ಒಂದೇ ಯುವತಿಯನ್ನು ಮದುವೆಯಾದ ಇಬ್ಬರು ಸಹೋದರರು; ನೂರಾರು ವರ್ಷಗಳಿಂದ ಇರುವ ಬಹುಪತಿತ್ವ ಆಚರಣೆ

Date:

ಹಿಮಾಚಲ ಪ್ರದೇಶದ ಶಿಲ್ಲೈ ಗ್ರಾಮದಲ್ಲಿ ಒಂದೇ ಯುವತಿಯನ್ನು ಇಬ್ಬರು ಸಹೋದರರು ಮದುವೆಯಾಗಿದ್ದು, ಬಹುಪತಿತ್ವದ ಪುರಾತನ ಸಾಂಪ್ರದಾಯಿಕ ಆಚರಣೆಗೆ ನೂರಾರು ಜನ ಸಾಕ್ಷಿಯಾದರು.

- Advertisement -

ವಧು ಸುನೀತಾ ಚೌಹಾನ್ ಮತ್ತು ಇಬ್ಬರು ವರರಾದ ಪ್ರದೀಪ್ ಮತ್ತು ಕಪಿಲ್ ನೇಗಿ ಈ ನಿರ್ಧಾರವನ್ನು ಯಾವುದೇ ಒತ್ತಡವಿಲ್ಲದೇ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಈ ವಿವಾಹ ಸಮಾರಂಭವು ಸಿರ್ಮೌರ್ ಜಿಲ್ಲೆಯ ಗಿರಿಯಾಚಗಿನ ಪ್ರದೇಶದಲ್ಲಿ ಜುಲೈ 12 ರಂದು ಆರಂಭವಾಗಿ ಮೂರು ದಿನಗಳ ಕಾಲ ನಡೆಯಿತು. ಸ್ಥಳೀಯ ಜಾನಪದ ಗೀತೆಗಳು ಮತ್ತು ನೃತ್ಯಗಳು ಸಮಾರಂಭಕ್ಕೆ ಮೆರುಗು ತಂದವು. ಈ ವಿವಾಹದ ವಿಡಿಯೊಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ.

ಹಿಮಾಚಲ ಪ್ರದೇಶದ ಕಂದಾಯ ಕಾನೂನುಗಳು ಈ ಸಂಪ್ರದಾಯವನ್ನು “ಜೋಡಿದಾರ” ಎಂದು ಗುರುತಿಸಿವೆ. ಗಿರಿಯಾಚಗಿನ ಬಧಾನಾ ಗ್ರಾಮದಲ್ಲಿ ಕಳೆದ ಆರು ವರ್ಷಗಳಲ್ಲಿ ಇಂತಹ ಐದು ವಿವಾಹಗಳು ನಡೆದಿವೆ. ಕುನ್ಹತ್ ಗ್ರಾಮದ ಸುನೀತಾ ಈ ಸಂಪ್ರದಾಯದ ಬಗ್ಗೆ ತಿಳಿದಿದ್ದು, ಯಾವುದೇ ಒತ್ತಡವಿಲ್ಲದೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಶಿಲ್ಲೈ ಗ್ರಾಮದ ಪ್ರದೀಪ್ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಕಿರಿಯ ಸಹೋದರ ಕಪಿಲ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ವರ ಪ್ರದೀಪ್ “ನಾವು ಈ ಸಂಪ್ರದಾಯವನ್ನು ಸಾರ್ವಜನಿಕವಾಗಿ ಅನುಸರಿಸಿದ್ದೇವೆ, ಏಕೆಂದರೆ ಇದರ ಬಗ್ಗೆ ನಮಗೆ ಹೆಮ್ಮೆ ಇದೆ. ಇದು ನಮ್ಮ ಮೂವರ ನಿರ್ಧಾರವಾಗಿದೆ” ಎಂದಿದ್ದಾರೆ.

