ಶಿವಮೊಗ್ಗ,ಜಿಲ್ಲಾ ಸವಿತಾ ಸಮಾಜ ವತಿಯಿಂದ ಜಿಲ್ಲಾ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಜುಲೈ ೨೨ರ ಮಂಗಳವಾರ ‘ಶುಭ ಮಂಗಳ ದಲ್ಲಿ ಏರ್ಪಡಿಸಲಾಗಿದೆ.ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಮಾಜದ ಜಿಲ್ಲಾಧ್ಯಕ್ಷ ಎಂ ಜಿ ಬಾಲು,
ಶಿವಮೊಗ್ಗ ಸವಿತಾ ಸಮಾಜದ ಬಾಂಧವರು ತಮ್ಮ ಮಕ್ಕಳ ಅಂಕಪಟ್ಟಿ,ಭಾವಚಿತ್ರ,ಆಧಾರಕಾರ್ಡು ಜೆರಾಕ್ಸ್ ಪ್ರತಿಯನ್ನು ನೀಡುವುದರ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದರು.
ಜಿಲ್ಲಾ ಸಮಾಜದ ಅಡಿಯಲ್ಲಿ ಸಂಘಟನೆ ದೃಷ್ಟಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷರಾಗಿ ಗಂಗಾವತಿ ಉಪಾಧ್ಯಕ್ಷರಾಗಿ ಲೀಲಾವತಿ, ಪ್ರಧಾನ ಕಾರ್ಯದರ್ಶಿಯಾಗಿ ಸುಜಾತಾ ಕಣ್ಣ, ಸದಸ್ಯರಾಗಿ ಆರ್.ನಾಗವೇಣಿ, ರುಕ್ಕಣಿಯಮ್ಮ, ಸುಶೀಲಮ್ಮ ಇವರನ್ನು ನೇಮಕ ಮಾಡಲಾಗಿದೆ ಎಂದರು.
ಜಿಲ್ಲಾ ಸಮಾಜದ ಅಡಿಯಲ್ಲಿ ಜಿಲ್ಲಾ ಮಟ್ಟದ ಯುವ ಘಟಕದ ಅಧ್ಯಕ್ಷರಾಗಿ ಶಿಕಾರಿಪುರ ರಾಘವೇಂದ್ರ, ಉಪಾಧ್ಯಕ್ಷರಾಗಿ ಶಿವಮೊಗ್ಗ ರಾಘವೇಂದ್ರ ಭಂಡಾರಿ, ಪ್ರಧಾನ ಕಾರ್ಯದರ್ಶಿಯಾಗಿ ಸಾಗರ ಪ್ರದೀಪ್ ಭ೦ಡಾರಿ, ಸಂಘಟನ ಕಾರ್ಯದರ್ಶಿಯಾಗಿ ರಿಪ್ಪನಪೇಟೆ ಸಿದ್ದಪ್ಪ ಡಿ.ಎಂ. ಭಂಡಾರಿ, ಶಿಕಾರಿಪುರ ವಿ.ಗೋಪಿ, ಭದ್ರಾವತಿ ವಿ.ಹರೀಶ್ ಇವರನ್ನು ನೇಮಕ ಮಾಡಲಾಗಿದೆ ಎಂದರು.
ಜಿಲ್ಲೆಯ ಸವಿತಾ ಸಮಾಜದ ಬಾಂಧವರು ಕೆಲವರ ಹೇಳಿಕೆಗೆ ವಿಚಲಿತರಾಗಬಾರದು. ನೋಂದಾಯಿತ ಜಿಲ್ಲಾ ಸವಿತಾ ಸಮಾಜಕ್ಕೆ ಅಧಿಕೃತವಾಗಿ ಎಂ ಜಿ ಬಾಲು ಅಧ್ಯಕ್ಷರಾಗಿರುವರು. ಜಿಲ್ಲಾ ಸವಿತಾ ಸಮಾಜದ ಹೆಸರನ್ನು ಹೇಳಿಕೊಂಡು ನಾನೇ ಅಧ್ಯಕ್ಷರೆಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಸಂಘಟನೆ ಹಿತದೃಷ್ಟಿಯಲ್ಲಿ ಯಾವುದೇ ವ್ಯವಹಾರಗಳಲ್ಲಿ ದೇಣಿಗೆ ನೀಡುವುದಾಗಲೀ, ಸಂಘಟಿತ ವಿಚಾರವಾಗಲೀ, ಅವರ ಮಾಡಿದ ಕೆಲಸಗಳಿಗೆ ಈ ನೋಂದಾಯಿತ ಶಿವಮೊಗ್ಗ ಜಿಲ್ಲಾ ಸವಿತಾ ಜೆ.ಸಿ.ನಗರ, ಮಾರಮಿ ಭೈಲು, ಇವರಿಗೆ ಸಂಬಂಧಿಸುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರ.ಕಾರ್ಯದರ್ಶಿ ಎನ್ ಎಸ್ ರಮೇಶ್, ರಾಘವೇಂದ್ರ,ರಾಜಣ್ಣ, ದೀಪಾ, ಲೀಲಾವತಿ ಮೊದಲಾದವರಿದ್ದರು.