಂತವಾಗಿದೆ: ಪುರುಷೋತ್ತಮ ಬಿಳಿಮಲೆ

Date:

Advertisements

ರಾಮಾಯಣ ನಿಂತ ನೀರಲ್ಲ. ಸದಾ ಕಾಲ ಹರಿಯುವ ಜೀವನದಿ. ಆಯಾಭಾಷೆ, ಪ್ರದೇಶ, ಸಂಸ್ಕೃತಿಗೆ ಅನುಗುಣವಾಗಿ ನಿರಂತರವಾಗಿ ಹೊಸ ರೂಪ, ಮರು ಹುಟ್ಟು ಪಡೆಯುತ್ತಿದೆ. ಆದ್ದರಿಂದಲೇ ಆ ಮಹಾಕಾವ್ಯ ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹಿರಿಯ ಚಿಂತಕ, ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಪ್ರತಿಪಾದಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪುರುಷೋತ್ತಮ ದಾಸ್ ಹೆಗ್ಗಡೆ ಅವರು ರಚಿಸಿರುವ, ರಾಮಾಯಣ ಕಥಾ ಹಂದರದ ಎರಡು ಸಂಪುಟಗಳ ‘ಪುರುಷೋತ್ತಮಾಯಣ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು. “2011ರ ಜನಗತಿ ವರದಿಯಲ್ಲಿ ದೇಶದಲ್ಲಿ 19,569 ಭಾಷೆಗಳನ್ನು ಗುರುತಿಸಲಾಗಿದೆ. ಬಹುಶಃ ಪ್ರತಿಯೊಂದು ಭಾಷೆಯಲ್ಲೂ ರಾಯಾಯಣ ಕೃತಿ ಹೊರ ಬಂದಿರಬಹುದು. ಕನ್ನಡದಲ್ಲೂ ಹತ್ತಾರು ರಾಮಾಯಣಗಳಿವೆ. ರಾಷ್ಟ್ರಕವಿ ಕುವೆಂಪು ಅವರ ‘ಶ್ರೀರಾಮಯಣ ದರ್ಶನಂ’ಗೆ ಜ್ಞಾನಪೀಠ ಪ್ರಶಸ್ತಿ ದೊರೆಯಿತು. ಮಾಜಿ ಮುಖ್ಯಮಂತ್ರಿ ಡಾ. ವೀರಪ್ಪ ಮೊಯ್ಲಿ ಅವರು ‘ಶ್ರೀರಾಮಾಯಣಂ ಮಹಾನ್ವೇಷಣಂ’ ರಚಿಸಿದ್ದರು. ಇದೀಗ ಪುರುಷೋತ್ತಮಾಯಣ ಹೊರ ಬಂದಿದೆ” ಎಂದರು.

“ತುಳುಭಾಷೆಯಲ್ಲಿ ತುಳುನಾಡಿನ ರಾಮಾಯಣವಿದೆ. ತಮಿಳುನಾಡಿನ ರಾಮಾಯಣದಲ್ಲಿ ದ್ರೌಪದಿಯನ್ನು ವೈಭವೀಕರಿಸಲಾಗಿದೆ. ದಲಿತ ಸಮುದಾಯಕ್ಕೆ ಪ್ರತ್ಯೇಕ ರಾಮಾಯಣವಿದೆ. ಆಯಾ ಕಾಲಘಟ್ಟಕ್ಕೆ, ಸನ್ನಿವೇಶಕ್ಕೆ, ಪ್ರದೇಶಕ್ಕೆ, ಪರಿಸ್ಥಿತಿಗೆ ತಕ್ಕಂತೆ ಎಲ್ಲರನ್ನೊಳಗೊಂಡು ಈ ಮಹಾಕಾವ್ಯ ಹೊಸತನವನ್ನು ಪಡೆದುಕೊಳ್ಳುತ್ತಿದೆ. ಇಂತಹ ಮಹಾಗ್ರಂಥಗಳನ್ನು ರಚಿಸುವ ಹಕ್ಕು ಲೇಖಕರಿಗಿದೆ. ಇಲ್ಲವಾದಲ್ಲಿ ಯಾವುದೇ ಸಾಹಿತ್ಯ ಹೊಸ ಆಶಯವನ್ನು ಪಡೆಯುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನಾವು ಸದಾ ಕಾಲ ಲೇಖಕರ ಪರನಿಲ್ಲಬೇಕು. ಇಲ್ಲವಾದಲ್ಲಿ ಸಾಹಿತ್ಯದಲ್ಲಿ ಕ್ರಿಯಾಶೀಲತೆ ನಶಿಸುತ್ತದೆ” ಎಂದರು.

