ಭಾರತ ಹಾಗೂ ಇಂಗ್ಲೆಂಡ್ ನಡುವಣ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ತಂಡ ಅಲ್ಪ ಮೊತ್ತದ ಮುನ್ನಡೆ ಸಾಧಿಸಿದೆ. ಟೀಮ್ ಇಂಡಿಯಾದ ಪರ ಕೆ ಎಲ್ ರಾಹುಲ್ ಬಾರಿಸಿದ ಶತಕ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ, ರಿಷಭ್ ಪಂತ್ ಬಾರಿಸಿದ ಅರ್ಧಶತಕ ತಂಡಕ್ಕೆ ನೆರವಾಯಿತು. ಈ ಪಂದ್ಯದಲ್ಲಿ ಉಭಯ ತಂಡಗಳು ಮೊದಲ ಇನಿಂಗ್ಸ್‌ನಲ್ಲಿ ಅಷ್ಟೇ ರನ್‌ಗಳನ್ನು ಕಲೆ ಹಾಕಿದವು. ದಶತಕದ ಬಳಿಕ ಎರಡೂ ತಂಡಗಳು ಒಂದು ಇನಿಂಗ್ಸ್‌ನಲ್ಲಿ ಸಮಾನದ ರನ್ ಕಲೆ ಹಾಕಿ ದಾಖಲೆಯ ಪುಟಕ್ಕೆ ಈ ಪಂದ್ಯ ಸಾಕ್ಷಿಯಾಯಿತು.
ಶನಿವಾರ ಭಾರತ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 145 ರನ್‌ಗಳಿಂದ ಆಟ ಮುಂದುವರೆಸಿತು. ನಾಲ್ಕನೇ ವಿಕೆಟ್‌ಗೆ ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಜೊಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ಮೊದಲಾವಧಿಯ ಕೊನೆಯ ವರೆಗೂ ಎಚ್ಚರಿಕೆಯ ಬ್ಯಾಟ್ ಮಾಡಿತು. ಈ ವೇಳೆ ಈ ಜೊಡಿ 198 ಎಸೆತಗಳನ್ನು ಎದುರಿಸಿ 141 ರನ್‌ಗಳ ಕಾಣಿಕೆ ನೀಡಿತು. ಆದರೆ ರಿಷಭ್ ಪಂತ್ ಭೋಜನ ವಿರಾಮದ ಕೊನೆಯ ಓವರ್‌ನಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ರಿಷಭ್ ಪಂತ್ 112 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 72 ರನ್ ಬಾರಿಸಿ ಮಿಂಚಿದರು. ಕನ್ನಡಿಗ ಕೆ ಎಲ್ ರಾಹುಲ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು ತಮ್ಮ ಕ್ಷಮತೆಗೆ ತಕ್ಕ ಆಟವನ್ನು ಆಡಿದರು. ಇವರು 177 ಎಸೆತಗಳಲ್ಲಿ 13 ಬೌಂಡರಿ ನೆರವಿನಿಂದ 100 ರನ್ ಬಾರಿಸಿ ಔಟ್ ಆದರು. ಆರನೇ ವಿಕೆಟ್‌ಗೆ ರವೀಂದ್ರ ಜಡೇಜಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೊಡಿ ಬಹು ಸಮಯ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿತು. ಈ ಜೋಡಿ 165 ಎಸೆತಗಳಲ್ಲಿ 72 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾಯಿತು. 30 ರನ್ ಬಾರಿಸಿ ಭರವಸೆಯ ಮೂಡಿಸಿದ್ದ ನಿತೀಶ್ ಕುಮಾರ್ ರೆಡ್ಡಿ ಇಲ್ಲದ ಹೊಡೆತಕ್ಕೆ ಮುಂದಾಗಿ ಸ್ಟೋಕ್ಸ್‌ಗೆ ವಿಕೆಟ್ ಒಪ್ಪಿಸಿದರು.
ಏಳನೇ ವಿಕೆಟ್‌ಗೆ ವಾಷಿಂಗ್ಟನ್ ಸುಂದರ್ ಹಾಗೂ ರವೀಂದ್ರ ಜಡೇಜಾ ಜೋಡಿ ಸಹ ತಂಡಕ್ಕೆ ಆಧಾರವಾಯಿತು. ಈ ಜೊಡಿ 113 ಎಸೆತಗಳಲ್ಲಿ 50 ರನ್ ಸೇರಿಸಿತು. ಈ ವೇಳೆ ಜಡೇಜಾ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 72 ರನ್ ಬಾರಿಸಿ ಅಬ್ಬರಿಸಿತು. ವಾಷಿಂಗ್ಟನ್ ಸುಂದರ್ 23 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಭಾರತ 387 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 3, ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್ ತಲಾ ಎರಡು ವಿಕೆಟ್ ಕಬಳಿಸಿದರು.
