ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಫಗು ಹಳಕಟ್ಟಿಯವರದ್ದು ಅದ್ವಿತೀಯ ಸಾಧನೆ. ವಚನ ಸಾಹಿತ್ಯದಲ್ಲಿ ಬಹಳಷ್ಟು ಶ್ರಮಿಸಿದವರು. ಅವರ ಜನ್ಮದಿನವನ್ನು ವಚನ ಸಾಹಿತ್ಯ ಸಂರಕ್ಷಣಾ ದಿನವನ್ನಾಗಿ ಆಚರಿಸುತ್ತಿರುವುದು ನಮ್ಮ ಸೌಭಾಗ್ಯ ಎಂದು ಮಂಗಳೂರಿನ ಮ್ಯಾಪ್ಸ್ ಸಂಸ್ಥೆಯ ಉಪಪ್ರಾಂಶುಪಾಲ ಡಾ. ಪ್ರಭಾಕರ್ ನೀರ್‍ಮಾರ್ಗ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಪ್ಸ್ ಕಾಲೇಜು ಮಂಗಳೂರು ಇವರ ಸಹಕಾರದೊಂದಿಗೆ ಖ್ಯಾತ ವಚನ ಸಾಹಿತಿ, ಕವಿ ಸಂಶೋಧಕ ಫಗು ಹಳಕಟ್ಟಿಯವರ ಜನ್ಮದಿನವನ್ನು ಮ್ಯಾಪ್ಸ್ ಪಿ.ಯು ಕಾಲೇಜಿನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮ್ಯಾಪ್ಸ್ ಪಿ.ಯು ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಕುಮಾರಿ ಮಾತನಾಡಿ, ಹಳಕಟ್ಟಿಯವರ ಸಾಹಿತ್ಯಿಕ ಕೊಡುಗೆಗಳು ಅನನ್ಯ. ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ಇಂದಿನ ಯುವ ಸಮುದಾಯ ಸಾಗಬೇಕು. ಅವರ ಬದುಕು ಹಾಗೂ ಸಾಧನೆಗಳು ಇಂದಿನವರೆಗೆ ಮಾದರಿಯಾಗಿದೆ” ಎಂದರು.
ಇದನ್ನೂ ಓದಿ: ಮಂಗಳೂರು | ಕಟ್ಟಡ ನಿರ್ಮಾಣಕ್ಕೆ ಪೂರಕವಾಗಿ ಕರಾವಳಿ ಮರಳು ನೀತಿ ಜಾರಿಗೆ ಬರಲಿ: ವಸಂತ ಆಚಾರಿ
ಕಾರ್ಯಕ್ರಮದಲ್ಲಿ ಪದುವಾ ಕಾಲೇಜಿನ ಸಹಾಯಕಿ ಪ್ರಾಧ್ಯಾಪಕಿ ಅಕ್ಷತಾ ಶೆಟ್ಟಿ, ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.