“ರಾಜ್ಯ ಸರ್ಕಾರದ ಶಕ್ತಿ ಯೋಜನೆ ಕೇವಲ ಎರಡು ವರ್ಷದಲ್ಲಿ 500 ಕೋಟಿ ಮಹಿಳೆಯರ ಉಚಿತ ಪ್ರಯಾಣ ಮಾಡಿದ ಇತಿಹಾಸ ನಿರ್ಮಾಣ ಮಾಡಿದೆ ನಮ್ಮ ಸರ್ಕಾರ” ಎಂದು ದಾವಣಗೆರೆ ಜಿಲ್ಲೆ ಹೊನ್ನಾಳಿ ಶಾಸಕ ಡಿಜಿ ಶಾಂತನಗೌಡ ಹರ್ಷ ವ್ಯಕ್ತಪಡಿಸಿದರು.
ಹೊನ್ನಾಳಿಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಪೂಜೆ ನೆರವೇರಿಸಿ ಮಾತನಾಡಿದ ಅವರು “ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಮಹಿಳೆಯರು ವಿದ್ಯಾರ್ಥಿನಿಯರು ಸೇರಿದಂತೆ 500 ಕೋಟಿ ದಾಟಿದ್ದು, ಸುವರ್ಣ ಅಕ್ಷರದಲ್ಲಿ ಬರೆದಿಡುವಂತ ಇತಿಹಾಸ ಸೃಷ್ಟಿಸಿದೆ” ಹೇಳಿದರು.

ರಾಜ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಒದಗಿಸಿದ್ದು ಮಹಿಳಾ ಸಬಲೀಕರಣದ ಮಹತ್ವಾಕ್ಷಾಂಕ್ಷೆಯೊಂದಿಗೆ ಪ್ರಾರಂಭಿಸಲಾದ ಯೋಜನೆಯು ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿ ದಾಖಲೆ ಬರೆದಿದೆ. ಪಂಚ ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಸರ್ಕಾರಕ್ಕೆ ಉತ್ತಮ ಹೆಸರು ಮತ್ತು ಕೀರ್ತಿ ತಂದ ಯಶಸ್ಸಿನ ಯೋಜನೆ. ಯೋಜನೆಯಿಂದ ರಾಜ್ಯದ ಬಹುತೇಕ ಪ್ರವಾಸಿ ತಾಣಗಳು, ದೇಗುಲಗಳು, ಸುಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು ಮಹಿಳೆಯರಿಂದಲೇ ತುಂಬಿ ತುಳುಕುತ್ತಿದ್ದು ನಿರೀಕ್ಷೆ ಮೀರಿ ಆದಾಯ ಗಳಿಸಿವೆ. ಆದ್ದರಿಂದ ರಾಜ್ಯ ಸರ್ಕಾರ ಪಂಚ ಗಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯ ಸಂಭ್ರಮಾಚರಣೆಯನ್ನು ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಘಟಕ ವ್ಯಾಪ್ತಿಯಲ್ಲಿ ಸಂಭ್ರಮ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ.
‘ಶಕ್ತಿ ಯೋಜನೆ ಸಂಭ್ರಮ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಒಂದು ಜನಪ್ರಿಯ ಆಚರಣೆಯಾಗಲಿದೆ. ಇದರ ಮೂಲಕ, ಶಕ್ತಿ ಯೋಜನೆಯ ಯಶಸ್ಸನ್ನು ಸಾರ್ವಜನಿಕವಾಗಿ ಗುರುತಿಸಲಾಗುತ್ತದೆ. ಜೊತೆಗೆ ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರದ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿಕೊಳ್ಳಲಾಗುತ್ತಿದೆ ” ಎಂದು ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಬಿ ಮಂಜಪ್ಪ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಹಾನಗರ ಪಾಲಿಕೆಗೆ ಸ್ವಚ್ಛ ಸರ್ವೇಕ್ಷಣ್ 2024ರ ಗರಿ
ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಎಚ್ ಎ ಉಮಾಪತಿ, ಡಾಕ್ಟರ್ ಈಶ್ವರ್ ನಾಯಕ್, ಟಿಎಪಿಎಂಎಸ್ ಅಧ್ಯಕ್ಷರಾದ ಶೇಖರಪ್ಪ ಕುಳಗಟ್ಟೆ, ಚಂದ್ರಶೇಖರಪ್ಪ ಸಾಸ್ವೆಹಳ್ಳಿ, ಗದಿಗೇಶಪ್ಪ ಹುಣಸಘಟ್ಟ, ಬಿ ಸಿದ್ದಪ್ಪ, ಡಿಪೋ ಮ್ಯಾನೇಜರ್ ರಾಮಚಂದ್ರಪ್ಪ, ಸುರೇಶ್ ಟಿ ಸಿ, ನಾಗರಾಜ್ ಗೌಡ್ರು ಬಿದರಗಡ್ಡೈ ನಾಗರಾಜ್, ಪುರಸಭೆಯ ಉಪಾಧ್ಯಕ್ಷರಾದ ಸಾವಿತ್ರಮ್ಮ ವಿಜೇಂದ್ರಪ್ಪ, ಆರ್ ನಾಗಪ್ಪ, ಎ ಜಿ ಪ್ರಕಾಶ್ ಸೇರಿದಂತೆ ಅನೇಕ ಮುಖಂಡರು ಭಾಗಿಯಾಗಿದ್ದರು.
ವರದಿ;
ಪ್ರಭಾಕರ್ , ಸಿಟಿಜನ್ ಜರ್ನಲಿಸ್ಟ್ , ಹೊನ್ನಾಳಿ