ರಾಹುಲ್ ದಾಖಲೆಯ ಶತಕ
ಸರಣಿಯುದ್ದಕ್ಕೂ ಉತ್ತಮ ಬ್ಯಾಟಿಂಗ್ ನಡೆಸಿರುವ ಕೆ ಎಲ್ ರಾಹುಲ್ ಲಾರ್ಡ್ಸ್ ಅಂಗಳದಲ್ಲಿ ಎರಡನೇ ಟೆಸ್ಟ್ ಶತಕ ಬಾರಿಸಿ ಅಬ್ಬರಿಸಿದರು. ಈ ಶತಕದ ಮೂಲಕ ರಾಹುಲ್ ಈ ಸರಣಿಯಲ್ಲಿ ಎರಡನೇ ಶತಕ ಬಾರಿಸಿದರು.
ಇದನ್ನು ಓದಿದ್ದೀರಾ? ಇಂಗ್ಲೆಂಡ್ ನೆಲದಲ್ಲಿ ಹೊಸ ದಾಖಲೆ ಬರೆದ ಭಾರತದ ಮಹಿಳಾ ಕ್ರಿಕೆಟ್ ತಂಡ
ಭಾರತ ಮೊದಲ ಇನಿಂಗ್ಸ್ ಆರಂಭಿಸಿದ್ದಾಗ ಕೆಎಲ್ ರಾಹುಲ್ ಅಜೇಯ 53 ರನ್ ಸಿಡಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಮೂರನೇ ದಿನದಾಟದ ಆರಂಭದಲ್ಲಿ ಕೆಎಲ್ ತನ್ನ ನೈಜ್ಯ ಅಂದಾಜಿನಲ್ಲಿ ಪ್ರದರ್ಶನ ನೀಡಿದರು. ಇವರು ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದರು. ಈ ಮೂಲಕ ಲಾರ್ಡ್ಸ್ ಅಂಗಳದಲ್ಲಿ ದಾಖಲೆ ಬರೆದರು. ಈ ಮೈದಾನದಲ್ಲಿ ಒಂದಕ್ಕಿಂತ ಹೆಚ್ಚು ಶತಕ ಬಾರಿಸಿದ ಪಟ್ಟಿಗೆ ಸ್ಥಾನ ಪಡೆದರು.
ಕೆಎಲ್ ರಾಹುಲ್ ಇಂಗ್ಲೆಂಡ್ ವಿರುದ್ಧ ಬಾರಿಸಿದ ಐದನೇ ಶತಕವಾಗಿದೆ. ಅಲ್ಲದೆ ಇಂಗ್ಲೆಂಡ್ ನೆಲದಲ್ಲಿ 4ನೇ ಶತಕ ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 10ನೇ ಶತಕ ಬಾರಿಸಿ ಅಬ್ಬರಿಸಿದರು. ಕೆ ಎಲ್ ರಾಹುಲ್ 176 ಎಸೆತಗಳಲ್ಲಿ 13 ಬೌಂಡರಿ ನೆರವಿನಿಂದ ಮೂರಂಕಿ ಮುಟ್ಟಿಸಿ ಸಂಭ್ರಮಿಸಿದರು.
ಲಾರ್ಡ್ಸ್ ಟೆಸ್ಟ್‌ನ ಎರಡನೇ ದಿನದಂದು, ಕೆ ಎಲ್ ರಾಹುಲ್ ಆರಂಭಿಕನಾಗಿ ಟೆಸ್ಟ್‌ನಲ್ಲಿ ತಮ್ಮ 24 ನೇ ಅರ್ಧಶತಕ ಬಾರಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ 5 ನೇ ಭಾರತೀಯ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇವರಿಗೂ ಮೊದಲು ಸುನಿಲ್ ಗವಾಸ್ಕರ್ (75), ವೀರೇಂದ್ರ ಸೆಹ್ವಾಗ್ (51), ಗೌತಮ್ ಗಂಭೀರ್ (31) ಮತ್ತು ಮುರಳಿ ವಿಜಯ್ (27) ಈ ಸಾಧನೆ ಮಾಡಿದ್ದರು.
ಈ ಅಮೋಘ ಬ್ಯಾಟಿಂಗ್ ನೆರವಿನಿಂದ ಕೆ ಎಲ್ ರಾಹುಲ್ ಮತ್ತೊಂದು ದಾಖಲೆ ಬರೆದರು. ಸೇನಾ ದೇಶದಲ್ಲಿ ಏಷ್ಯದ ಆರಂಭಿಕರಾಗಿ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಈ ಮೂಲಕ ವೀರೇಂದ್ರ ಸೆಹ್ವಾಗ್ ಮತ್ತು ಸಯೀದ್ ಅನ್ವರ್ ಅವರ ದಾಖಲೆಯನ್ನು ಅಳಿಸಿ ಹಾಕಿದರು.