ಮತ್ತೊಬ್ಬ ವರ ಕಪಿಲ್ ಮಾತನಾಡಿ, “ನಾನು ವಿದೇಶದಲ್ಲಿ ವಾಸಿಸುತ್ತಿದ್ದರೂ, ಈ ವಿವಾಹದ ಮೂಲಕ ನಾವು ನಮ್ಮ ಪತ್ನಿಗೆ ಬೆಂಬಲ ಮತ್ತು ಪ್ರೀತಿಯನ್ನು ಕುಟುಂಬದಲ್ಲಿ ನೀಡುತ್ತೇವೆ” ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ: ಪೊಲೀಸ್ ಇಲಾಖೆಯ ಮಾದರಿ ಹೆಜ್ಜೆ

ಹಟ್ಟಿ ಸಮುದಾಯವು ಹಿಮಾಚಲ ಪ್ರದೇಶ-ಉತ್ತರಾಖಂಡ ಗಡಿಯಲ್ಲಿ ವಾಸಿಸುವ ಬುಡಕಟ್ಟು ಸಮುದಾಯವಾಗಿದ್ದು, ಮೂರು ವರ್ಷಗಳ ಹಿಂದೆ ಪರಿಶಿಷ್ಟ ಪಂಗಡವೆಂದು ಘೋಷಿಸಲಾಗಿದೆ. ಈ ಸಮುದಾಯದಲ್ಲಿ ಬಹುಪತಿತ್ವವು ಶತಮಾನಗಳಿಂದ ಪ್ರಚಲಿತವಾಗಿತ್ತು. ಆದರೆ, ಮಹಿಳೆಯರಲ್ಲಿ ಸಾಕ್ಷರತೆಯ ಏರಿಕೆ ಮತ್ತು ಸಮುದಾಯಗಳ ಆರ್ಥಿಕ ಅಭಿವೃದ್ಧಿಯಿಂದಾಗಿ ಇಂತಹ ವಿವಾಹಗಳ ಸಂಖ್ಯೆ ಕಡಿಮೆಯಾಗಿತ್ತು. ಈಗಲೂ ಕೆಲವು ವಿವಾಹಗಳು ರಹಸ್ಯವಾಗಿ ನಡೆಯಲಿದ್ದು, ಸಮಾಜ ಈ ವಿವಾಹವನ್ನು ಸ್ವೀಕರಿಸುತ್ತದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.

ಕೆಲವರ ಪ್ರಕಾರ, ಈ ಸಂಪ್ರದಾಯದ ಮುಖ್ಯ ಉದ್ದೇಶವು ಪಿತೃಪಾರಂಪರಿಕ ಭೂಮಿಯನ್ನು ವಿಭಜನೆಯಿಂದ ತಡೆಯುವುದಾಗಿದೆ. ಆದರೆ, ಬುಡಕಟ್ಟು ಮಹಿಳೆಯರಿಗೆ ಪಿತೃಪಾರಂಪರಿಕ ಆಸ್ತಿಯಲ್ಲಿ ಪಾಲು ಸಿಗುವುದು ಇನ್ನೂ ಪ್ರಮುಖ ಸಮಸ್ಯೆಯಾಗಿದೆ. ಸಿರ್ಮೌರ್ ಜಿಲ್ಲೆಯ ಗಿರಿಯಾಚೆಗಿನ ಪ್ರದೇಶದ ಸುಮಾರು 450 ಗ್ರಾಮಗಳಲ್ಲಿ ವಾಸಿಸುವ ಒಟ್ಟು ಮೂರು ಲಕ್ಷದಷ್ಟು ಹಟ್ಟಿ ಸಮುದಾಯದ ಜನರಿದ್ದಾರೆ. ಕೆಲವು ಗ್ರಾಮಗಳಲ್ಲಿ ಬಹುಪತಿತ್ವವು ಇನ್ನೂ ಪಾಲನೆಯಾಗುತ್ತಿದೆ. ಈ ಸಂಪ್ರದಾಯವು ಉತ್ತರಾಖಂಡದ ಜೌನ್ಸಾರ್ ಬಾಬರ್ ಮತ್ತು ಹಿಮಾಚಲ ಪ್ರದೇಶದ ಕಿನ್ನೌರ್‌ನಂತಹ ಬುಡಕಟ್ಟು ಪ್ರದೇಶಗಳಲ್ಲಿಯೂ ಒಂದು ಕಾಲದಲ್ಲಿ ಪ್ರಚಲಿತವಾಗಿತ್ತು.

