ಆದಿಮ ರಂಗಶಾಲೆಯ ಗಾಯಕರೇ ನಾಯಕರಾಗಿರುವ ನೆಲ ಕೋಲಾರ: ರಾಜಪ್ಪ ದಳವಾಯಿ

Date:

Advertisements

ಗಾಯಕರೇ ನಾಯಕರಾಗಿರುವ ನೆಲ ಕೋಲಾರ. ಹೋರಾಟ, ಬದುಕು, ಅಸಂಖ್ಯಾತರ ಒಲವೇ ಆದಿಮ. ಮೊದಲು ಆದಿಮವನ್ನು, ಈ ನೆಲದ ಸಂಸ್ಕೃತಿಯನ್ನು ಅರಿಯಬೇಕು. ರಾಜ್ಯದಲ್ಲಿ ಹಲವು ರಂಗಶಾಲೆಗಳಿದ್ದು, ಅವುಗಳಿಗಿಂತ ವಿಭಿನ್ನವಾಗಿ ಆದಿಮ ರಂಗಶಾಲೆ ಶಿಕ್ಷಣ ಕೆಲಸ ನಡೆಯುತ್ತಿರುವುದು ಖುಷಿಯ ವಿಚಾರ ಎಂದು ನಾಟಕಕಾರ ರಾಜಪ್ಪ ದಳವಾಯಿ ಅಭಿಪ್ರಾಯಪಟ್ಟರು.

ಕೋಲಾರ ತಾಲೂಕಿನ ತೇರಹಳ್ಳಿ ಬೆಟ್ಟದ ಶಿವಗಂಗೆಯಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರದ ಡ್ರಾಮಾ ಡಿಪ್ಲೊಮಾ ಆರಂಭದ ಪ್ರಯುಕ್ತ ಆದಿಮ ರಂಗ ಶಿಕ್ಷಣ ಕೇಂದ್ರದ ಬೋಧನಾ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, “ಕಲೆ ನಿಂತ ನೀರಲ್ಲ; ಸದಾ ಹರಿಯುತ್ತಿರುತ್ತದೆ, ಅತ್ಯಂತ ಸೃಜನಾತ್ಮಕವಾಗಿರುತ್ತದೆ. ಹಾಗೆ ಕ್ರಿಯಾಶೀಲರಾದಾಗ ಮಾತ್ರ ಯಾವುದೇ ಕಲಾವಿದ ಏನಾದರೂ ಸಾಧಿಸಲು ಸಾಧ್ಯ” ಎಂದು ಹೇಳಿದರು.

Advertisements

“ಬದುಕಿ ಸಾಯಬೇಕು, ಸಾಯುವುದಕ್ಕೆ ಬದುಕಬಾರದು. ಬದುಕು ಬಹಳ ವಿಸ್ತಾರವಾದದು” ಎಂದು ನುಡಿದರು.

ದಲಿತ ಮುಖಂಡ ಸಿ ಎಂ ಮುನಿಯಪ್ಪ ಮಾತನಾಡಿ, “ನಟನಾ ಕಲಿಕೆಯ ಡಿಪ್ಲೊಮಾ ಕೋರ್ಸ್ ಮಾಡಲು ಹಲವರು ಬಂದಿದ್ದಾರೆ. ಆದಿಮದಂತಹ ಪರಿಸರದಲ್ಲಿ ಕಲಿಕೆ ಆರಂಭಿಸುತ್ತಿದ್ದಾರೆ. ನಾಳೆ ಯಾರು ಏನಾಗುವಿರೋ ಹೇಳಲು ಸಾಧ್ಯವಿಲ್ಲ. ರಂಗಭೂಮಿಯಲ್ಲಿ ಯಶಸ್ವಿ ಕಾಣಬೇಕೆಂದರೆ ಮೊದಲು ವೇದಿಕೆ ಭಯ ಬಿಡಬೇಕು. ಶ್ರದ್ಧೆಯಿಂದ ಕಲಿತರೆ ಯಾವುದೇ ಪಾತ್ರ ಮಾಡಲು ಕಷ್ಟವಾಗುವುದಿಲ್ಲ” ಎಂದರು.

ಆದಿಮ ಕಾರ್ಯದರ್ಶಿ ಹ.ಮಾ.ರಾಮಚಂದ್ರ ಆಶಯ ನುಡಿಗಳನ್ನಾಡಿ ರಂಗವಿದ್ಯಾರ್ಥಿಗಳಿಗೆ ಕೆಲವು ಸಲಹೆ, ಸೂಚನೆ ನೀಡಿದರು. ಚಿಂದಿ ಹಾಯಿಸುವ ಹುಡುಗರ ಕಾರ್ಯವೈಖರಿ ಉದಾಹರಣೆಯಾಗಿ ಕೊಟ್ಟದರು.

ಈ ಸುದ್ದಿ ಓದಿದ್ದೀರಾ? ಕೋಲಾರ | ಬೆಟ್ಟಹೊಸಪುರ ಅಂಗನವಾಡಿಗೆ ಶಾಸಕ ಕೊತ್ತೂರು ಮಂಜುನಾಥ್ ಭೇಟಿ

ಆದಿಮ ಅಧ್ಯಕ್ಷ ಎನ್ ಮುನಿಸ್ವಾಮಿ, “ಎಲ್ಲರ ಮಾತುಗಳಂತೆ ತಮ್ಮ ಕಲಿಕೆ ಕ್ರಮಬದ್ಧವಾಗಿ, ಕ್ರಿಯಾಶೀಲವಾಗಿ ಸಾಗಲಿ. ಜಗತ್ತಿನಲ್ಲಿ ಕಲೆ ಮತ್ತು ಪ್ರೀತಿ ಒಂದಾಗಬೇಕಿದೆ. 84 ಕೋಟಿ ಜೀವರಾಶಿಗಳಲ್ಲಿ ಮನುಷ್ಯನಿಗೆ ಮಾತ್ರ ದುಃಖ, ನೋವು, ಸಂಕಟ ಇದೆ. ಅದಕ್ಕಾಗಿ ಕಲೆ ಮತ್ತು ಪ್ರೀತಿ ಒಂದಾಗಬೇಕಿದೆ” ಎಂದರು.

ನೀಲಕಂಠೇಗೌಡ, ಪ್ರಾಂಶುಪಾಲ ಜಗದೀಶ್ ಆರ್ ಜಾಣಿ, ಎನ್‌ಎಸ್‌ಡಿ ಬಿ ಎಂ ಶ್ರೀನಿವಾಸ್, ಡಿ ಆರ್ ರಾಜಪ್ಪ, ಅಗ್ರಹಾರ ರಮೇಶ್, ಗ ನಾ ಅಶ್ವತ್, ಶ್ರೀನಿವಾಸ್ ತುರಂಡಹಳ್ಳಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

Download Eedina App Android / iOS

X