ಮನೆಯಲ್ಲಿ ಮಲಗಿದಾಗ ಹಾವು ಕಡಿತದಿಂದ 4 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ದೇವದುರ್ಗ ತಾಲ್ಲೂಕು ಹೊನ್ನಟಗಿ ಗ್ರಾಮದಲ್ಲಿ ನಡೆದಿದೆ.
ಸಿರಿಯಮ್ಮ ರಮೇಶ್ (4) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ರಾತ್ರಿ ಮನೆಯಲ್ಲಿ ಮಲಗಿದಾಗ ಹಾವು ಕಚ್ಚಿದೆ ತಕ್ಷಣವೇ ಪೋಷಕರು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸಭೆಯಲ್ಲೇ ರಮ್ಮಿ ಗೇಮ್ ಆಡಿದ ಅಧಿಕಾರಿ ; ನೋಟಿಸ್
ಹಾವು ಕಡಿತದಿಂದ ಬಾಲಕಿಯ ಸ್ಥಿತಿ ಗಂಭೀರವಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಬಾಲಕಿಯ ಕುಟುಂಬಕ್ಕೆ ಸಂಬಂಧಪಟ್ಟ ಇಲಾಖೆ ವತಿಯಿಂದ ಪರಿಹಾರ ಒದಗಿಸಬೇಕು ಎಂದು ಗ್ರಾಮದ ಮುಖಂಡ ಶಾಂತಕುಮಾರ ಹೊನ್ನತಾಗಿ ಆಗ್ರಹಿಸಿದರು.
