ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಮುಟ್ಟಲು ಛಲವಿರಬೇಕು. ಆಗ ಮಾತ್ರ ನಿಮ್ಮ ಗುರಿ ಮಟ್ಟಲು ಸಾಧ್ಯವಾಗುತ್ತದೆ ಎಂದು ಧಾರವಾಡದ ಉಪವಿಭಾಗಾಧಿಕಾರಿ ಅಶೋಕ ತೇಲಿ ತಿಲೀಸಿದರು.
ನಗರದ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಆಗಸ್ಟ್ 02ರಂದು ಭೇಟಿ ನೀಡಿ, ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಪರಿಶೀಲಿಸಿದ ವೇಳೆ ಮಾತನಾಡಿದರು.
ಅಭ್ಯಾಸದ ಸಮಯದಲ್ಲಿ ನಿಮ್ಮ ಮನಸ್ಸು ಬೇರೆಡೆ ಗಮನ ಹರಿಸದಂತೆ ಮನಸ್ಸನ್ನು ಕೇಂದ್ರೀಕೃತಗೊಳಿಸಬೇಕು. ಅದಕ್ಕೆ ಬೆಳಿಗ್ಗೆ ಎದ್ದು ಅಭ್ಯಾಸವನ್ನು ಮಾಡುವ ರೂಢಿಯನ್ನು ಬೆಳಸಿಕೊಳ್ಳಬೇಕು ಯೋಗ ಮುಂತಾದ ಅಭ್ಯಾಸಗಳನ್ನು ಮಾಡಿದರೆ ನಿಮ್ಮ ಮನಸ್ಸನ್ನು ಕೇಂದ್ರೀಕೃತಗೊಳಿಸಲು ಸಾಧ್ಯವಾಗುತ್ತದೆ. ನೀವು ಓದಿನ ವೇಳಾಪಟ್ಟಿಯನ್ನು ಇಟ್ಟುಕೊಂಡು ಕ್ರಮಬದ್ಧವಾಗಿ ಅಧ್ಯಯನ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ಕಷ್ಟಗಳು ಬರುತ್ತವೆ ಅದನ್ನು ಎದುರಿಸಿದರೆ ಯಶಸ್ಸು ತಾನೇ ಬರುತ್ತದೆ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚನೆ
ಶಾಲೆಯ ಮೂಲಸೌಕರ್ಯ ಪರಿಶೀಲಿಸಿ, ಮುಖ್ಯೋಪಧ್ಯಾಯರಿಂದ ಶಾಲೆಯ ಸಮಗ್ರ ಮಾಹಿತಿಯನ್ನು ಪಡೆದುಕೊಂಡು “ವಿದ್ಯಾರ್ಥಿಗಳ ಪಾಠದ ಜೊತೆಗೆ ಶಾಲೆಯ ಮೂಲ ಸೌಕರ್ಯಗಳ ಬಗ್ಗೆ ಕಾಳಜಿ ವಹಿಸಿ, ಕುಂದು ಕೊರತೆಗಳಿದ್ದರೆ ಸಂಬಂಧಿಸಿದ ಇಲಾಖೆಗೆ ಹಾಗೂ ಅವಶ್ಯಕತೆವಿದ್ದರೆ ನಮ್ಮ ಗಮನಕ್ಕೂ ತರಬೇಕು” ಎಂದು ತಿಳಿಸಿದ್ದು, ಶಾಲೆಯಲ್ಲಿರುವ ಉತ್ತಮ ವಾತಾವರಣಕ್ಕೆ ಹರ್ಷ ವ್ಯಕ್ತಪಡಿಸಿದರು.
ಮುಖ್ಯೋಪಧ್ಯಾಯ ಸುರೇಶ ಸನದಿ, ಎಸ್‍ಡಿಎಂಸಿ ಅಧ್ಯಕ್ಷ ರಾಚಯ್ಯ ಹಿರೇಮಠ, ಉಪಾಧ್ಯಕ್ಷೆ ಲಲಿತಾ ಜಾಧವ ಸೇರಿದಂತೆ ಶಿಕ್ಷಕರು, ಎಸ್‍ಡಿಎಂಸಿ ಸದಸ್ಯರು, ಸಿಬ್ಬಂದಿಗಳು ಇದ್ದರು.