Advertisements

“ದೆಹಲಿಯ ಜೆಎನ್‌ಯುನಲ್ಲಿ ಹಿರಿಯ ಸಾಹಿತಿ ಎ.ಕೆ ರಾಮಾನುಜಂ ಅವರ ರಾಮಾಯಣವನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವುದನ್ನು ಎಬಿವಿಪಿ ಕಾರ್ಯಕರ್ತರು ವಿರೋಧಿಸಿ ಪ್ರತಿಭಟನೆ ಮಾಡಿದ್ದರು. ಇದರಿಂದ ರಾಮಾನುಜಂ ಅವರಂತಹ ವಿಶ್ವಮಾನ್ಯ ಕವಿಯ ಚಿಂತನೆಯ ಮೂಸೆಯಲ್ಲಿ ಮೂಡಿ ಬಂದಿದ್ದ ಸಾಹಿತ್ಯವನ್ನು ಅಧ್ಯಯನ ಮಾಡುವ ಅವಕಾಶ ನಮ್ಮ ವಿದ್ಯಾರ್ಥಿಗಳಿಗೆ ಇಲ್ಲವಾಯಿತು. ಹೀಗಾಗಿ, ‘ರಾಮಾಯಣದ ಬಗ್ಗೆ ಕೃತಿ ಬರೆಯಲು ನಿಮಗೆ ಯಾರು ಅಧಿಕಾರ ಕೊಟ್ಟರು’ ಎಂದು ಕೇಳುವವರಿಗೆ, ‘ನಮ್ಮನ್ನು ಪ್ರಶ್ನಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು’ ಎಂದು ಮರು ಪ್ರಶ್ನಿಸಬೇಕಾಗುತ್ತದೆ” ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಮಾನ್ಸೂನ್ ಜೊತೆಗಿನ ಜೂಜಾಟದಲ್ಲಿ ಬಳಲಿದ ರಾಜ್ಯದ ರೈತ

ಹಿರಿಯ ಚಿಂತಕ ಡಾ.ಜಿ ರಾಮಕೃಷ್ಣ ಮಾತನಾಡಿ, “ವಾಲ್ಮೀಕಿ ರಾಮಾಯಣದಲ್ಲಿ ಸಮುದ್ರರಾಜನನ್ನು ಹೆದರಿಸುವ ರಾಮನ ಚಿತ್ರಣ ಭೀಕರವಾಗಿದೆ. ವಾಲ್ಮೀಕಿಗೆ ಆಶ್ರಮದಲ್ಲಿ ವಶಿಷ್ಟರು ದನದ ಮಾಂಸವನ್ನು ಆಹಾರವಾಗಿ ನೀಡುತ್ತಿದ್ದರು. ಆದರೆ, ಆಧುನಿಕ ಯುಗದಲ್ಲಿ ದನದ ಮಾಂಸದ ಬಗ್ಗೆ ಚರ್ಚೆ ನಡೆಯುತ್ತಿದೆ. ವಿಜ್ಞಾನವನ್ನು ಹೇಗೆ ಬಳಸಿಕೊಳ್ಳುತ್ತೆವೋ, ಅದೇ ರೀತಿ ಸಾಹಿತ್ಯದಲ್ಲೂ ವೈಜ್ಞಾನಿಕತೆಯನ್ನು ಬಳಸಿಕೊಳ್ಳುವುದು ಅಗತ್ಯ. ಸಾಹಿತ್ಯದ ಸತ್ಯವನ್ನು ವೈಜ್ಞಾನಿಕವಾಗಿ ಹಾಗೂ ಭಿನ್ನವಾಗಿ ನೋಡಬೇಕು” ಎಂದರು.

ಲೇಖಕ ಪುರುಷೋತ್ತಮ್ ದಾಸ್ ಹೆಗಡೆ ಮಾತನಾಡಿ, “ವಾಲ್ಮೀಕಿ ರಾಮಾಯಣವು ಸಹಸ್ರಾರು ಭಿನ್ನ, ವಿಭಿನ್ನ ರಾಮಾಯಣಗಳ ರಚನೆಗೆ ಸ್ಪೂರ್ತಿಯಾಗಿದೆ. ಇನ್ನೂ ಸಾವಿರಾರು ವರ್ಷಗಳವರೆಗೆ ರಾಮಾಯಣ ಹೊಸ ಆಯಾಮದೊಂದಿಗೆ ಹೊರ ಬರುತ್ತಲೇ ಇರುತ್ತದೆ. ಸಣ್ಣ ವಯಸ್ಸಿನಿಂದಲೂ ರಾಯಾಯಣದ ಬಗ್ಗೆ ಒಲವು ಬೆಳೆಸಿಕೊಂಡು ವ್ಯಾಪಕ ಅಧ್ಯಯನ, ವಿಶ್ಲೇಷಣೆಗಳನ್ನು ನಡೆಸಿ, ಈಗ ಕೃತಿಯ ರೂಪದಲ್ಲಿ ಹೊರತಂದಿದ್ದೇನೆ” ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಎಂ ರೇವಣ್ಣ, ಕೃಷ್ಣಪ್ಪ, ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ, ಕಾರ್ಯದರ್ಶಿ ಸಿ ಸತ್ಯನಾರಾಯಣ ಮತ್ತಿತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

Download Eedina App Android / iOS

X