ಮಂಗಳಮುಖಿಯೊಬ್ಬರು ತಡರಾತ್ರಿ ಬಾಣಂತಿಯರ ಕೋಣೆಗೆ ನುಗ್ಗಿದ್ದು ಆಸ್ಪತ್ರೆ ರೋಗಿಗಳು ಮಕ್ಕಳ ಕಳ್ಳನೆಂದು ಆರೋಪಿಸಿ ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ ಘಟನೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ರಾಯಚೂರು ತಾಲ್ಲೂಕಿನ ಯರಮರಸ್ ಗ್ರಾಮದಲ್ಲಿ ವಾಸವಾಗಿರುವ ಮಂಗಳಮುಖಿ ಶರಣಪ್ಪ ಮಕ್ಕಳ ಕಳ್ಳನೆಂದು ಆರೋಪಕ್ಕೆ ಗುರಿಯಾಗಿ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಮಂಗಳಮುಖಿ ಶರಣಪ್ಪ ಬಾಣಂತಿಯರ ವಾರ್ಡ್ ಬಳಿ ಮಧ್ಯರಾತ್ರಿ 2 ಗಂಟೆಗೆ ಬಂದು ಮಕ್ಕಳನ್ನು ಕಳ್ಳತನ ಮಾಡಲು ಯತ್ನಿಸಿದ್ದಾನೆ ಎಂದು ಕಳ್ಳನನ್ನು ಹಿಡಿದ ತರಾಟೆ ತೆಗೆದುಕೊಂಡರು ಎನ್ನಲಾಗಿದೆ.
ಮಂಗಳಮುಖಿ ಶರಣಪ್ಪ ನಿನ್ನೆ ತನ್ನ ಗೆಳೆಯನೊಂದಿಗೆ ರಿಮ್ಸ್ ಆಸ್ಪತ್ರೆಗೆ ನುಗ್ಗಿ ರಾತ್ರಿ ಹೊರಗಡೆ ಮಲಗಿಕೊಂಡಿದ್ದಾನೆ. ಎಲ್ಲರೂ ನಿದ್ರೆಯಲ್ಲಿರುವಾಗ ಮಗು ಕಳ್ಳತನ ಮಾಡುತ್ತಿದ್ದ ಎಂದು ಅಲ್ಲಿಯೇ ಇದ್ದ ರೋಗಿಯ ಸಂಬಂಧಿಕರು ಹಿಡಿದು ಹೋಮ್ ಗಾರ್ಡ್ ಗಳಿಗೆ ಕರೆದಿದ್ದಾರೆ. ಮಹಿಳೆಯಂತೆ ಸಿದ್ಧವಾಗಿ ಬಂದಿದ್ದು ಆತ ಮಂಗಳಮುಖಿಯಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಘಟನೆ ಬಳಿಕ ರಿಮ್ಸ್ ಆಡಳಿತ ಮಂಡಳಿ ಮತ್ತು ಗೃಹ ರಕ್ಷಕ ಸಿಬ್ಬಂದಿಗಳ ವಿರುದ್ಧ ರೋಗಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕುಡಿಯುವ ನೀರಿಗಾಗಿ ಪಂಚಾಯಿತಿಗೆ ಬೀಗ
ಬೆಳಿಗ್ಗೆ ನಗರದ ಮಾರ್ಕೆಟಿಯಾರ್ಡ್ ಪೊಲೀಸರು ಬಿಎನ್ಎಸ್ಎಸ್ ಕಾಯ್ದೆಯ ಸೆಕ್ಷನ್ 128 ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆತ ಮಂಗಳಮುಖಿಯಾಗಿದ್ದು ರಾತ್ರಿ ವೇಳೆ ತಡವಾಗಿದ ಕಾರಣ ಆಸ್ಪತ್ರೆಯಲ್ಲಿ ಮಲಗಿದ್ದಾನೆ ಆತನ ಸಹೋದ್ಯೋಗಿ ಪರಾರಿಯಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
