ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಜನವಾದಿ ಮಹಿಳಾ ಸಂಘಟನೆಯ ಕಾರ್ಯಕರ್ತರು ಜಮಾವಣೆಗೊಂಡು ದೇವದುರ್ಗ ನಗರದ ಕ್ಲಬ್ ಮೈದಾನದಲ್ಲಿ ಪ್ರತಿಭಟಿಸಿ ಸಿಪಿಐ ಗುಂಡೂರಾವ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಅರಕೇರಾ ತಾಲ್ಲೂಕು ಮೂಡಲಗುಂಡ ಗ್ರಾಮದಲ್ಲಿ ಇದೇ ತಿಂಗಳು 6 ರಂದು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗುಂಡಾ ವರ್ತನೆ ಮಾಡಿದ್ದಾನೆ ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಪ್ರಬಲ ಒತ್ತಡಕ್ಕೆ ಮಣಿದು ಪೊಲೀಸ ಅಧಿಕಾರಿಗಳು ಮಹಿಳಾ ದೂರಿನ ಅನ್ವಯ ಪ್ರಕಾರ ಕೃತ್ಯ ಎಸಗಿದ ವ್ಯಕ್ತಿಯನ್ನು ಬಂಧಿಸಬೇಕಿತ್ತು. ನೊಂದ ಮಹಿಳೆ ಮನೆಯವರ ಮೇಲೆ ಸುಳ್ಳು ಕೇಸ್ ದಾಖಲಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಸಂತ್ರಸ್ತೆ ಮಹಿಳೆಗೆ ಮತ್ತು ಅವರ ಕುಟುಂಬಕ್ಕೆ ಪೋಲಿಸರು ರಕ್ಷಣೆ ನೀಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಯರಗೇರಾ ತಾಲ್ಲೂಕು ಘೋಷಣೆಗಾಗಿ ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ
ಪ್ರತಿಭಟನೆಯಲ್ಲಿ ಜೆಎಂಎಸ್ ಜಿಲ್ಲಾ ಅದ್ಯಕ್ಷರಾದ ಶಕುಂತಲಾ ಪಾಟೀಲ್, ಕಾರ್ಯದರ್ಶಿ ವರಲಕ್ಷ್ಮೀ, ತಾಲ್ಲೂಕಾಧ್ಯಕ್ಷ ಶಕುಂತಲಾ ದೇಸಾಯಿ, ಕಾರ್ಯದರ್ಶಿ ಸುನಂದ ಹಾಗೂ ವನಜಾಕ್ಷಿ, ಸಾಹೇರಾ ಖಾನ್,ಗಿರಿಯಪ್ಪ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.
