ಜಾಗತಿಕ ಮಾರುಕಟ್ಟೆಯಲ್ಲಿ ಭಾರತವು ತನ್ನ ವಹಿವಾಟುಗಳನ್ನು ಶುಕ್ರವಾರ ದುರ್ಬಲವಾಗಿ ಮುಗಿಸಿದೆ. ಅಮೆರಿಕದ ಡಾಲರ್ ಎದುರು ಮತ್ತೆ ಕುಸಿತ ಕಂಡಿರುವ ರೂಪಾಯಿ ಮೌಲ್ಯವು, ಒಂದು ಡಾಲರ್‌ಗೆ 86.16 ರೂ.ಗೆ ಕುಸಿದುನಿಂತಿದೆ. ಗುರುವಾರ 86.08 ರೂ. ಇದ್ದ ರೂಪಾಯಿ ಇಂದು 8 ಪೈಸೆಯಷ್ಟು ಕುಸಿತ ಕಂಡಿದೆ.
ಶುಕ್ರವಾರ ಬೆಳಗ್ಗೆ ಜಾಗತಿಕ ಕಚ್ಚಾ ತೈಲು ಬೆಲೆಗಳ ಕುಸಿತದಿಂದಾಗಿ ರೂಪಾಯಿ ಮೌಲ್ಯವು ಏರಿಕೆ ಕಂಡು, 86.06 ರೂ.ಗೆ ಏರಿಕೆಯಾಗಿತ್ತು. ಅಲ್ಲದೆ, ಅಂತರ್‌ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು 85.99 ರೂ. ಇತ್ತು. ಆರಂಭಿಕ ಆಶಾವಾದವನ್ನು ಹುಟ್ಟುಹಾಕಿತ್ತು. ಆದರೆ, ದಿನದ ಅಂತ್ಯದ ವೇಳೆಗೆ ರೂಪಾಯಿ ಕುಸಿತಗೊಂಡಿದೆ.
ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಲ್ಲಿ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಭಾರತ ಮತ್ತು ಅಮೆರಿಕ ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.