ಮಂಗಳೂರು ನಗರದ ಖಾಸಗಿ ಡೀಮ್ಸ್ ಟು ಬಿ ವಿಶ್ವವಿದ್ಯಾನಿಲಯದ ಕುಲಪತಿಗೆ ಸೇರಿದ ವಾಟ್ಸ್ಆ್ಯಪ್ ಅಕೌಂಟ್ ಹ್ಯಾಕ್ ಮಾಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಲಪತಿಯ ಮೊಬೈಲ್‌ಗೆ ಕೊರಿಯರ್ ಕಂಪೆನಿಯಿಂದ ಎಂದು ಅಪರಿಚಿತ ವ್ಯಕ್ತಿಯ ಕರೆ ಬಂದಿದ್ದು, ಬಳಿಕ ಆತ ಲಿಂಕ್ ಕಳುಹಿಸಿದ್ದ. ಅವರು ಲಿಂಕ್ ಕ್ಲಿಕ್ ಮಾಡಿದ ಕೂಡಲೇ ಅವರ ಸಂಪರ್ಕದಲ್ಲಿದ್ದ ಇತರರ ಮೊಬೈಲ್ ನಂಬರ್‌ಗಳಿಗೆ ಹಣಕ್ಕಾಗಿ ಸಂದೇಶ ರವಾನೆಯಾಗಿದೆ. ತತ್‌ಕ್ಷಣ ಎಚ್ಚೆತ್ತ ಅವರು ಈ ಬಗ್ಗೆ ಎಲ್ಲರಿಗೂ ಮಾಹಿತಿ ರವಾನಿಸಿದ ಕಾರಣ ಯಾರೂ ಹಣ ಕಳುಹಿಸಿಲ್ಲ. ಬಳಿಕ ಈ ಬಗ್ಗೆ ಸೆನ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಮಂಗಳೂರು | ಸುರತ್ಕಲ್ ಎನ್‌ಐಟಿಕೆಯಲ್ಲಿ ಕೃಷ್ಣಾ ನದಿ ಜಲಾನಯನ ನಿರ್ವಹಣಾ ಅಧ್ಯಯನಗಳ ಕುರಿತು ಕಾರ್ಯಾಗಾರ
ಇದಕ್ಕೂ ಮೊದಲು ಖಾಸಗಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರೊಬ್ಬರಿಗೂ ಈ ರೀತಿಯ ವಂಚನೆಯ ಕರೆ ಬಂದಿದೆ. ವಾಟ್ಸ್ಆ್ಯಪ್‌ನಲ್ಲಿ ಬಂದ ಸಂದೇಶ ನೋಡಿ ಅವರ ಇಬ್ಬರು ಸ್ನೇಹಿತರು ತಲಾ ರೂ.45 ವರ್ಗಾವಣೆ ಮಾಡಿ ಹಣ ಕಳೆದುಕೊಂಡಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
