ಭಾರತೀಯ ರೈಲ್ವೆಯ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ಊಟದಲ್ಲಿ ಕೀಟ ಪತ್ತೆಯಾಗಿದೆ. ಎಕ್ಸ್‌ನಲ್ಲಿ ಈ ಬಗ್ಗೆ ಪ್ರಯಾಣಿಕರೊಬ್ಬರು ಪೋಸ್ಟ್ ಒಂದನ್ನು ಮಾಡಿದ್ದಾರೆ. ಚಿತ್ರದಲ್ಲಿ ದಾಲ್‌ನಲ್ಲಿ ಕೀಟ ತೇಲುತ್ತಿರುವುದು ಕಂಡುಬಂದಿದೆ. ಸದ್ಯ ಪೋಸ್ಟ್ ವೈರಲ್ ಆಗಿದೆ.
ಭಾರತದ ಪ್ರೀಮಿಯಂ ರೈಲು ಸೇವೆಗಳಲ್ಲಿ ಒಂದೆಂದು ಪರಿಗಣಿಸಲಾದ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯ ಮಾನದಂಡಗಳ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಹಿಂದೆಯೂ ಹಲವು ಬಾರಿ ಜಿರಳೆ, ಇತರೆ ಕೀಟ ಪತ್ತೆಯಾಗಿದೆ. ಹಲಸಿದ ಆಹಾರ ನೀಡಿರುವುದೂ ವರದಿಯಾಗಿದೆ.
ಇದನ್ನು ಓದಿದ್ದೀರಾ? ವಂದೇ ಭಾರತ್‌ಗೆ ಚಾಲನೆ ವೇಳೆ ರೈಲ್ವೇ ಹಳಿ ಮೇಲೆ ಬಿದ್ದ ಬಿಜೆಪಿ ಶಾಸಕಿ
“2025ರ ಜುಲೈ 22ರಂದು ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಮಾಡುವಾಗ ಆಹಾರದಲ್ಲಿ ಕೀಟ ಕಂಡುಬಂದಿದೆ. ರೈಲು ಸಂಖ್ಯೆ 22440 c3 53 ಸೀಟ್ ಸಂಖ್ಯೆ” ಎಂದು ಎಕ್ಸ್‌ನಲ್ಲಿ ಪ್ರಯಾಣಿಕರು ಪೋಸ್ಟ್ ಮಾಡಿದ್ದಾರೆ.
@eCateringIRCTC ,@indianrailway__ @RailMinIndia ,@AshwiniVaishnaw, @IRCTCofficial https://t.co/5n9pSr9UpX pic.twitter.com/09PrxWw5qk
— Hardik panchal (@HARDIK1008) July 22, 2025
ಈ ಪೋಸ್ಟ್‌ಗೆ ರೈಲ್ವೆ ಪ್ರತಿಕ್ರಿಯೆ ನೀಡಿದೆ. “ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ! ದಯವಿಟ್ಟು ವಿವರಗಳು, ಪಿಎನ್‌ಆರ್ ಮತ್ತು ಮೊಬೈಲ್ ಸಂಖ್ಯೆ ಹಂಚಿಕೊಳ್ಳಿ. ತ್ವರಿತ ಪರಿಹಾರಕ್ಕಾಗಿ ನೀವು ನಿಮ್ಮ ಕಳವಳವನ್ನು ನೇರವಾಗಿ https://railmadad.indianrailways.gov.in ನಲ್ಲಿಯೂ ವ್ಯಕ್ತಪಡಿಸಬಹುದು” ಎಂದು ಹೇಳಿದೆ.
ಹಲವು ಮಂದಿ ಶುಚಿತ್ವದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. “ಬೇಸರದ ಸತ್ಯಾಂಶ ಏನೆಂದರೆ ಎಲ್ಲ ಭಾರತೀಯ ರೈಲುಗಳಲ್ಲಿ ಆಹಾರ ಕೆಳಮಟ್ಟದ್ದಾಗಿದೆ ಮತ್ತು ಶುಚಿಯಾಗಿರುವುದಿಲ್ಲ” ಎಂದು ನೆಟ್ಟಿಗರೊಬ್ಬರು ದೂರಿದ್ದಾರೆ. “ನೀವು ಯಾವಗಲೂ ಬರೀ ವಿಷಾಧ ವ್ಯಕ್ತಪಡಿಸುತ್ತೀರಿ. ಪಿಎನ್‌ಆರ್ ನೀಡುವಂತೆ ಕೇಳುತ್ತೀರಿ, ಆಮೇಲೆ ಪ್ರಯಾಣಿಕರನ್ನು ತರಾಟೆಗೆ ತೆಗೆದುಕೊಳ್ಳುತ್ತೀರಿ” ಎಂದು ಇನ್ನೋರ್ವ ನೆಟ್ಟಿಗರು ಆರೋಪಿಸಿದ್ದಾರೆ.
