ಫೋಟೋ ತೆಗೆಯುವ ನೆಪದಲ್ಲಿ ಪತ್ನಿ ತನ್ನ ಗಂಡ ತಾತಪ್ಪನನ್ನು ಕೃಷ್ಣಾ ನದಿಗೆ ತಳ್ಳಿರುವ ಆರೋಪದ ಘಟನೆ ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ನಡೆದಿದೆ.
ನದಿಗೆ ಬಿದ್ದ ಯುವಕನ ಕಿರುಚಾಟ ಕೇಳಿ ಅಕ್ಕ-ಪಕ್ಕದ ಜಮೀನಿನವರು ಓಡೋಡಿ ಬಂದಿದ್ದಾರೆ. ಬ್ಯಾರೇಜ್ ಮಾರ್ಗವಾಗಿ ಹೊರಟಿದ್ದ ವಾಹನ ಸವಾರರು ಹಾಗೂ ಕೆಬಿಜೆಎನ್‌ಎಲ್ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಯುವಕನನ್ನು ರಕ್ಷಿಸಿದ್ದಾರೆ.
ಏಪ್ರಿಲ್ 10ರಂದು ಮೂರು ತಿಂಗಳ ಹಿಂದೆಯಷ್ಟೇ ಗದ್ದೆಮ್ಮ ಮತ್ತ ತಾತಪ್ಪ ಮದುವೆಯಾಗಿದ್ದು, ಈ ನವ ದಂಪತಿ ಸೇತುವೆ ಮಾರ್ಗದಿಂದ ತೆರಳುವ ಸಂದರ್ಭದಲ್ಲಿ ಬ್ಯಾರೇಜ್ ಮೇಲೆ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳಲು ನಿರ್ಧರಿಸಿದೆ. ಮೊದಲು ಪತ್ನಿಯ ಫೋಟೋ ತೆಗೆದ ಪತಿ ಬಳಿಕ ತನ್ನ ಫೋಟೋ ತೆಗೆಯುವಂತೆ ಪತ್ನಿಗೆ ಹೇಳಿದ್ದಾನೆ. ಈ ವೇಳೆ ಸೇತುವೆ ಕಟ್ಟೆಯ ಮೇಲೆ ನಿಲ್ಲಿಸಿ ಸಮೀಪದಿಂದ ಫೋಟೊ ಕ್ಲಿಕ್ಕಿಸುವ ನೆಪದಲ್ಲಿ ಪತಿಯನ್ನು ನದಿಗೆ ತಳ್ಳಿದ್ದಾಳೆ ಎನ್ನುವ ಆರೋಪ ಕೇಳಿಬಂದಿದೆ.
ತಾತಪ್ಪನಿಗೆ ಈಜು ಬಂದಿದ್ದರಿಂದ ಹೇಗೋ ಪ್ರಯಾಸಪಟ್ಟು ಈಜಿಕೊಂಡು ಹೋಗಿ ಕಲ್ಲು ಬಂಡೆಯ ಮೇಲೆ ಕುಳಿತು ರಕ್ಷಣೆಗಾಗಿ ಕೂಗಿದ್ದಾರೆ. ಇದೇ ವೇಳೆ “ಕಾಪಾಡಿ ಬ್ರೋ, ಅವಳನ್ನು ಹಿಡಿರಿ ಬ್ರೋ, ಯಾರಿಗಾದ್ರೂ ಫೋನ್ ಮಾಡಿ ಬ್ರೋ ಅಂತ ಜೋರಾಗಿ ಕಿರುಚಿದ್ದಾನೆ” ಎಂದು ವಿಡಿಯೋದಲ್ಲಿ ಸೆರೆಯಾಗಿದೆ. ದಾರಿಹೋಕರು ಇದನ್ನು ಗಮನಿಸಿ ಸ್ಥಳೀಯರಿಂದ ಹಗ್ಗ ತರಿಸಿ ಪ್ರಯಾಸಪಟ್ಟು ರಕ್ಷಣೆ ಮಾಡಿದ್ದಾರೆ.
ನದಿಯಿಂದ ಪಾರಾಗಿ ಬಂದ ಪತಿ, ನನ್ನ ಪತ್ನಿಯೇ ಕೆಳಕ್ಕೆ ತಳ್ಳಿದ್ದಳು ಎಂದು ಆರೋಪಿಸಿದ್ದಾನೆ. ಆದರೆ ಆಕೆ ಗಂಡನೇ ಕಾಲು ಜಾರಿ ಬಿದ್ದಿದ್ದಾನೆ ಎಂದು ಮಹಿಳೆ ವಾದಿಸಿದ್ದಾಳೆ. ಇವರಿಬ್ಬರ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
సెల్ఫీ పేరుతో భర్తను నదిలోకి తోసేసిన భార్య?#Karnataka – #Telangana సరిహద్దులో రాయచూర్ జిల్లాకు చెందిన తాతప్పను అతడి భార్య కృష్ణానది వద్దకు తీసుకెళ్లింది.
— Tupaki (@tupaki_official) July 12, 2025
సెల్ఫీ దిగుతూ ఒక్కసారిగా నదిలో పడిపోయిన భర్త… అతడు కొంతదూరం కొట్టుకుపోయి బండరాళ్ల వద్ద ఆగాడు.
స్థానికులు గమనించి తాడుతో… pic.twitter.com/WU6rNaBxwt