ಮೈಸೂರು | ಭಾರತವನ್ನು ತಿಳಿಯಲು ಸಂವಿಧಾನ ಓದಬೇಕು: ನ್ಯಾ. ನಾಗಮೋಹನ್ ದಾಸ್

Date:

Advertisements

ಪ್ರತಿ ಧರ್ಮಕ್ಕೂ ತನ್ನದೇ ಆದ ಧರ್ಮ ಗ್ರಂಥಗಳಿವೆ. ಹಿಂದೂಗಳಿಗೆ ಭಗವದ್ಗೀತೆ,ಮುಸಲ್ಮಾನರಿಗೆ ಕುರಾನ್,ಕ್ರೈಸ್ತರಿಗೆ ಬೈಬಲ್ ಆದರೆ ಭಾರತದ ಈ ಎಲ್ಲ ಧರ್ಮಗಳಿಗೆ ಇರುವುದೊಂದೇ ಗ್ರಂಥ ಅದುವೇ ಸಂವಿಧಾನ. ಭಾರತವನ್ನು ಅರಿತುಕೊಳ್ಳಲು ಸಂವಿಧಾನ ಓದಬೇಕು ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ದಲಿತ ಸಂಘರ್ಷ ಸಮಿತಿ (ದಸಂಸ) ಆಯೋಜಿಸಿದ್ದ ‘ಸಂವಿಧಾನ ಮತ್ತು ಪ್ರಜಾಪ್ರಭುತ್ವ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಸಂವಿಧಾನ ಯಾವುದೇ ಭಾಷೆಯಲ್ಲಿ ಓದಿದರೂ ಸುಲಭವಾಗಿ ಅರ್ಥವಾಗುವಂತದ್ದಲ್ಲ. ಭಾರತವನ್ನು ಅರಿಯಬೇಕಾದರೆ, ಸಂವಿಧಾನ ಓದಲೇಬೇಕು. ಎಲ್ಲರೂ ಸಮುದಾಯ, ಬದುಕು, ಬವಣೆಗಳ ಬಗ್ಗೆ ತಿಳಿಯಬೇಕು. ಸಮಾಜದ ಬದ್ಧತೆ ಮೈಗೂಡಿಸಿಕೊಳ್ಳಬೇಕು. ಇದೆಲ್ಲವೂ ಸಾಧ್ಯವಾಗಬೇಕಾದರೆ, ಸಂವಿಧಾನ ಓದಬೇಕು” ಎಂದರು.

ಶಾಸಕ ದರ್ಶನ್ ಧ್ರುವ ನಾರಾಯಣ್ ಮಾತನಾಡಿ, “ನಾನು ಕಿರಿಯ ವಯಸ್ಸಿನಲ್ಲಿ ಶಾಸಕ ಆಗಿದ್ದೀನಿ ಅಂದ್ರೆ, ಅದಕ್ಕೆ ಸಂವಿಧಾನ ಕಾರಣ. ಸಂವಿಧಾನ ನಮಗೆ ಎಲ್ಲವನ್ನೂ ಕೊಟ್ಟಿದೆ. ಸಂವಿಧಾನದಿಂದ ನಮ್ಮೆಲ್ಲರ ಅಸ್ತಿತ್ವ” ಎಂದರು.

Advertisements

“ನನ್ನ ತಂದೆ (ಧ್ರುವ ನಾರಾಯಣ್) ಸಂತೆಮರಳ್ಳಿ ಕ್ಷೇತ್ರದಲ್ಲಿ ಒಂದು ಮತದಿಂದ ಗೆದ್ದು ಸಂಸದರಾದರು. ಅದು ಕೂಡ ಸಂವಿಧಾನ ಕೊಟ್ಟಿದ್ದು. ಸಂವಿಧಾನ ನಮಗೆ ಬದುಕಲು, ಸಮಾಜದಲ್ಲಿ ಉನ್ನತವಾದ ಸ್ಥಾನಗಳಿಸಲು ಅವಕಾಶ ನೀಡಿದೆ” ಎಂದರು.

ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, “ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯ ರಾಜಕೀಯ ಪ್ರೇರಿತವಾಗಿ ಸೃಷ್ಟಿಯಾಗಿರುವುದು. ಸುಮಾರು 90 ದಿನಗಳೇ ಕಳೆಯುತ್ತಾ ಬಂದಿವೆ. ಆದರೆ, ಪ್ರಧಾನಿ ಇಂದಿಗೂ ತುಟಿ ಬಿಚ್ಚಿಲ್ಲ. ಹೆಣ್ಣಿನ ಬೆತ್ತಲೆ ಮೆರವಣಿಗೆ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇಂತಹ ಕ್ರೌರ್ಯ ನಿಜಕ್ಕೂ ಹೇಯ ಕೃತ್ಯ” ಎಂದರು.

“ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಜನಾಂಗೀಯ ದಳ್ಳುರಿಯಲ್ಲಿ ಸುಮಾರು 250 ಜನರು ಮಲಿಯಾಗಿದ್ದಾರೆ. ಹಿಂಸಾಚಾರವನ್ನು ಅಲ್ಲಿನ ಬಿಜೆಪಿ ಸರ್ಕಾರ ಸಮರ್ಥಿಸಿಕೊಳ್ಳುತ್ತಿಯೇ ಹೊರತು, ಗಲಭೆಯನ್ನು ತಡೆಯುತ್ತಿಲ್ಲ” ಎಂದು ಆರೋಪಿಸಿದರು.

“2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದರ ಮೂಲಕ ಪಾಠ ಕಲಿಸಬೇಕಿದೆ. ಕರ್ನಾಟಕದಲ್ಲಿ 25 ಮಂದಿ ಬಿಜೆಪಿ ಸಂಸದರನ್ನು ಸೋಲಿಸುವ ಮೂಲಕ ತಕ್ಕ ಉತ್ತರ ನೀಡಬೇಕು” ಎಂದರು.

ಕಾರ್ಯಕ್ರಮದಲ್ಲಿ ದಸಂಸ ನಾಯಕ ಎನ್‌ ವೆಂಕಟೇಶ್, ಬೆಟ್ಟಯ್ಯ ಕೋಟೆ, ಅಲಗೂಡು ಶಿವಕುಮಾರ್, ಬಿ.ಡಿ ಶಿವಬುದ್ದಿ, ಶಂಭುಲಿಂಗಸ್ವಾಮಿ, ಹೆಗ್ಗನುರು ನಿಂಗರಾಜು, ಮಂಜು ಶಂಕನಪುರ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

ಮಂಗಳೂರು | ಆ. 23: ಅಲ್ ವಫಾ ಚಾರಿಟೇಬಲ್ ಟ್ರಸ್ಟ್‌ನಿಂದ 15 ಜೋಡಿಗಳ ಸರಳ ಸಾಮೂಹಿಕ ವಿವಾಹ

ಮಂಗಳೂರು ಭಾಗದಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಅಲ್ ವಫಾ ಚಾರಿಟೆಬಲ್ ಟ್ರಸ್ಟ್...

ಗುಬ್ಬಿ | ಎಂ.ಎನ್.ಕೋಟೆ ಗ್ರಾಪಂ ಉಪಾಧ್ಯಕ್ಷರಾಗಿ ಸಿದ್ದಗಂಗಮ್ಮ ಅವಿರೋಧ ಆಯ್ಕೆ

ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ...

ಕೋಲಾರ | ಐಎಎಸ್, ಐಪಿಎಸ್ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ; ಅ.ಮು ಲಕ್ಷ್ಮೀನಾರಾಯಣ ಭರವಸೆ

ಕೆಎಎಸ್, ಐಎಎಸ್ ಮತ್ತು ಐಪಿಎಸ್ ಓದಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉಚಿತ...

Download Eedina App Android / iOS

X