ಹಟ್ಟಿ ಸಮುದಾಯದ ಮುಖಂಡರಾದ ಕುಂದನ್ ಸಿಂಗ್ ಶಾಸ್ತ್ರಿ ಮಾತನಾಡಿ, ಈ ಸಂಪ್ರದಾಯವು ಕೃಷಿ ಭೂಮಿಯನ್ನು ವಿಭಜನೆಯಿಂದ ರಕ್ಷಿಸಲು ಸಾವಿರಾರು ವರ್ಷಗಳ ಹಿಂದೆ ಆರಂಭವಾಯಿತು. ಒಂದೇ ವಧುವನ್ನು ಇಬ್ಬರು ಅಥವಾ ಹೆಚ್ಚಿನ ಸಹೋದರರೊಂದಿಗೆ ಮದುವೆಯಾಗಿಸುವ ಮೂಲಕ ಅವಿಭಕ್ತ ಕುಟುಂಬದಲ್ಲಿ ಸಹೋದರತ್ವ ಮತ್ತು ಪರಸ್ಪರ ಒಗ್ಗಟ್ಟನ್ನು ಉತ್ತೇಜಿಸುದಾಗಿರುತ್ತದೆ. ದೊಡ್ಡ ಕುಟುಂಬವಿದ್ದರೆ, ಹೆಚ್ಚಿನ ಪುರುಷರಿದ್ದರೆ, ಬುಡಕಟ್ಟು ಸಮಾಜದಲ್ಲಿ ಭದ್ರತೆಯ ಭಾವನೆ ಹೆಚ್ಚುತ್ತದೆ. ಇದರ ಜೊತೆಗೆ, ದೂರದ ಬೆಟ್ಟಗಾಡು ಪ್ರದೇಶಗಳಲ್ಲಿ ಹರಡಿರುವ ಕೃಷಿ ಭೂಮಿಯನ್ನು ನಿರ್ವಹಿಸಲು ದೊಡ್ಡ ಕುಟುಂಬದ ಅಗತ್ಯವಿರುತ್ತದೆ” ಎನ್ನುತ್ತಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿ, ಯುವತಿಯರ ಮೇಲೆ ಹಲ್ಲೆ; ನಾಲ್ವರು RSS ಗೂಂಡಾಗಳ ಬಂಧನ

ದೆಹಲಿಯಲ್ಲಿ ನಡೆದ 'ಕಾಕ್ರೋಚ್ ಜನತಾ ಪಾರ್ಟಿ' (CJP) ಪ್ರತಿಭಟನೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು...

ದೆಹಲಿ ಈಗ ‘ಡಿಟೆನ್ಷನ್ ಸ್ಟೇಟ್’ – ಪ್ರತಿಭಟನಾಕಾರರ ಬಂಧನಕ್ಕೆ ಸಂಸದ ಸಂಜಯ್ ರಾವತ್ ಆಕ್ರೋಶ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್...

ಸಿಜೆಪಿ ಪ್ರತಿಭಟನೆ ಯಶಸ್ವಿ; 40 ಸಾವಿರ ಅರೆಸೇನಾ ಯೋಧರ ನಿಯೋಜನೆಯೇ ಸಾಕ್ಷಿ:‌ ಪ್ರಶಾಂತ್ ಕಿಶೋರ್

ಭಾರತದ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ಸಿಜೆಪಿ ಕರೆಕೊಟ್ಟಿದ್ದ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳು, ಮಹಿಳೆಯರ ಮೇಲೆ ಹಲ್ಲೆ ಮಾಡಿದ ಹಿಂದೂ ರಕ್ಷಾ ದಳದ ನಾಲ್ವರ ಬಂಧನ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ...