ಶಿವಮೊಗ್ಗ, ಕಳ್ಳರು ಸಹ ಹೊಸ ಹೊಸ ದಾರಿಗಳನ್ನು ಕಳ್ಳತನಕ್ಕಾಗಿ ಹುಡುಕುತ್ತಿದ್ದಾರೆ. ಅದರಲ್ಲಿಯು ಸುಲಭದ ದಾರಿಗಳು ಕಳ್ಳತನಕ್ಕೆ ಸಿಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕುತೂಹಲಕಾರಿ ಹಾಗೂ ಆತಂಕಕಾರಿ ಘಟನೆಯೊಂದು ಶಿಕಾರಿಪುದಲ್ಲಿ ನಡೆದಿದೆ.
ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಕ್ರಾಸ್ ಬಳಿಯ ಮನೆಯೊಂದರಲ್ಲಿ ₹6 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹30,000 ನಗದು ಕಳವು ಮಾಡಲಾಗಿದೆ. ವಿಶೇಷ ಅಂದರೆ, ಕಳ್ಳತನಕ್ಕೆ ಬಂದವರು ಹಂಚು ತೆಗೆದಾಗಲಿ, ಹಿಂಬಾಗಿಲು ಒಡೆದಾಗಲಿ, ಮುಂಬಾಗಿಲ ಬೀಗ ಮುರಿದಾಗಲಿ ಕಳ್ಳತನವೆಸಗಿಲ್ಲ.
ಒಂದು ಸುಳ್ಳು ಹೇಳುವ ಮೂಲಕ ಕಳ್ಳತನ ಎಸೆಗಿದ್ದಾರೆ. ಇಲ್ಲಿ ಕಳ್ಳತನವೆಸಗಿದ ಕಳ್ಳರು ಸರ್ಕಾರದಿಂದ ಉಚಿತವಾಗಿ ಸಿಂಟೆಕ್ಸ್ ಟ್ಯಾಂಕ್ ನೀಡುವುದಾಗಿ ಹೇಳಿ ಕಳ್ಳತನ ಎಸಗಿದ್ದಾರೆ.
ಸರ್ಕಾರದಿಂದ ಉಚಿತವಾಗಿ ಸಿಂಟೆಕ್ಸ್ ಬಾಗ್ಯ ನೀಡಲಾಗುತ್ತಿದೆ ಎಂದು ಹೇಳುವ ಮೂಲಕ ಮನೆಯ ಮಾಲೀಕ ಮಹಿಳೆಯನ್ನು ಇಬ್ಬರು ನಂಬಿಸಿದ್ದಾರೆ. ಅದಕ್ಕಾಗಿ ಜಾಗ ಪರಿಶೀಲನೆ ನಡೆಸಬೇಕು ಎಂದು ಒಬ್ಬ ವ್ಯಕ್ತಿ ಮನೆಯಲ್ಲಿದ್ದ ಮಹಿಳೆಯನ್ನು ಮಹಡಿ ಮೇಲೆ ಕರೆದುಕೊಂಡು ಹೋಗಿ ಸಿಂಟೆಕ್ಸ್ ಕುರಿತು ಮಾಹಿತಿ ಕಲೆಹಾಕಲು ಆರಂಭಿಸಿದ್ದ.
ಇತ್ತ ಆತನ ಜೊತೆಗೆ ಬಂದಿದ್ದ ಮತ್ತೊಬ್ಬ ಕಳ್ಳ ಮನೆಯ ಕೆಳಭಾಗದಲ್ಲಿ ಬೀರುವಿನಲ್ಲಿದ್ದ ಮಾಂಗಲ್ಯ ಸರ, 2 ಚೈನ್, ಅವಲಕ್ಕಿ ಸರ, 2 ಉಂಗುರ, ಕಿವಿ ಓಲೆ, ಜುಮುಕಿ ಸೇರಿದಂತೆ ಒಟ್ಟು 120 ಗ್ರಾಂ ಬಂಗಾರದ ಆಭರಣ ಹಾಗೂ ₹30,000 ನಗದನ್ನು ದೋಚಿದ್ದಾನೆ . ಕೃತ್ಯ ಎಸಗಿದ ನಂತರ ಇಬ್ಬರೂ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ.
ಈ ಕುರಿತು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ., ಪೊಲೀಸರು ತನಿಖೆ ಕೈಗೊಂಡಿದ್ದಾರೆ.