ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ರೈತರ ಕೃಷಿ ಭೂಮಿ ಭೂಸ್ವಾಧೀನ ಕೈಬಿಟ್ಟ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುವ ಜೊತೆಗೆ ಅಭಿವೃದ್ದಿ ಹೆಸರಿನಲ್ಲಿ ರೈತರ ಅಭಿಪ್ರಾಯವಿಲ್ಲದೆ ಕೃಷಿ ಭೂಮಿಯ ತಂಟೆಗೆ ಬರಬಾರದೆಂದು ಸರ್ಕಾರಕ್ಕೆ ಈ ರೈತ ಪರ ಗೆಲವು ಎಚ್ಚರಿಕೆ ಎಂದು ರೈತ ಸಂಘದ ಕೋಲಾರದ ಮಹಿಳಾ ಜಿಲ್ಲಾಧ್ಯಕ್ಷೆ ಎ ನಳಿನಿ ಗೌಡ ಅಭಿಪ್ರಾಯಪಟ್ಟರು.
“ಪ್ರೊ. ನಂಜುಂಡಸ್ವಾಮಿರವರ ಹೋರಾಟದ ಹಾದಿಯಲ್ಲಿ ಹೆಜ್ಜೆ ಹಾಕಿದ್ದ ಜನಪರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತ ಸಂಘದ ನಾಯಕರ ಪ್ರೇರಣೆಯ ಮಾತುಗಳೇ ಇಂದು ಅವರ ನಿರ್ಧಾರಕ್ಕೆ ಸ್ಪೂರ್ತಿಯಾಗಿವೆ. ರೈತರ ನೋವು ನಲಿವು ಜೊತೆಗೆ ಕೃಷಿ ಭೂಮಿ ಕಳೆದುಕೊಂಡರೆ ಮುಂದೆ ಅನುಭವಿಸುವ ರೈತರ ಸಂಕಷ್ಟಗಳನ್ನು ಅರಿತ ನಂತರವೇ ರೈತರ ಪರ ನಿಂತಿರುವುದು ರೈತ ಹೋರಾಟಕ್ಕಿರುವ ಶಕ್ತಿ” ಎಂದರು.
“ಪೂರ್ವಜರ ಕಾಲದಿಂದ ಕೃಷಿಯನ್ನೇ ನಂಬಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತಿದ್ದ ರೈತರ ಮೇಲೆ ಸರ್ಕಾರ ಕೈಗಾರಿಕೆ ಹೆಸರಿನಲ್ಲಿ ಸಾವಿರಾರು ಎಕರೆ ಭೂಸ್ವಾಧಿನ ಅದನ್ನೆ ನಂಬಿರುವ 13 ಹಳ್ಳಿಯ ಸಾವಿರಾರು ರೈತರನ್ನು ಬೀದಿಗೆ ತಳ್ಳುವ ಕೃಷಿ ಭೂಮಿ ಭೂಸ್ವಾದಿ ವಿರುದ್ದ ನಿರಂತರವಾಗಿ ಸರ್ಕಾರ ಹಾಗೂ ಕೆ.ಎ.ಐ.ಡಿ.ಬಿ ಸಂಸ್ಥೆ ವಿರುದ್ದ ಒಗ್ಗಟ್ಟಿನ ಹೋರಾಟಕ್ಕೆ ಮಣಿದು ಭೂಸ್ವಾಧಿನ ಸಂಪೂರ್ಣವಾಗಿ ಕೈಬಿಟ್ಟಿರುವುದು ಸ್ವಾಗತಾರ್ಹ” ಎಂದ ಅವರು, ಪ್ರೊ. ನಂಜುಂಡಸ್ವಾಮಿಯವರ ಹೋರಾಟದ ಹಾದಿಯಂತೆ ಈ ಹೋರಾಟ ಐತಿಹಾಸಿಕ ಗೆಲವಿಗೆ ಶ್ರಮಿಸಿದ ರಾಷ್ಟೀಯ ಮತ್ತು ರಾಜ್ಯ ರೈತ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ: ಕೋಲಾರ | ವಿಪತ್ತು ನಿರ್ವಹಣೆ ಯೋಜನೆ ಪರಿಷ್ಕರಣೆ-2025ರ ತರಬೇತಿ
“ಚನ್ನರಾಯಪಟ್ಟಣ ರೈತರ ಐತಿಹಾಸಿಕ ಹೋರಾಟವನ್ನು ಹತ್ತಿಕ್ಕಲು ಕೆಲವು ರಿಯಲ್ ಎಸ್ಟೇಟ್ ರೈತ ವಿರೋಧಿ ಕಾಂಗ್ರೆಸ್ ನಾಯಕರು ಭೂಮಿ ಕೊಡುತ್ತೇವೆ ಎಂಬ ಮಾಡಿದ ಷಡ್ಯಂತ್ರ ಫಲಿಸಲಿಲ್ಲ. ಇದಕ್ಕೆ ಕಾಲವೇ ಉತ್ತರ ಕೊಡುತ್ತದೆ” ಎಂದು ಭೂಗಳ್ಳರಿಗೆ ಎಚ್ಚರಿಕೆ ಸಂದೇಶ ನೀಡಿದರು.
“ರಾಜ್ಯದ ಯಾವುದೇ ಮೂಲೆಯಲ್ಲಿ ರೈತರಿಗೆ ತೊಂದರೆ ಆದರೆ ಜಿಲ್ಲೆಯ ರೈತ ಸಂಘ ನಿರಂತರವಾಗಿ ರೈತ ಪರ ನಿಲ್ಲುವ ಜೊತೆಗೆ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಭೂಸ್ವಾಧಿನ ವಿರುದ್ದ ಹೋರಾಟಕ್ಕೂ ಜಿಲ್ಲಾ ರೈತ ಸಂಘದಿಂದ ಬೆಂಬಲ ಸೂಚಿಸುವ ಜೊತೆಗೆ ಸರ್ಕಾರಗಳು ಇನ್ನು ಮುಂದೆ ಆದರೂ ಕೈಗಾರಿಕೆ ರಸ್ತೆ ಹಾಗೂ ಲೇಔಟ್ ನಿವೇಶನ ಹೆಸರಿನಲ್ಲಿ ಕೃಷಿ ಭೂಮಿ ಭೂಸ್ವಾಧಿನ ನಿಲ್ಲಿಸುವ ಮುಖಾಂತರ ರೈತರ ಪರ ನಿಲ್ಲಬೇಕು” ಎಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.