ಶಾಲಾ ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಬೇಕು. ಗಿಡ ಮರಗಳನ್ನು ಬೆಳೆಸಿರುವುದರಿಂದ ಶುದ್ಧವಾದ ವಾತಾವರಣ ನಿರ್ಮಾಣವಾಗುತ್ತದೆ ಎಂದು ಲೊಯೋಲಾ ಸಮಾಜ ಸೇವಾ ಕೇಂದ್ರದ ನಿರ್ದೇಶಕ ಫಾದರ್ ಡಾನ್ ಲೋಬೋ ಹೇಳಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಉಮಳಿ ಹೊಸೂರು ಗ್ರಾಮದಲ್ಲಿ ಪರಿಸರ ಕಾಳಜಿ, ಶಿಕ್ಷಣದ ಅರಿವು ಹಾಗೂ ಶ್ರಮದಾನ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಮತ್ತು ಲಯೋಲ ಸಂಸ್ಥೆ ಆಯೋಜಿಸಿದ್ದವು. ಗ್ರಾಮದ ಶಾಲೆಯ ಆವರಣದಲ್ಲಿ ಪರಿಸರ ಜಾಗೃತಿಯ ಅಂಗವಾಗಿ ಸಸಿಗಳನ್ನು ಅಧಿಕಾರಿಗಳು ಮತ್ತು ಮುಖಂಡರು ನೆಟ್ಟರು.
ಈ ಸಂದರ್ಭದಲ್ಲಿ ಪಿಡಿಓ ಮಲ್ಲೇಶ್ ಹಾಗೂ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಮತ್ತು ಎಸ್‌ಬಿಐ ಬ್ಯಾಂಕಿನ ಆರ್ಥಿಕ ಸಾಕ್ಷರತಾ ಸಲಹೆಗಾರ ಚಂದ್ರಶೇಖರ ಸೊಪ್ಪಿಮಠ, ಗ್ರಾಮ ಪಂಚಾಯತ್ ಸದಸ್ಯ ಯಲ್ಲಪ್ಪ, ಅಯ್ಯಪ್ಪ, ರೈತ ಮುಖಂಡ ರಾಜಸಾಬ್, ಲೋಯೋಲ ಸಮಾಜ ಸೇವ ಕೇಂದ್ರದ ಮರಿಯಪ್ಪ, ಬಸವಲಿಂಗ, ಸಿಮೋನ್, ಪ್ರಕಾಶ್, ಮತ್ತು ಸಂತ ಜೋಸೆಫರ ವಿಶ್ವವಿದ್ಯಾಲಯ ಬೆಂಗಳೂರಿನ ಉಪನ್ಯಾಸಕರು ಇದ್ದರು.